»   » ಮೇ 26 ರಂದು ಗಾಂಧಿನಗರದಲ್ಲಿ ಸಿಡಿಯಲಿದೆ 'ಗಣೇಶ' ಪಟಾಕಿ

ಮೇ 26 ರಂದು ಗಾಂಧಿನಗರದಲ್ಲಿ ಸಿಡಿಯಲಿದೆ 'ಗಣೇಶ' ಪಟಾಕಿ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಖಾಕಿ ಧರಿಸಿ, ಸೂಪರ್ ಕಾಪ್ ಆಗಿ ಅಭಿನಯಿಸಿರುವ 'ಪಟಾಕಿ' ಸಿನಿಮಾ ಸೆನ್ಸಾರ್ ಅಂಗಳದಿಂದ ಪಾಸ್ ಆಗಿದೆ. ಸೆನ್ಸಾರ್ ಬೋರ್ಡ್ ನಿಂದ 'U/A' ಸರ್ಟಿಫಿಕೇಟ್ ಪಡೆದಿರುವ 'ಪಟಾಕಿ' ಸಿನಿಮಾ ಮುಂದಿನ ಶುಕ್ರವಾರ ತೆರೆಗೆ ಬರಲಿದೆ. ಅಲ್ಲಿಗೆ, ಮೇ 26 ರಿಂದ ಗಾಂಧಿನಗರದಲ್ಲಿ ಗಣೇಶ 'ಪಟಾಕಿ'ಯದ್ದೇ ಸೌಂಡು.!

ಈಗಾಗಲೇ ರಿಲೀಸ್ ಆಗಿರುವ 'ಪಟಾಕಿ' ಚಿತ್ರದ ಟೀಸರ್ ಹಾಗೂ ಟ್ರೈಲರ್ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಖಾಕಿ ಖದರ್ ನಲ್ಲಿ ಮಿಂಚಿರುವ ಗಣೇಶ್ ಈ ಬಾರಿ ಕ್ಲಾಸ್ ಆಡಿಯನ್ಸ್ ನ ಮಾತ್ರ ಅಲ್ಲ, ಮಾಸ್ ಪ್ರೇಕ್ಷಕರನ್ನೂ ಸೆಳೆಯುವಲ್ಲಿ ಯಶಸ್ವಿ ಆಗಿದ್ದಾರೆ.

Ganesh starrer 'Pataki' movie gets U/A Censor Certificate

ಮಂಜು ಸ್ವರಾಜ್ ನಿರ್ದೇಶನ ಇರುವ 'ಪಟಾಕಿ' ಸಿನಿಮಾದಲ್ಲಿ ರನ್ಯ ರಾವ್, ಪ್ರಿಯಾಂಕಾ, ಸಾಯಿ ಕುಮಾರ್, ಸಾಧು ಕೋಕಿಲ, ಆಶೀಶ್ ವಿದ್ಯಾರ್ಥಿ ರಂತಹ ದೊಡ್ಡ ತಾರಾಬಳಗ ಇದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಯಾವುದಕ್ಕೂ ಕಾಂಪ್ರೊಮೈಸ್ ಆಗದ ಹಾಗೆ, ಅದ್ಧೂರಿಯಾಗಿ 'ಪಟಾಕಿ' ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ ಎಸ್.ವಿ.ಬಾಬು.

ಮೇ 26 ರಂದು 'ಪಟಾಕಿ' ಹಿಡಿದು ತೆರೆ ಮೇಲೆ ಗಣೇಶ್ ಸಂಭ್ರಮಿಸುವುದು ಪಕ್ಕಾ. ಅವರನ್ನ ಬರಮಾಡಿಕೊಳ್ಳಲು ನೀವು ರೆಡಿನಾ.?

English summary
Golden Star Ganesh starrer 'Pataki' movie gets U/A Certificate from Censor Board. 'Pataki' releasing on May 26th

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada