»   » ದಾಖಲೆ ಬೆಲೆಗೆ ಮಾರಾಟ ಆಗಿದೆ 'ಮುಗುಳು ನಗೆ' ಆಡಿಯೋ ರೈಟ್ಸ್

ದಾಖಲೆ ಬೆಲೆಗೆ ಮಾರಾಟ ಆಗಿದೆ 'ಮುಗುಳು ನಗೆ' ಆಡಿಯೋ ರೈಟ್ಸ್

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ರೆಡಿ ಆಗುತ್ತಿರುವ ಹ್ಯಾಟ್ರಿಕ್ ಸಿನಿಮಾ 'ಮುಗುಳು ನಗೆ' ಬಿಡುಗಡೆಗೂ ಮುನ್ನವೇ ಉತ್ತಮ ಬಿಸಿನೆಸ್ ಮಾಡಿದೆ.

ಸಂಗೀತ ಪ್ರಿಯರು ಕಾತರದಿಂದ ಕಾಯುತ್ತಿರುವ 'ಮುಗುಳು ನಗೆ' ಚಿತ್ರದ ಆಡಿಯೋ ಜುಲೈ 12 ರಂದು ಬಿಡುಗಡೆ ಆಗಲಿದೆ. ಮೂಲಗಳ ಪ್ರಕಾರ, 'ಮುಗುಳು ನಗೆ' ಚಿತ್ರದ ಆಡಿಯೋ ಹಕ್ಕುಗಳು ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ. ಮುಂದೆ ಓದಿರಿ...

ದಾಖಲೆ ಬೆಲೆಗೆ ಸೇಲ್ ಆದ 'ಮುಗುಳು ನಗೆ' ಆಡಿಯೋ

ಗಣೇಶ್ ಅಭಿನಯಿಸಿರುವ 'ಮುಗುಳು ನಗೆ' ಚಿತ್ರದ ಆಡಿಯೋ ಹಕ್ಕುಗಳು 'ಡಿ-ಬೀಟ್ಸ್' ಸಂಸ್ಥೆ ಪಾಲಾಗಿದೆ. ಅದು ದಾಖಲೆ ಬೆಲೆ ನೀಡಿದ ಮೇಲೆ.!

ದಾಖಲೆ ಮೊತ್ತ ಎಷ್ಟು.?

ಅತಿ ಹೆಚ್ಚು ಬೆಲೆ ನೀಡಿ 'ಡಿ-ಬೀಟ್ಸ್' ಸಂಸ್ಥೆ 'ಮುಗುಳು ನಗೆ' ಚಿತ್ರದ ಆಡಿಯೋ ಹಕ್ಕು ಖರೀದಿಸಿದೆ ಎಂಬ ಸುದ್ದಿ ಹೊರಬಿದ್ದಿದೆ ಹೊರತು ಎಷ್ಟು ಮೊತ್ತ ನೀಡಿದ್ದಾರೆ ಎಂಬುದು ಬಹಿರಂಗ ಆಗಿಲ್ಲ.

'ಜಿ.ಎಸ್.ಟಿ' ಹಾಡು ಹಿಟ್ ಆಗಿದೆ

'ಮುಗುಳು ನಗೆ' ಚಿತ್ರದ 'ಹೊಡಿ ಒಂಬತ್..' ಹಾಡಿನ ಧಾಟಿಯಲ್ಲಿ 'ಜಿ.ಎಸ್.ಟಿ'ಗೆ ಸಂಬಂಧಪಟ್ಟ ಹಾಗೆ ಯೋಗರಾಜ್ ಭಟ್ ರಚಿಸಿರುವ ಗಣೇಶ್, ದುನಿಯಾ ವಿಜಯ್, ವಿ.ಹರಿಕೃಷ್ಣ ಹಾಡಿರುವ 'ಜಿ.ಎಸ್.ಟಿ' ಸಾಂಗ್ ಈಗಾಗಲೇ ಹಿಟ್ ಆಗಿದೆ. ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ 'ಮುಗುಳು ನಗೆ' ಚಿತ್ರದ ಹಾಡುಗಳನ್ನ ಕೇಳಲು ಸಂಗೀತ ಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ.

'ಮುಗುಳು ನಗೆ' ಬಿಡುಗಡೆ ಯಾವಾಗ.?

ಜುಲೈ 12 ರಂದು 'ಮುಗುಳು ನಗೆ' ಚಿತ್ರದ ಆಡಿಯೋ ರಿಲೀಸ್ ಆಗಲಿದೆ. ಆಗಸ್ಟ್ ಮೊದಲ ವಾರದಲ್ಲಿ 'ಮುಗುಳು ನಗೆ' ರಿಲೀಸ್ ಆಗುವ ಸಾಧ್ಯತೆ ಇದೆ.

English summary
Ganesh starrer 'Mugulu Nage' audio rights sold to D-Beats for record price

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada