»   » ರಮೇಶ್-ಗಣೇಶ್ 'ಸುಂದರಾಂಗ ಜಾಣ' ಚಿತ್ರದ ಸೂಪರ್ ಸ್ಪೆಷಾಲಿಟಿಗಳು

ರಮೇಶ್-ಗಣೇಶ್ 'ಸುಂದರಾಂಗ ಜಾಣ' ಚಿತ್ರದ ಸೂಪರ್ ಸ್ಪೆಷಾಲಿಟಿಗಳು

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಗೆ ನಟ ರಮೇಶ್ ಅರವಿಂದ್ ಆಕ್ಷನ್ ಕಟ್ ಹೇಳಿರುವ ಸಿನಿಮಾ 'ಸುಂದರಾಂಗ ಜಾಣ'. ಡಿಸೆಂಬರ್ 23... ಅಂದ್ರೆ ಮುಂದಿನ ಶುಕ್ರವಾರ 'ಸುಂದರಾಂಗ ಜಾಣ' ಚಿತ್ರ ಅದ್ಧೂರಿಯಾಗಿ ತೆರೆಗೆ ಬರಲಿದೆ.

ಎಲ್ಲರಿಗೂ ಗೊತ್ತಿರುವ ಹಾಗೆ, 'ಸುಂದರಾಂಗ ಜಾಣ' ಚಿತ್ರ ತೆಲುಗಿನ 'ಭಲೇ ಭಲೇ ಮಗಾಡಿವೋಯ್' ಸಿನಿಮಾದ ರೀಮೇಕ್. ಆದರೂ, 'ಸುಂದರಾಂಗ ಜಾಣ' ಚಿತ್ರದಲ್ಲಿ ಇರುವ ವಿಶೇಷತೆಗಳು ಒಂದೆರಡಲ್ಲ. ಆ ಎಲ್ಲಾ ವಿಶೇಷತೆಗಳ ಸಂಪೂರ್ಣ ವರದಿ ಇಲ್ಲಿದೆ. ಓದಿರಿ....

'ಜಾಣ ಪೆದ್ದ'ನ ಕಥೆ

ಹೆಸರಿಗೆ ಮಾತ್ರ 'ಸುಂದರಾಂಗ ಜಾಣ' ಆಗಿದ್ದರೂ, ಹೀರೋ ತಲೆಯ ಮೆಮರಿ ಝೀರೋ ಜಿಬಿ. ಬುದ್ಧಿವಂತಿಕೆಯಲ್ಲೀತ ಝೀರೋ ಆದರೂ, ಪ್ರೀತಿಯ ವಿಚಾರಕ್ಕೆ ಬಂದರೆ ಸೂಪರ್ ಹೀರೋ.! [ದೂರದಿಂದ ಬಂದ 'ಸುಂದರಾಂಗ ಜಾಣ' ಆದ ಗೋಲ್ಡನ್ ಸ್ಟಾರ್ ಗಣೇಶ್.!]

ಪೂರ್ತಿ ರೀಮೇಕ್ ಅಲ್ಲ.!

ತೆಲುಗಿನ ಸೂಪರ್ ಹಿಟ್ 'ಭಲೇ ಭಲೇ ಮಗಾಡಿವೋಯ್' ಚಿತ್ರದ ರೀಮೇಕ್ ಆಗಿದ್ದರೂ, 'ಸುಂದರಾಂಗ ಜಾಣ'ನನ್ನ ಮರುಸೃಷ್ಟಿಸಲಾಗಿದೆ. ಮೂಲ ಚಿತ್ರದ ಪ್ರಧಾನ ಅಂಶಗಳನ್ನಷ್ಟೇ ಬಳಸಿಕೊಂಡು ತಮ್ಮದೇ ಶೈಲಿಯಲ್ಲಿ ಚಿತ್ರವನ್ನ ರೆಡಿ ಮಾಡಿದ್ದಾರೆ ರಮೇಶ್ ಅರವಿಂದ್.

ರಮೇಶ್-ಗಣೇಶ್ ಡಬಲ್ ಧಮಾಕಾ.!

'ಸುಂದರಾಂಗ ಜಾಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆಗಳು ಎನಿಸಿಕೊಂಡಿರುವ ಇಬ್ಬರು ಹೀರೋಗಳಾದ ರಮೇಶ್-ಗಣೇಶ್ ಒಂದಾಗಿದ್ದಾರೆ. ನಟನೆ ಮತ್ತು ನಿರ್ದೇಶನದಲ್ಲಿ ಗ್ಲೋಬಲ್ ಲೆವೆಲ್ ನಲ್ಲಿ ಹೆಸರು ಮಾಡಿರುವ ರಮೇಶ್ ಅರವಿಂದ್, ಗೋಲ್ಡನ್ ಸ್ಟಾರ್ ಗಣೇಶ್ ಗಾಗಿ ನಿರ್ದೇಶನ ಮಾಡಿರುವ ಚಿತ್ರ ಇದು.

'ಮುಂಗಾರು' ನಾಯಕರು.!

ಗಣೇಶ್ ಪಾಲಿಗೆ 'ಮುಂಗಾರು ಮಳೆ' ಹೇಗೆ ಅಭೂತಪೂರ್ವ ಯಶಸ್ಸನ್ನು ತಂದು ಕೊಟ್ಟಿತ್ತೋ, ಹಾಗೇ ರಮೇಶ್ ವೃತ್ತಿಜೀವನಕ್ಕೂ ದೊಡ್ಡ ಟರ್ನಿಂಗ್ ಪಾಯಿಂಟ್ ಕೊಟ್ಟಿದ್ದು 'ಮುಂಗಾರಿನ ಮಿಂಚು'. 'ಮುಂಗಾರು' ನಾಯಕರು ಮೊಟ್ಟಮೊದಲ ಬಾರಿಗೆ ಒಂದಾಗಿರುವ ಚಿತ್ರ 'ಸುಂದರಾಂಗ ಜಾಣ'.

'ತ್ಯಾಗರಾಜ'ರ ಸಂಗಮ

ತಾವು ನಾಯಕರಾಗಿ ಅಭಿನಯಿಸಿರುವ ಅನೇಕ ಚಿತ್ರಗಳಲ್ಲಿ ನಾಯಕಿಯನ್ನು ಬಿಟ್ಟುಕೊಟ್ಟು ರಮೇಶ್ ಅರವಿಂದ್ 'ತ್ಯಾಗಮಯಿ' ಅಂತ ಅನಿಸಿಕೊಂಡಿದ್ದಾರೆ. ಇದೇ ರೀತಿ ಗಣೇಶ್ ಕೂಡ 'ಮುಂಗಾರು ಮಳೆ' ಮೂಲಕ 'ತ್ಯಾಗರಾಜ' ಅಂತ ಫೇಮಸ್ ಆದರು. ಇಬ್ಬರು ತ್ಯಾಗರಾಜರು 'ಸುಂದರಾಂಗ ಜಾಣ' ಚಿತ್ರದಲ್ಲಿ ಕಮಾಲ್ ಮಾಡಿದ್ದಾರೆ.

ರಿಚ್ ಪ್ರೊಡಕ್ಷನ್

'ಸುಂದರಾಂಗ ಜಾಣ' ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ಹಾಗೂ ಅಲ್ಲು ಅರವಿಂದ್ ಬಂಡವಾಳ ಹಾಕಿದ್ದಾರೆ. ಹೀಗಾಗಿ ಕ್ವಾಲಿಟಿಯಲ್ಲಿ ಕಾಂಪ್ರೊಮೈಸ್ ಇಲ್ಲ.

ಸೂಪರ್ ಹಿಟ್ ಹಾಡಿನ ಟೈಟಲ್.!

ಎವರ್ ಗ್ರೀನ್ ಹಾಡು 'ದೂರದಿಂದ ಬಂದಂಥ ಸುಂದರಾಂಗ ಜಾಣ...' ಹಾಡಿನ ಸಾಲನ್ನೇ ಶೀರ್ಷಿಕೆಯಾಗಿ ಬಳಸಿಕೊಳ್ಳಲಾಗಿದೆ. ಹೀಗಾಗಿ ಚಿತ್ರಕ್ಕೆ ಮೈಲೇಜ್ ಸಿಗುವ ಸಾಧ್ಯತೆಯೂ ಹೆಚ್ಚು.

ಹೊಸ ಕಾಂಬಿನೇಷನ್

ಮೊಟ್ಟ ಮೊದಲ ಬಾರಿಗೆ ಗಣೇಶ್ ಜೊತೆ ಶಾನ್ವಿ ಶ್ರೀವಾಸ್ತವ ಜೊತೆಯಾಗಿದ್ದಾರೆ.

ಮುಂದಿನ ವಾರ ಬಿಡುಗಡೆ

ಕ್ರಿಸ್ಮಸ್ ಹಬ್ಬದ ಸಂಭ್ರಮದ ಪ್ರಯುಕ್ತ ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ 'ಸುಂದರಾಂಗ ಜಾಣ' ಬಿಡುಗಡೆ ಆಗಲಿದೆ. ನೋಡಲು ನೀವು ರೆಡಿನಾ.?

English summary
Golden Star Ganesh starrer Kannada Movie 'Sundaranga Jaana' will release on December 23rd, 2016. 'Sundaranga Jaana' Movie is directed by Ramesh Aravind. Read the article to know the specialities of the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada