Just In
Don't Miss!
- News
ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಬಿಜೆಪಿ ಯುವ ನಾಯಕಿ ಪಮೇಲಾ ಆರೋಪ
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Lifestyle
ಬೆಡ್ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿಖಿಲ್ ಕುಮಾರ್ ಚಿತ್ರಕ್ಕೆ ಎಂಟ್ರಿಯಾದ ಕೆಜಿಎಫ್ ಗರುಡ ಖ್ಯಾತಿಯ ರಾಮ್
'ಸೀತಾರಾಮ ಕಲ್ಯಾಣ' ಸಿನಿಮಾ ಬಳಿಕ ನಿಖಿಲ್ ಕುಮಾರ್ ರೈಡರ್ ಸಿನಿಮಾ ಆರಂಭಿಸಿದ್ದಾರೆ. ಲಹರಿ ಮ್ಯೂಸಿಕ್ ಸಂಸ್ಥೆ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಭಾರಿ ಕುತೂಹಲ ಮೂಡಿಸಿದೆ.
ಈಗಾಗಲೇ ರೈಡರ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಸಹ ಬಿಡುಗಡೆಯಾಗಿದೆ. ಆಕ್ಷನ್ ಹೀರೋ ಆಗಿ ನಿಖಿಲ್ ಮಿಂಚಲಿದ್ದಾರೆ ಎನ್ನುವುದರ ಸುಳಿವು ಟೀಸರ್‌ನಲ್ಲಿ ಸಿಕ್ಕಿದೆ.
ಟೀಸರ್ ಬಿಡುಗಡೆ: ನಿಖಿಲ್ ಹುಟ್ಟುಹಬ್ಬಕ್ಕೆ ಬಂದ 'ರೈಡರ್'
ಇದೀಗ, ರೈಡರ್ ಚಿತ್ರಕ್ಕೆ ಕೆಜಿಎಫ್ ಚಿತ್ರದಲ್ಲಿ ಗರುಡನಾಗಿ ಅಬ್ಬರಿಸಿದ್ದ ರಾಮಚಂದ್ರರಾಜು (ರಾಮ್) ಎಂಟ್ರಿಯಾಗಿದ್ದಾರೆ. ನಿಖಿಲ್ ಸಿನಿಮಾದಲ್ಲಿ ರಾಮ್ ನಟಿಸುತ್ತಿರುವುದನ್ನು ಲಹರಿ ಸಂಸ್ಥೆ ಅಧಿಕೃತಗೊಳಿಸಿದೆ.
ಅಂದ್ಹಾಗೆ, ರೈಡರ್ ಸಿನಿಮಾವನ್ನು ವಿಜಯ್ ಕುಮಾರ್ ಕೊಂಡ ನಿರ್ದೇಶಿಸುತ್ತಿದ್ದಾರೆ. ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ ನೀಡಿದ್ದು, ಶೇ 50% ರಷ್ಟು ಚಿತ್ರೀಕರಣ ಮುಗಿದಿದೆ ಎನ್ನಲಾಗಿದೆ.
ಈ ಚಿತ್ರದ ಬಗ್ಗೆ ಹೆಚ್ಚೇನು ಮಾಹಿತಿ ಬಿಟ್ಟುಕೊಟ್ಟಿಲ್ಲವಾದರೂ, ನಿಜಜೀವನ ಆಧರಿಸಿದ ಮಾಡಲಾಗುತ್ತಿರುವ ಸಿನಿಮಾ ಎಂದು ಹೇಳಲಾಗುತ್ತಿದೆ. ಇನ್ನುಳಿದಂತೆ ರೈಡರ್ ಸಿನಿಮಾದಲ್ಲಿ ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ, ದತ್ತಣ್ಣ ಇನ್ನೂ ಹಲವರು ನಟಿಸುತ್ತಿದ್ದಾರೆ.