»   » ನಿರ್ಮಾಪಕ ಕೆ.ಮಂಜುಗೆ ಸಿಕ್ಕ ಕೇರಳ ಕುಟ್ಟಿ ಯಾರು?

ನಿರ್ಮಾಪಕ ಕೆ.ಮಂಜುಗೆ ಸಿಕ್ಕ ಕೇರಳ ಕುಟ್ಟಿ ಯಾರು?

Posted By:
Subscribe to Filmibeat Kannada

'ಫಸ್ಟ್ ರ‍್ಯಾಂಕ್‌ ರಾಜು' ಖ್ಯಾತಿಯ ನಟ ಗುರುನಂದನ್ ಅಭಿನಯಿಸಲು ಒಪ್ಪಿಕೊಂಡಿರುವ ಹೊಸ ಸಿನಿಮಾ 'ಸ್ಮೈಲ್ ಪ್ಲೀಸ್' ಗೆ ನಿರ್ಮಾಪಕ ಕೆ.ಮಂಜು ಬಂಡವಾಳ ಹಾಕುತ್ತಿದ್ದಾರೆ ಅಂತ ನಾವೇ ನಿಮಗೆ ಹೇಳಿದ್ವಿ.

ಸಂಭಾಷಣೆಕಾರ ರಘು ಸಮರ್ಥ್ ಆಕ್ಷನ್ ಕಟ್ ಹೇಳಲು ತಯಾರಾಗಿರುವ 'ಸ್ಮೈಲ್ ಪ್ಲೀಸ್' ಚಿತ್ರ ಸೆಟ್ಟೇರಲು ಕೆಲವೇ ದಿನಗಳು ಮಾತ್ರ ಬಾಕಿ.

ಮಾರ್ಚ್ ತಿಂಗಳಿನಲ್ಲಿ ಮುಹೂರ್ತ ಕಾಣುವ 'ಸ್ಮೈಲ್ ಪ್ಲೀಸ್' ಚಿತ್ರಕ್ಕೆ ಬೆಸ್ಟ್ ಸ್ಮೈಲ್ ಇರುವ ನಟಿಯೊಬ್ಬರಿಗಾಗಿ ನಿರ್ಮಾಪಕ ಕೆ.ಮಂಜು ಹುಡುಕಾಟ ನಡೆಸುತ್ತಿದ್ದರು.

gayathri-iyer-to-play-lead-in-k-manju-s-smile-please

ಬಾಲಿವುಡ್, ಕಾಲಿವುಡ್, ಟಾಲಿವುಡ್...ಎಲ್ಲಾ ವುಡ್ ಗಳನ್ನು ತಲಾಶ್ ಮಾಡಿದ ನಂತರ ನಿರ್ಮಾಪಕ ಕೆ.ಮಂಜುಗೆ ಸಿಕ್ಕ ಸುಂದರ ವದನದ ಚೆಲುವೆ ಗಾಯತ್ರಿ ಅಯ್ಯರ್ (ಊರ್ಮಿಳಾ ಗಾಯತ್ರಿ). ['ಫಸ್ಟ್‌ ರ‍್ಯಾಂಕ್‌ ರಾಜು' ಮುಂದಿನ ಸಿನಿಮಾ ಯಾವುದು]

ಕೇರಳ ಮೂಲದ ಗಾಯತ್ರಿ ಅಯ್ಯರ್ ಪರಿಚಯ ನಿಮಗಿದೆ. ಡೌಟ್ ಇದ್ರೆ, ಒಮ್ಮೆ ಕೋಮಲ್ ಕುಮಾರ್ ಅಭಿನಯದ 'ನಮೋ ಭೂತಾತ್ಮ' ಹಾಗೂ 'ಊಜಾ' ಸಿನಿಮಾಗಳನ್ನ ನೆನಪಿಸಿಕೊಳ್ಳಿ. ಎರಡೂ ಚಿತ್ರಗಳಲ್ಲಿ ಗಾಯತ್ರಿ ಅಯ್ಯರ್ ನಾಯಕಿ ಆಗಿ ಮಿಂಚಿದ್ದರು.

gayathri-iyer-to-play-lead-in-k-manju-s-smile-please

ಈಗ ಶೂಟಿಂಗ್ ನಲ್ಲಿರುವ ವಿನೋದ್ ಪ್ರಭಾಕರ್ ರವರ 'ಟೈಸನ್' ಹಾಗೂ ದರ್ಶನ್ ರವರ 'ಜಗ್ಗು ದಾದಾ' ಚಿತ್ರದಲ್ಲೂ ಗಾಯತ್ರಿ ಅಯ್ಯರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

ದಿನೇ ದಿನೇ ಸ್ಯಾಂಡಲ್ ವುಡ್ ನಲ್ಲಿ ಹೆಸರು ಮಾಡುತ್ತಿರುವ ಗಾಯತ್ರಿ ಅಯ್ಯರ್, ತಮ್ಮ ಚಿತ್ರದ ನಾಯಕಿ ಪಾತ್ರಕ್ಕೆ ಬೆಸ್ಟ್ ಅಂತ 'ಸ್ಮೈಲ್ ಪ್ಲೀಸ್' ಸಿನಿಮಾಗೆ ಕೆ.ಮಂಜು ಸೆಲೆಕ್ಟ್ ಮಾಡಿದ್ದಾಗಿದೆ. ಗಾಯತ್ರಿ ಕೂಡ ಓಕೆ ಅಂದಿದ್ದಾರೆ. ಶೂಟಿಂಗ್ ಶುರುವಾಗುವುದು ಒಂದೇ ಬಾಕಿ....

English summary
Actress Gayathri Iyer is roped in to play lead in Gurunandan starrer K.Manju's upcoming venture 'Smile Please'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada