»   » ಕನ್ನಡದಲ್ಲಿ ಮಾತ್ರ ಅಲ್ಲ, ಫ್ರೆಂಚ್ ಭಾಷೆಯಲ್ಲೂ 'ಜೂಮ್' ಮಾಡಿ ನೋಡಿ

ಕನ್ನಡದಲ್ಲಿ ಮಾತ್ರ ಅಲ್ಲ, ಫ್ರೆಂಚ್ ಭಾಷೆಯಲ್ಲೂ 'ಜೂಮ್' ಮಾಡಿ ನೋಡಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಒಂದಾಗಿ ಕಾಣಿಸಿಕೊಂಡಿರುವ 'ಜೂಮ್' ಇಂದು (ಜುಲೈ 1) ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸುತ್ತಿದೆ.

ವಿಶೇಷವಾಗಿ 'ಕೇಪ್ ಟೌನ್', ಜಾಂಬಿಯಾ, ಘಾನ, ಈಜಿಪ್ಟ್, ಉಗಾಂಡ, ಕೀನ್ಯಾ, ರವಾಂಡ, ನೈಜೀರಿಯಾ ಸೇರಿದಂತೆ ಸುಮಾರು 11 ದೇಶಗಳಲ್ಲಿ ಏಕಕಾಲಕ್ಕೆ 'ಜೂಮ್' ತೆರೆ ಕಾಣುತ್ತಿದೆ.[ಆಫ್ರಿಕಾದಲ್ಲೂ ಫುಲ್ 'ಜೂಮ್' ಆಗುತ್ತಿದ್ದಾರೆ ಗಣೇಶ್-ರಾಧಿಕಾ]


Ganesh's 'Zoom' to be dubbed in French, Korean Languages

ಅಂದಹಾಗೆ ಚಿತ್ರದ ಇನ್ನೊಂದು ವಿಶೇಷತೆ ಏನಪ್ಪಾ ಅಂದ್ರೆ ಫ್ರೆಂಚ್, ಕೊರಿಯನ್ ಮತ್ತು ಮಲೇಷ್ಯಾ ಭಾಷೆಗೆ ಈ ಸಿನಿಮಾ ಡಬ್ ಆಗುತ್ತಿದೆ. ಡಬ್ ಆಗಿರೋ ವರ್ಷನ್ ಜುಲೈ ಎರಡನೇ ವಾರದಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಡಬ್ಬಿಂಗ್ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲೇ ಪೂರ್ಣಗೊಳ್ಳಲಿದೆ.


ನಿರ್ದೇಶಕ ಪ್ರಶಾಂತ್ ರಾಜ್ ಆಕ್ಷನ್-ಕಟ್ ಹೇಳಿರುವ ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಎಸ್.ಎಸ್ ತಮನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.[ಟ್ರೈಲರ್ ಹೇಗಿದೆ.? ಒಮ್ಮೆ 'Zooಮ್' ಮಾಡಿ ನೋಡಿ ಹೇಳಿ...]


Ganesh's 'Zoom' to be dubbed in French, Korean Languages

ಈ ಚಿತ್ರದಲ್ಲಿ ನಟಿ ರಾಧಿಕಾ ಪಂಡಿತ್ ಅವರು ಡಿಫರೆಂಟ್ ಲುಕ್ ನಲ್ಲಿ ಮಿಂಚಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳು ಕೂಡ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬೆಂಗಳೂರಿನ ಮುಖ್ಯ ಚಿತ್ರಮಂದಿರ ಅನುಪಮದಲ್ಲಿ 'ಜೂಮ್' ಭರ್ಜರಿಯಾಗಿ ತೆರೆ ಕಂಡಿದ್ದು, ಥಿಯೇಟರ್ ಮುಂದೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಾಮಾಚರಣೆ ನಡೆಸುತ್ತಿದ್ದಾರೆ.

English summary
Actor Ganesh and Actress Radhika Pandith starrer Kannada Movie 'Zoom' is all set to be released on the 01st of July. The film will be releasing in 11 states as well as many countries simultaneously. And it is all set to be dubbed in French, Korean and Malay languages. The movie is directed by Prashanth Raj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada