»   » ಸಿನಿಮಾ ಸ್ಟಾರ್ ಗಳ ರೂಪದಲ್ಲಿ 'ಗೌರಿಪುತ್ರ ಗಣೇಶ' ಮಿಂಚಿಂಗ್

ಸಿನಿಮಾ ಸ್ಟಾರ್ ಗಳ ರೂಪದಲ್ಲಿ 'ಗೌರಿಪುತ್ರ ಗಣೇಶ' ಮಿಂಚಿಂಗ್

Posted By:
Subscribe to Filmibeat Kannada

ಸಾಮಾನ್ಯವಾಗಿ ಗೌರಿ-ಗಣೇಶ ಹಬ್ಬ ಬಂತೆಂದ್ರೆ ಸಿನಿಮಾ ಪ್ರೇಮಿಗಳಿಗೆ ಒಂತು ರೀತಿಯಲ್ಲಿ ಡಬಲ್ ಹಬ್ಬ. ಗಣೇಶನ ರೂಪದಲ್ಲಿ ತಮ್ಮ ನೆಚ್ಚಿನ ನಟನನ್ನ ನೋಡಬಹುದು ಎಂಬ ಉತ್ಸಾಹ.

ಕಳೆದ ಬಾರಿ 'ಬಾಹುಬಲಿ', 'ಪಿಕೆ', 'ಐರಾವತ' ಅಂತಹ ಗಣೇಶಗಳು ಗಮನ ಸೆಳೆದಿದ್ದವು. ಈ ಸಲವೂ ಅಂತಹ ಕೆಲವು ಗಣೇಶಗಳು ತಯಾರಾಗಿದ್ದು, ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿದೆ.

ಹಾಗಿದ್ರೆ, ಈ ಸಲ ಯಾವ ಯಾವ ಸ್ಟಾರ್ ಗಳು ಗಣೇಶನ ರೂಪ ಪಡೆದಿದ್ದಾರೆ ಎಂಬುದನ್ನ ಮುಂದಿನ ಸ್ಲೈಡ್ ಗಳಲ್ಲಿ ನೋಡಿ.

ಇದು 'ಬಾಹುಬಲಿ ದಿ ಕನ್ ಕ್ಲೂಷನ್'

ಕಳೆದ ಬಾರಿ 'ಬಾಹುಬಲಿ ದಿ ಬಿಗಿನಿಂಗ್' ಚಿತ್ರದ ಸ್ಟೈಲ್ ನಲ್ಲಿ ಮಿಂಚಿದ್ದ ವಿನಾಯಕ, ಈಗ 'ಬಾಹುಬಲಿ ದಿ ಕನ್ ಕ್ಲೂಷನ್' ಸ್ಟೈಲ್ ನಲ್ಲಿ ಮಿಂಚುತ್ತಿದ್ದಾರೆ.

'ಪ್ರಭಾಸ್'ರಂತೆ ಗಣೇಶ

ಬಾಹುಬಲಿ ಪಾರ್ಟ್ 2 ಚಿತ್ರದಲ್ಲಿ ನಾಯಕ ಪ್ರಭಾಸ್ ಕಾಣಿಸಿಕೊಂಡಂತೆ, ಗಣೇಶ ಮೂರ್ತಿಗಳನ್ನ ಸಿದ್ದಮಾಡಲಾಗಿದೆ. ದರ್ಬಾರ್ ಆಸನದಲ್ಲಿ ಕೂತು ಬಾಹುಬಲಿಯಂತೆ ಪೋಸ್ ಕೊಡುತ್ತಿರುವ ಗಣೇಶಗಳು ಆಕರ್ಷಿಸುತ್ತಿದೆ.

'ಜನತಾ ಗ್ಯಾರೇಜ್' ಗಣೇಶ

ಜೂನಿಯರ್ ಎನ್.ಟಿ.ಆರ್ ಅಭಿನಯದಲ್ಲಿ ತೆರೆಕಂಡಿದ್ದ ಜನತಾ ಗ್ಯಾರೇಜ್ ಸ್ಟೈಲ್ ನಲ್ಲಿ ಗಣೇಶ ಬಂದಿದೆ. ಎನ್.ಟಿ.ಆರ್ ರೀತಿಯಲ್ಲಿ ಹೆಗಲ ಮೇಲೊಂದು ಬ್ಯಾಗ್ ಹಾಕ್ಕೊಂಡು ಪೋಸ್ ಕೊಡುತ್ತಿದೆ.

'ರಾಜಕುಮಾರ' ಗಣೇಶ

ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ ರಾಜಕುಮಾರ ಸ್ಟೈಲ್ ನಲ್ಲೂ ಗಣೇಶ ಬಂದಿದೆ. ಗಣೇಶನ ಜೊತೆಲ್ಲಿ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಮಿಂಚುತ್ತಿದ್ದಾರೆ.

ಪುನೀತ್ 'ರಾಜ್ ಕುಮಾರ್' ಸ್ಟೈಲ್ ನಲ್ಲಿ ಗಣೇಶ ಬಂದಿದೆ

English summary
Ganesha idols inspired by the popular films of 2017, like baahubali the conclusion, janatha garage, raajakumara.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada