For Quick Alerts
  ALLOW NOTIFICATIONS  
  For Daily Alerts

  ನಟ ಗಣೇಶ್ ಮನ ಗೆದ್ದ ಸಿದ್ದಗಂಗಾ ಹುಡುಗ

  |

  ಸಿದ್ದಗಂಗಾ ಮಠದ ವಿದ್ಯಾರ್ಥಿಯ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋ ನೋಡಿದ ಪ್ರತಿಯೊಬ್ಬರು ಲೈಕ್ ಒತ್ತದೆ ಮುಂದೆ ಹೋಗುತ್ತಿಲ್ಲ. ಈ ರೀತಿ ಜನರ ಮನ ಗೆದ್ದಿರುವ ಈ ಹುಡುಗ ಈಗ ನಟ ಗಣೇಶ್ ರಿಗೂ ಇಷ್ಟ ಆಗಿದ್ದಾನೆ.

  'ದೊಡ್ಮನೆ' ನಟರ ಮೇಲಿತ್ತು ಸಿದ್ಧಗಂಗಾ ಶ್ರೀಗಳ ಆಶೀರ್ವಾದ

  ''ಅನ್ನ ದೇವರಿಗಿಂತ ಅನ್ಯ ದೇವರಿಲ್ಲ'' ಎನ್ನುವ ಮಾತಿದೆ. ಅದನ್ನು ಅಕ್ಷರಶಃ ಸಿದ್ದಗಂಗಾ ಮಠದಲ್ಲಿ ಪಾಲಿಸಲಾಗುತ್ತಿದೆ. ಅಲ್ಲಿಯೇ ಓದುತ್ತಿರುವ ಒಬ್ಬ ಹುಡುಗ ಅನ್ನದ ಮಹತ್ವವನ್ನು ಸಾರಿದ ವಿಡಿಯೋ ನಿನ್ನೆಯಿಂದ ವೈರಲ್ ಆಗಿದೆ.

  ಶ್ರೀ ಶಿವಕುಮಾರ ಸ್ವಾಮಿಗಳ ಅಗಲಿಕೆಯ ಕಾರಣ ಮಠದಲ್ಲಿ ಲಕ್ಷಾಂತರ ಜನಕ್ಕೆ ಪ್ರಸಾದ ವಿನಿಯೋಗ ಮಾಡಲಾಗಿತ್ತು. ಈ ವೇಳೆ ಊಟವನ್ನು ಚೆಲ್ಲುತ್ತಿದ್ದ ವ್ಯಕ್ತಿಗೆ ಮಠದ ವಿದ್ಯಾರ್ಥಿ ಅನ್ನದ ಬೆಲೆಯನ್ನ ಹೇಳಿ ಕೊಟ್ಟಿದ್ದಾನೆ.

  ವೈರಲ್ ವಿಡಿಯೋ: ಶ್ರೀಗಳು ನಮ್ಮನ್ನಗಲಿಲ್ಲ,ಇಂಥ ಮಕ್ಕಳಲ್ಲಿದ್ದಾರೆ ನೋಡಿ..!

  ಈ ಹುಡುಗನ ವಿಡಿಯೋವನ್ನು ನಟ ಗಣೇಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅನ್ನದ ಬೆಲೆ ಸಿದ್ದಗಂಗಾ ಮಠದ ಮಕ್ಕಳಿಗೆ ಗೊತ್ತು ಎಂದು ಆ ಹುಡುಗನ ಕಾರ್ಯವನ್ನು ಮೆಚ್ಚಿದ್ದಾರೆ. ಗಣೇಶ್ ಮಾತ್ರವಲ್ಲದೆ ನಟ ರವಿಶಂಕರ್ ಗೌಡ ಸಹ ಈ ವಿಡಿಯೋ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ.

  English summary
  Actor Ganesh appreciate Siddaganga Mutt boy who is requesting people to not waste food.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X