»   » ಗಣೇಶ್ ಕಾಸರಗೋಡು ಮತ್ತೊಂದು ವಿಭಿನ್ನ ಕೃತಿ

ಗಣೇಶ್ ಕಾಸರಗೋಡು ಮತ್ತೊಂದು ವಿಭಿನ್ನ ಕೃತಿ

Posted By:
Subscribe to Filmibeat Kannada
Journalist Ganesh Kasargod
ಪತ್ರಕರ್ತ ಗಣೇಶ್ ಕಾಸರಗೋಡು ಅವರ ಮತ್ತೊಂದು ಕೃತಿ ಲೋಕಾರ್ಪಣೆಯಾಗಿದೆ. ಈ ಬಾರಿ ಅವರು ಕನ್ನಡ ಚಿತ್ರಗಳ ನೂರಾರು ನೆನಪುಗಳನ್ನು ಹೆಕ್ಕಿ ತೆಗೆದಿದ್ದಾರೆ. ತಮ್ಮ ಕೃತಿಯಲ್ಲಿ ಇವೆಲ್ಲವನ್ನೂ ಹಂಚಿಕೊಂಡಿದ್ದಾರೆ. ಪುಸ್ತಕದ ಹೆಸರು "ನೂರು ಚಿತ್ರಗಳು ನೂರಾರು ನೆನಪುಗಳು".

ಭಾರತೀಯ ಚಿತ್ರರಂಗ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಅವರು 100 ಚಿತ್ರಗಳ ನೆನಪಿನ ಲಹರಿ ಹರಿಸಿರುವುದು ವಿಶೇಷ. ಈಗಾಗಲೆ ಅವರು ಸಿನಿಮಾ ಬಗ್ಗೆ ಬರೆದ ಸಾಕಷ್ಟು ಕೃತಿಗಳು ಬಿಸಿಬಿಸಿ ದೋಸೆಯಂತೆ ಬಿಕರಿಯಾಗಿವೆ.

ಈಗ ಹೊರತಂದಿರುವ 'ನೂರು ಚಿತ್ರಗಳು ನೂರಾರು ನೆನಪುಗಳು' ಕೃತಿಯಲ್ಲಿ ಅವರದೇ ಆಯ್ಕೆಯ ನೂರು ಚಿತ್ರಗಳ ಬಗ್ಗೆ ಮಾಹಿತಿ ಇದೆ. ಜೊತೆಗೆ ಆಸಕ್ತಿದಾಯಕ ಸಂಗತಿಗಳು, ಆ ಚಿತ್ರದ ಬಗ್ಗೆ ಇದುವರೆಗೂ ಜನಸಾಮಾನ್ಯರಿಗೆ ಗೊತ್ತಿಲ್ಲದ, ಕೆಲವೇ ಕೆಲವರಿಗಷ್ಟೇ ಗೊತ್ತಿರುವ ಸಂಗತಿಗಳು ಇವೆ.

ಸಾಮಾನ್ಯವಾಗಿ ಒಂದು ಚಿತ್ರ ಎಂದರೇನೇ ನೂರಾರು ನೆನಪುಗಳಿರುತ್ತವೆ. ಅಂತಹದ್ದರಲ್ಲಿ ನೂರು ಚಿತ್ರಗಳ ನೆನಪುಗಳು ಎಂದರೆ ಹೇಗಿರಬೇಡ. ಈ ಹಿಂದೆ ಗಣೇಶ್ ಅವರು ಹೊರತಂದ 'ಆಫ್ ದಿ ರೆಕಾರ್ಡ್' , 'ನೆನಪಿನಂಗಳದಲ್ಲಿ ಶಂಕರನಾಗ್' ಎಂಬ ಕೃತಿಗಳು ಕನ್ನಡ ಚಿತ್ರಪ್ರೇಮಿಗಳನ್ನು ಬಹಳವಾಗಿ ಕಾಡಿವೆ.

ಈ ಹಿಂದೆ ನಿಮ್ಮ ನೆಚ್ಚಿನ ಆನ್ ಲೈನ್ ಪತ್ರಿಕೆ ಒನ್ಇಂಡಿಯಾ ಕನ್ನಡದಲ್ಲೂ ಗಣೇಶ್ ಕಾಸರಗೋಡು ಅವರ ಹಲವಾರು ಲೇಖನಗಳು ಪ್ರಕಟವಾಗಿದ್ದವು. ಕೆಲವು ಕೊಂಡಿಗಳು ಇಲ್ಲಿವೆ ಓದಿ ಆನಂದಿಸಿ. ಗಣೇಶ್ ಅವರ ಪ್ರಖರ ದೃಷ್ಟಿಕೋನಕ್ಕೆ ಕನ್ನಡಿ ಹಿಡಿಯುತ್ತವೆ ಈ ಲೇಖನಗಳು. (ಒನ್ಇಂಡಿಯಾ ಕನ್ನಡ)

ತಾಕತ್ತಿದ್ರೆ ರಾಜ್‌ಕುಮಾರ್ ವಿರುದ್ಧ ಬರೀರೋ ಬಾಸ್ಟರ್ಡ್ಸ್!
ಅರುವತ್ತೊಂಬತ್ತರ ಕುಳ್ಳ ದ್ವಾರಕೀಶ್ ಲವ್ ಎಪಿಸೋಡು!

English summary
Kannada cinema journalist Ganesh Kasargod latest book 'Nooru Chitragalu Nooraru Nenapugalu' (100 films and 100 memories) released. He narrated some of the interesting episodes from the movies that are unknown or very less people know of. In that way the book is very special.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada