For Quick Alerts
  ALLOW NOTIFICATIONS  
  For Daily Alerts

  ಸ್ಲೊವೇನಿಯಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆ ಏನು ಕೆಲಸ?

  By Harshitha
  |

  ಗೋಲ್ಡನ್ ಸ್ಟಾರ್ ಗಣೇಶ್ ಸ್ಲೊವೇನಿಯಾಗೆ ಹಾರುತ್ತಿದ್ದಾರೆ. ಅಲ್ಲಿ, ಗಣೇಶ್ ಗೆ ಏನು ಕೆಲಸ ಅಂತ ಕೇಳಿದ್ರೆ, ಉತ್ತರ 'ಶೂಟಿಂಗ್ ಸ್ವಾಮಿ!'.

  ಹೌದು, 'ಮುಂಗಾರು ಮಳೆ-2' ಚಿತ್ರದಲ್ಲಿ ಗಣೇಶ್ ಅಭಿನಯಿಸುತ್ತಿರುವ ವಿಷಯ ನಿಮಗೆ ಗೊತ್ತೇಯಿದೆ. ಚಿತ್ರದ ಸಾಂಗ್ ಶೂಟಿಂಗ್ ನಿಮಿತ್ತ ಸ್ಲೊವೇನಿಯಾಗೆ (ಯೂರೋಪ್) ಫ್ಲೈಟ್ ಹತ್ತಲಿದ್ದಾರೆ.

  ಇಂಟ್ರೆಸ್ಟಿಂಗ್ ಅಂದ್ರೆ, ಗಣೇಶ್ ಜೊತೆ ನಟಿ ಐಂದ್ರಿತಾ ರೇ ಕೂಡ ಸ್ಲೊವೇನಿಯಾಗೆ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದಾರೆ. 'ಮುಂಗಾರು ಮಳೆ-2' ಚಿತ್ರದಲ್ಲಿ ಗಣೇಶ್ ಜೊತೆ ಐಂದ್ರಿತಾ ರೇ ಕೂಡ ಡ್ಯುಯೆಟ್ ಹಾಡಲಿದ್ದಾರೆ ಅಂತ ಕೆಲವೇ ಹೊತ್ತಿನ ಹಿಂದೆಯಷ್ಟೇ ಸುದ್ದಿ ಬ್ರೇಕ್ ಆಗಿತ್ತು. ಇದೀಗ ಆ ಸುದ್ದಿ ಸ್ಲೊವೇನಿಯಾ ಶೂಟಿಂಗ್ ಮೂಲಕ ಖಾತ್ರಿ ಆಗಿದೆ. ಅಲ್ಲಿಗೆ, ಆಂಡಿಗೆ 'ಮುಂಗಾರು ಮಳೆ-2' ಚಿತ್ರದಲ್ಲಿ ನಾಯಕಿ ಸ್ಥಾನ ಸಿಕ್ಕಿದ ಹಾಗೆ ಲೆಕ್ಕ. ['ಮುಂಗಾರು ಮಳೆ 2' ನಲ್ಲಿ ಗಣಿ ಜೊತೆ ಐಂದ್ರಿತಾ ಡ್ಯುಯೆಟ್]

  ಅಂದ್ಹಾಗೆ, ಗಣೇಶ್ ಜೊತೆ 'ಮುಂಗಾರು ಮಳೆ-2' ಚಿತ್ರದಲ್ಲಿ ಜೋಡಿ ಆಗಿರುವುದು ನೇಹಾ ಶೆಟ್ಟಿ. ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಶಶಾಂಕ್ ಈ ಚಿತ್ರದ ನಿರ್ದೇಶಕ. ಅಂದ್ಹಾಗೆ, ಸ್ಲೊವೇನಿಯಾಗೆ ಗಣೇಶ್ ಹಾರುವ ದಿನಾಂಕ ಇನ್ನೂ ನಿಗದಿ ಆಗಿಲ್ಲ.

  English summary
  Golden Star Ganesh is all set to fly to Slovenia for 'Mungaru Male-2' song shooting. Shashank is directing this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X