ಇನ್ನೊಂದು ಚಿತ್ರಕ್ಕೆ ಸಹಿ ಹಾಕಿದ ಗೌರೀಶ್ ಅಕ್ಕಿ
ಖ್ಯಾತ ಸಂದರ್ಶಕ, ನಿರೂಪಕ ಗೌರೀಶ್ ಅಕ್ಕಿ ಸದ್ಯಕ್ಕೆ ತಮ್ಮ 'ಸಿನಿಮಾ ಮೈ ಡಾರ್ಲಿಂಗ್' ಚಿತ್ರದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದಾರೆ. ಈಗವರು ಇನ್ನೊಂದು ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ, ಆದರೆ ಕಂಪ್ಲೀಟ್ ಆಗಿ ಅಲ್ಲ. 'ಹಾಫ್ ಮೆಂಟ್ಲು' ಚಿತ್ರದಲ್ಲಿ ಅತಿಥಿ ಪಾತ್ರ ಪೋಷಿಸಿದ್ದಾರೆ.
ಲಕ್ಷ್ಮಿ ದಿನೇಶ್ ಆಕ್ಷನ್ ಕಟ್ ಹೇಳುತ್ತಿರುವ ಹಾಫ್ ಮೆಂಟ್ಲು ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಗೌರೀಶ್ ಅವರದು ಸ್ಮಾಲ್ ರೋಲ್. ರಕ್ಷಿತ್ ಶೆಟ್ಟಿ ಅವರ 'ಉಳಿದವರು ಕಂಡಂತೆ' ಚಿತ್ರದಲ್ಲಿ ಅವರದು 80ರ ದಶಕದ ಪತ್ರಿಕೆಯೊಂದರ ಮುಖ್ಯ ಸಂಪಾದಕರ ಪಾತ್ರ. ['ಹಾಫ್ ಮೆಂಟ್ಲು' ರಾತ್ರಿ ಶೂಟಿಂಗ್ ನಲ್ಲಿ ಏನಾಯ್ತು?]

ಫೆಬ್ರವರಿ 14ರ ಪ್ರೇಮಿಗಳ ದಿನದಂದು ಹಲಸೂರಿನ 'ಚಾಕೋಲೇಟ್ ಜಂಕ್ಷನ್'ನಲ್ಲಿ 'ಮೈ ಡಾರ್ಲಿಂಗ್' ತಂಡ ಒಬ್ಬರಿಗೊಬ್ಬರು ಸ್ಟ್ರಾಬೆರ್ರಿ ಚಾಕೋಲೇಟ್ ತಿನ್ನಿಸಿಕೊಂಡು ಸಂಭ್ರಮಿಸಿದ್ದೂ ಆಗಿದೆ. ಇನ್ನೇನು ಫೆಬ್ರವರಿಯಲ್ಲೇ ಚಿತ್ರ ಸೆಟ್ಟೇರುತ್ತಿದೆ.

More from Filmibeat
English summary
Veteran TV anchor / programme presenter Gaurish S Akki takes a small break from his debut directional 'Cinema My Darling'. He plays a guest role in 'Half Mentlu', directed by Lakshmi Dinesh and actor Sandeep and Sonu Gowda in the lead roles.


Click it and Unblock the Notifications











