For Quick Alerts
  ALLOW NOTIFICATIONS  
  For Daily Alerts

  ಆಟೋರಾಜನಿಗೆ ಇಬ್ಬರು ರಾಣಿಯರು; ಭಾಮಾ, ಚೈತ್ರಾ

  |

  ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಚಿತ್ರ 'ಆಟೋ ರಾಜ' ಮಹೂರ್ತಕ್ಕೆ ಸಿದ್ಧವಾಗಿದೆ. ಇನ್ನೇನು ಸದ್ಯದಲ್ಲೇ ಮುಹೂರ್ತ ಫಿಕ್ಸ್ ಆಗಲಿದೆ. ಈ ಮೊದಲು ಚಿತ್ರದ ಮುಹೂರ್ತ 9 ರಂದು (ಆಗಸ್ಟ್ 09, 2012) ರಂದು ಎಂದು ಹೇಳಲಾಗಿತ್ತಾದರೂ ಅದು ಅನಿವಾರ್ಯ ಕಾರಣದಿಂದ ಮುಂದಕ್ಕೆ ಹೋಗಿದೆ. ಈಗ ಮುಹೂರ್ತದ ದಿನಾಂಕವಿನ್ನೂ ಫಿಕ್ಸ್ ಆಗಿಲ್ಲವಾದರೂ ಈ ತಿಂಗಳ ಅಂತ್ಯದೊಳಗೆ ಗ್ಯಾರಂಟಿ ಎನ್ನಲಾಗಿದೆ.

  ಈ ಚಿತ್ರಕ್ಕೆ ಗಣೇಶ್ ಜೋಡಿಯಾಗಿ ಇಬ್ಬರು ನಾಯಕಿಯರು ನಟಿಸಲಿದ್ದಾರೆ. ಅವರಲ್ಲೊಬ್ಬರಾಗಿ ಭಾಮಾ ಈ ಮೊದಲೇ ಆಯ್ಕೆಯಾಗಿದ್ದರು. 'ಮೊದಲಾ ಸಲ' ಮೂಲಕ ಮೊದಲ ಬಾರಿ ಕನ್ನಡಕ್ಕೆ ಕಾಲಿಟ್ಟಿದ್ದ ಭಾಮಾ, ನಂತರ ಇದೇ ಗೋಲ್ಡನ್ ಸ್ಟಾರ್ ಜೊತೆ 'ಶೈಲೂ' ಚಿತ್ರದಲ್ಲಿ ನಟಿಸಿ ಮನೆಮಾತಾಗಿದ್ದರು. ಈಗ ಮತ್ತೆ ಗಣೇಶ್ ಜೋಡಿಯಾಗಿ ಆಟೋರಾಜಕ್ಕೆ ಬಂದಿದ್ದಾರೆ. ಇನ್ನೊಬ್ಬರು ನಾಯಕಿಯಾಗಿ ಚೈತ್ರಾ ಆಯ್ಕೆಯಾಗಿದ್ದಾರೆ.

  ಆಟೋರಾಜಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ಚೈತ್ರಾ, ಈ ಮೊದಲು ವಿರಾಟ್ ಚಿತ್ರದ ಮೂವರು ನಾಯಕಿಯರಲ್ಲಿ ಒಬ್ಬರಾಗಿದ್ದರು. ಎರಡನೇ ಚಿತ್ರದಲ್ಲೂ ಕನ್ನಡದ ಸ್ಟಾರ್ ನಟರಲ್ಲೊಬ್ಬರ ಚಿತ್ರದಲ್ಲಿ ಅವಕಾಶ ಗಿಟ್ಟಿಸುವ ಮೂಲಕ ಚೈತ್ರಾ ಎಲ್ಲರ ಗಮನಸೆಳೆದಿದ್ದಾರೆ. ಚಿತ್ರದಲ್ಲಿ ಚೈತ್ರಾ ಪಾತ್ರವೇನೆಂಬುದು ಸದ್ಯಕ್ಕೆ ಸಸ್ಪೆನ್ಸ್ ಆಗಿದ್ದರೂ ಗಣೇಶ್ ಜೊತೆ ಚೈತ್ರಾ ರೊಮಾನ್ಸ್ ಇದೆ ಎನ್ನಲಾಗುತ್ತಿದೆ. ಯಾವುದಕ್ಕೂ ಕಾದು ನೋಡು ಅಗತ್ಯವಿದೆ.

  ಗಣೇಶ್ ನಟನೆಯ ರೋಮಿಯೋ ಚಿತ್ರ ಈಗ ತೀರಾ ಯಶಸ್ವಿ ಎನ್ನುವಂತಿಲ್ಲದಿದ್ದರೂ ತಕ್ಕಮಟ್ಟಿಗೆ ಓಡುತ್ತಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಗಣೇಶ್ ಅವರಿಗೆ, ರೋಮಿಯೋ ಚಿತ್ರ ಗೆಲುವಿನ ನಗೆ ವಾಪಸ್ ಕೊಟ್ಟಿದೆ. ಸಕ್ಕರೆ ಚಿತ್ರೀಕರಣದಲ್ಲಿರುವ ಗಣೇಶ್ ಗೆ ವೃತ್ತಿಜೀವನದಲ್ಲಿ ಕೂಡ ಸಕ್ಕರೆ ದೊರೆತಿದೆ. ಇನ್ನು ಆಟೋ ರಾಜನಾಗಿ ಮೆರೆಯುವುದಷ್ಟೇ ಬಾಕಿ. ಆಟೋರಾಜನಾಗಲಿರುವ ಗಣೇಶ್ ಇಬ್ಬರು ನಾಯಕಿಯರೊಂದಿಗೆ ತೆರೆ ಹಂಚಿಕೊಳ್ಳಬೇಕಿದೆ.

  ಈ ಮೊದಲು 'ಕಳ್ಳ ಮಳ್ಳ ಸುಳ್ಳ' ಚಿತ್ರವನ್ನು ನಿರ್ದೇಶಿಸಿ ಯಶಸ್ವಿಯಾಗಿಸಿದ್ದ ನಿರ್ದೇಶಕ ಉದಯ ಪ್ರಕಾಶ್, ಈ ಆಟೋ ರಾಜ ಚಿತ್ರದ ನಿರ್ದೇಶಕರು. ಎಂಡಿ ವಿಶ್ವ ಹಾಗೂ ಗಿರೀಶ್, ಈ ಚಿತ್ರದ ನಿರ್ಮಾಪಕರು. ಈ ಮೊದಲು ಶಂಕರ್ ನಾಗ್-ಗಾಯತ್ರಿ ಜೋಡಿಯಲ್ಲಿ ಬಂದಿದ್ದ ಚಿತ್ರ ಆಟೋ ರಾಜಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ನಿರ್ದೇಶಕ ಉದಯ ಪ್ರಕಾಶ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

  ಹೀಗಾಗಿ ಹಳೆಯ ಆಟೋರಾಜ ಚಿತ್ರಕ್ಕೂ ಇದಕ್ಕೂ ಹೋಲಿಕೆಗೆ ಯಾವುದೇ ಆಸ್ಪದವಿಲ್ಲ. ಜೊತೆಗೆ ಹೊಸ ಆಟೋ ರಾಜ ಹೇಗಿರಬಹುದು ಎಂಬ ಕುತೂಹಲ ಸಹವಾಗಿ ಎಲ್ಲರಲ್ಲಿ ಮೂಡಿದೆ. ಗಣೇಶ್ ಅವರ ಆಟೋ ರಾಜ ಚಿತ್ರಕ್ಕಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ರೋಮಿಯೋ ಚಿತ್ರದ ಮೂಲಕ ಕಳೆದು ಹೋಗಿದ್ದ ತಮ್ಮ ಇಮೇಜನ್ನು ಮತ್ತೆ ಗಳಿಸಿಕೊಂಡಿರುವ ಗಣೇಶ್, ಸಕ್ಕರೆ ಹಾಗೂ ಆಟೋರಾಜನ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Chaitra, the movie 'Virat' fame, selected for Golden Star Ganesh's upcoming movie 'Auto Raja. Bhama, Modala Sala movie fame has already selected for this as Ganesh pair. 'Kalla Malla Sulla' fame Udaya Prakash directs this and Producers are Girish Naik and MD Vishwa. 
 
  Tuesday, August 14, 2012, 17:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X