»   » ಗೌರೀಶ್ 'ಸಿನೆಮಾ ಮೈ ಡಾರ್ಲಿಂಗ್' ಹೊಸ ಪ್ರತಿಭೆಗಳು

ಗೌರೀಶ್ 'ಸಿನೆಮಾ ಮೈ ಡಾರ್ಲಿಂಗ್' ಹೊಸ ಪ್ರತಿಭೆಗಳು

Posted By:
Subscribe to Filmibeat Kannada

ಖ್ಯಾತ ಸಂದರ್ಶಕ, ನಿರೂಪಕ ಗೌರೀಶ್ ಅಕ್ಕಿ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ 'ಸಿನೆಮಾ ಮೈ ಡಾರ್ಲಿಂಗ್'. ನಿರೂಪಕರಾಗಿ ಗೆದ್ದಿರುವ ಗೌರೀಶ್ ಅವರ ಚಿತ್ರದ ಬಗ್ಗೆ ಸಣ್ಣ ಕುತೂಹಲ ಹಾಗೂ ಅಪಾರ ನಿರೀಕ್ಷೆಗಳು ಇವೆ. ಏಕೆಂದರೆ ಹೊಸಬರ ಚಿತ್ರ ಎಂದರೆ ಗಾಂಧಿನಗರ ಈಗ ಬೆರಗು ಕಣ್ಣುಗಳಿಂದ ನೋಡುತ್ತಿದೆ.

'ಸಿನೆಮಾ ಮೈ ಡಾರ್ಲಿಂಗ್' ಚಿತ್ರಕ್ಕೆ ಕಳೆದ ಡಿಸೆಂಬರ್ 22ರಂದು ಗರುಡ ಮಾಲ್ ನಲ್ಲಿ ನಡೆದ ಆಡಿಷನ್ ನಲ್ಲಿ ಮೂರು ನಾಯಕಿಯರನ್ನು ಆಯ್ಕೆ ಮಾಡಲಾಗಿದೆ. ಈ ಹೊಸ ಪ್ರತಿಭೆಗಳು ಯಾರು, ಅವರನ್ನು ಆಯ್ಕೆ ಮಾಡಲು ಏನೆಲ್ಲಾ ಪರಿಗಣನೆಗೆ ತೆಗೆದುಕೊಳ್ಳಲಾಯಿತು ಎಂಬುದು ಗುರುವಾರ (ಜನವರಿ 16) ಸಂಜೆ 6ಗಂಟೆಗೆ ತಿಳಿಯಲಿದೆ. ಅಲ್ಲಿಯ ತನಕ ಕಾಯದೆ ವಿಧಿಯಿಲ್ಲ. [ಕನಸುಗಳ ಬೆನ್ನೇರಿ ಹೊರಟ ಟಿವಿ ನಿರೂಪಕ ಗೌರೀಶ್]

New faces in Cinema My Darling

ಇದರ ಜತೆ ನಾಲ್ವರು ಹೊಸ ನಾಯಕರುಗಳನ್ನು ಕೂಡ ಚಿತ್ರರಂಗಕ್ಕೆ ನಾಯಕರನ್ನಾಗಿ ಪರಿಚಯಿಸಲಾಗುತ್ತಿದೆ. ತೀವ್ರ ಸ್ಪರ್ಧೆಯನ್ನೆದುರಿಸಿ 'ಸಿನೆಮಾ ಮೈ ಡಾರ್ಲಿಂಗ್' ಚಿತ್ರಕ್ಕೆ ಆಯ್ಕೆಯಾದ ಮೂವರು ಹೊಸ ನಾಯಕಿಯರು ಹಾಗೂ ನಾಲ್ಕು ನಾಯಕರನ್ನು ಒಂದು ಫ್ಯಾಶನ್ ಶೋ ಹಾಗು ಡಾನ್ಸ್ ಮೂಲಕ ಚಿತ್ರರಂಗಕ್ಕೆ ಮತ್ತು ಮಾಧ್ಯಮ ಮಿತ್ರರಿಗೆ ಪರಿಚಯಿಸಲಾಗುತ್ತಿದೆ.

ಇದೇ ಸಂದರ್ಭದಲ್ಲಿ 'ಸಿನೆಮಾ ಮೈ ಡಾರ್ಲಿಂಗ್' ಚಿತ್ರದ ಕುರಿತಾದ ಚಿಕ್ಕ ಪ್ರೊಮೋ ಒಂದನ್ನು ಬಿಡುಗಡೆ ಮಾಡಲಾಗುತ್ತಿದೆ. ಜನವರಿ 16ರಂದು ಸಂಜೆ 6 ಗಂಟೆಗೆ ಗರುಡ ಮಾಲ್ ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಗೌರೀಶ್ ಅಕ್ಕಿ ಜತೆ ಸೆಲೆಬ್ರಿಟಿ ತೀರ್ಪುಗಾರರಾಗಿದ್ದ ರಕ್ಷಿತ್ ಶೆಟ್ಟಿ ,ಯಜ್ಞಾ ಶೆಟ್ಟಿ, ಸತೀಶ್ ನೀನಾಸಂ ಹಾಗು ಮೇಘನಾ ಗಾಂವ್ಕರ್ ಇರುತ್ತಾರೆ.

ಜೊತೆಗೆ ಚಿತ್ರತಾರೆಯರಾದ ಧನಂಜಯ್, ಚಿರಂಜೀವಿ ಸರ್ಜಾ, ವಿನಾಯಕ್ ಜೋಶಿ, ರವಿಶಂಕರ್, ಶ್ರೀಕಿ, ರಿಶಬ್ ಶೆಟ್ಟಿ, ಕೋಮಲ್ ಕುಮಾರ್, ಶ್ವೇತಾ ಶ್ರೀವಾತ್ಸವ್, ಸುಕೃತಾ ವಾಗ್ಲೆ, ಪಾವನ, ಶ್ವೇತಾ ಪಂಡಿತ್ ಹಾಗೂ ನಿರ್ದೇಶಕರಾದ ಪವನ್ ಕುಮಾರ್, ಗಡ್ಡ ವಿಜಿ, ಕೆ ಎಂ ಚೈತನ್ಯ, ಜಯತೀರ್ಥ ಸೇರಿದಂತೆ ನಿರ್ಮಾಪಕರಾದ ಜಾಕ್ ಮಂಜು,ನಟರಾಜ್ ಗೌಡ, ತರುಣ್ ಶಿವಪ್ಪ,ಲೀಲಾ ಶಂಕರ್ ಮುಂತಾದ ಪ್ರಮುಖರು ಹಾಜರಿರುತ್ತಾರೆ.

ಎಲ್ಲರಿಗೂ ಮುಕ್ತ ಅವಕಾಶ ಇದೆ. ಶ್ರೀ ಸಾಯಿರಾಮ್ ಸಿನಿ ಟಾಕೀಸ್ ಲಾಂಛನ ದಲ್ಲಿ ಸಿನಿಮಾ ಮೈ ಡಾರ್ಲಿಂಗ್ ಚಿತ್ರವನ್ನು ನಿರ್ಮಿಸಲಾಗಿದೆ. ಹಲವು ಆಸೆ ಹಾಗೂ ಆಕಾಂಕ್ಷೆಗಳನ್ನು ಹೊತ್ತು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ನವ ಯುವ ಪ್ರತಿಭೆಗಳಿಗೆ ಶುಭ ಕೋರಲು ನೀವು ಹೋಗುತ್ತಿದ್ದೀರಾ ತಾನೆ? (ಒನ್ಇಂಡಿಯಾ ಕನ್ನಡ)

English summary
Veteran TV anchor / programme presenter Gaurish S Akki, is all set to start his first directorial venture “Cinema my Darling”. As his initial step he is planning to introduce 4 male leads and 3 female leads for his movie. Director Gaurish Akki has planned to introduce the main leads of the movie to the industry and to media in an event to be held at Garuda Mall on 16th Jan 2014, Thursday at 6pm where the winners of the auditions will be revealed. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada