For Quick Alerts
  ALLOW NOTIFICATIONS  
  For Daily Alerts

  ದೂರದಿಂದ ಬಂದ 'ಸುಂದರಾಂಗ ಜಾಣ' ಆದ ಗೋಲ್ಡನ್ ಸ್ಟಾರ್ ಗಣೇಶ್.!

  By Harshitha
  |

  1971 ರಲ್ಲಿ ತೆರೆಕಂಡ 'ಸಂಶಯ ಫಲ' ಚಿತ್ರದ ಸೂಪರ್ ಡ್ಯೂಪರ್ ಹಿಟ್ ಹಾಡು 'ದೂರದಿಂದ ಬಂದಂಥ ಸುಂದರಾಂಗ ಜಾಣ' ನಿಮಗೆ ನೆನಪಿದೆ ತಾನೆ?

  ಎ.ಆರ್.ಈಶ್ವರಿ ಗಾನಸುಧೆಯಲ್ಲಿ ಮೂಡಿಬಂದ ಈ ಹಾಡನ್ನ ಇಂದು ನಾವು ನಿಮಗೆ ನೆನಪು ಮಾಡಲು ಕಾರಣ ಗೋಲ್ಡನ್ ಸ್ಟಾರ್ ಗಣೇಶ್.!

  ಅರೇ.., 'ಮಳೆ ಹುಡುಗ' ಗಣೇಶ್ ಗೂ 'ದೂರದಿಂದ ಬಂದಂಥ ಸುಂದರಾಂಗ ಜಾಣ' ಕ್ಯಾಬರೇ ಹಾಡಿಗೂ ಏನ್ ಸಂಬಂಧ ಅಂತ ತಲೆಗೆ ಹುಳ ಬಿಟ್ಟುಕೊಳ್ಳುವ ಮುನ್ನ ಪೂರ ಮ್ಯಾಟರ್ ಓದಿ.....

  'ಸುಂದರಾಂಗ ಜಾಣ' ಚಿತ್ರದಲ್ಲಿ ಗಣೇಶ್.!

  'ಸುಂದರಾಂಗ ಜಾಣ' ಚಿತ್ರದಲ್ಲಿ ಗಣೇಶ್.!

  ಇದೀಗಷ್ಟೇ ಬಂದಿರುವ ಮಾಹಿತಿ ಪ್ರಕಾರ, ಗಣೇಶ್ ರವರ ಚಿತ್ರಕ್ಕೆ 'ಸುಂದರಾಂಗ ಜಾಣ' ಎಂಬ ಟೈಟಲ್ ಇಡಲಾಗಿದೆ.

  ಹೊಸ ಚಿತ್ರ?

  ಹೊಸ ಚಿತ್ರ?

  ಗಣೇಶ್ ಚಿತ್ರಕ್ಕೆ 'ಸುಂದರಾಂಗ ಜಾಣ' ಎಂಬ ಶೀರ್ಷಿಕೆ ಇಡಲಾಗಿದೆ ಅಂದಕೂಡಲೆ ಇದು ಇನ್ನೂ ಸೆಟ್ಟೇರದ ಹೊಸ ಸಿನಿಮಾ ಇರಬಹುದು ಅಂದುಕೊಳ್ಳಬೇಡಿ. ಈಗಾಗಲೇ ಗಣೇಶ್ ನಟಿಸಿರುವ 'ಗಂಡು ಎಂದರೆ ಗಂಡು' ಎಂಬ ಚಿತ್ರಕ್ಕೆ ಶೀರ್ಷಿಕೆ ಬದಲಾವಣೆ ಮಾಡಿ ಇದೀಗ 'ಸುಂದರಾಂಗ ಜಾಣ' ಅಂತ ಟೈಟಲ್ ಇಡಲಾಗಿದೆ. [ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಶಿವಣ್ಣ ನಟಿಸ್ತಾರಾ?]

  ಸಮಾಧಾನ ತರದ ಟೈಟಲ್?

  ಸಮಾಧಾನ ತರದ ಟೈಟಲ್?

  ಗಣೇಶ್ ನಟನೆಯ ರಮೇಶ್ ಅರವಿಂದ್ ನಿರ್ದೇಶನದ ಚಿತ್ರಕ್ಕೆ ಮೊದಲು ಬ್ಲಾಕ್ ಬಸ್ಟರ್ 'ಬಹದ್ದೂರ್ ಗಂಡು' ಚಿತ್ರದ ಸೂಪರ್ ಹಿಟ್ ಹಾಡು 'ಗಂಡು ಎಂದರೆ ಗಂಡು' ಹಾಡಿನ ಸಾಲನ್ನ ಟೈಟಲ್ ಆಗಿ ಇಡಲಾಗಿತ್ತು. ಆದ್ರೆ, ಚಿತ್ರದ ಚಿತ್ರೀಕರಣ ಮುಗಿಯುವ ಹೊತ್ತಿಗೆ, ಚಿತ್ರತಂಡಕ್ಕೆ ಈ ಶೀರ್ಷಿಕೆ ಸಮಾಧಾನ ತಂದಿಲ್ಲ. ಹೀಗಾಗಿ ಟೈಟಲ್ ಬದಲಾವಣೆ ಮಾಡಲಾಗಿದೆ. [ರಮೇಶ್-ಗಣೇಶ್ ಕಾಂಬಿನೇಷನ್ ನ ಚಿತ್ರದ ಹೆಸರೇನು ಗೊತ್ತಾ?]

  ತೆಲುಗಿನ ರೀಮೇಕ್ ಸಿನಿಮಾ.!

  ತೆಲುಗಿನ ರೀಮೇಕ್ ಸಿನಿಮಾ.!

  ತೆಲುಗಿನ 'ಭಲೇ ಭಲೇ ಮಗಾಡಿವೋಯ್' ಚಿತ್ರದ ರೀಮೇಕ್ ಈ 'ಸುಂದರಾಂಗ ಜಾಣ'. ಪಕ್ಕಾ ಫ್ಯಾಮಿಲಿ ಎಂಟರ್ ಟೇನರ್ ಆಗಿರುವ ಈ ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹಾಕಿದ್ದಾರೆ. ['ಗಂಡು ಎಂದರೆ ಗಂಡು' ಶೂಟಿಂಗ್ ಶುರು ಗುರು!]

  ಗಣೇಶ್ ಜೊತೆ ಶಾನ್ವಿ

  ಗಣೇಶ್ ಜೊತೆ ಶಾನ್ವಿ

  'ಸುಂದರಾಂಗ ಜಾಣ' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆ 'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ ಶ್ರೀವಾಸ್ತವ ಜೋಡಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ಚಿತ್ರೀಕರಣ ಮುಗಿದಿದೆ

  ಚಿತ್ರೀಕರಣ ಮುಗಿದಿದೆ

  ಈಗಾಗಲೇ 'ಸುಂದರಾಂಗ ಜಾಣ' ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಆಡಿಯೋ ರಿಲೀಸ್ ಆಗಲಿದೆ.

  English summary
  According to the latest buzz, Golden Star Ganesh starrer Ramesh Aravind Directorial Kannada Movie 'Gandu Endare Gandu' title has been changed to 'Sundaranga Jaana'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X