»   » ಜೆ ಡಿ ಎಸ್ ಪಕ್ಷದ ಪರವಾಗಿ ಪ್ರಚಾರಕ್ಕಿಳಿದ 'ದೊಡ್ಮನೆ ಸೊಸೆ'

ಜೆ ಡಿ ಎಸ್ ಪಕ್ಷದ ಪರವಾಗಿ ಪ್ರಚಾರಕ್ಕಿಳಿದ 'ದೊಡ್ಮನೆ ಸೊಸೆ'

Posted By:
Subscribe to Filmibeat Kannada

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ರಾಜಕೀಯ ಪಕ್ಷಗಳಿಂದ ಚುನಾವಣೆಯ ಸ್ಪರ್ಧೆಯಲ್ಲಿ ಯಾರೆಲ್ಲಾ ಭಾಗಿ ಆಗುತ್ತಾರೆ ಎನ್ನುವು ಕುತೂಹಲ ಒಂದೆಡೆ ಆದರೆ ಮತ್ತೊಂದು ಕಡೆಯಲ್ಲಿ ಸಿನಿಮಾರಂಗದಿಂದ ಚುನಾವಣಾ ಕಣಕ್ಕೆ ಹಾಗೂ ಪ್ರಚಾರಕ್ಕೆ ಯಾರು ಬರುತ್ತಾರೆ ಎನ್ನುವ ಕೌತುಕ ಜನ ಸಾಮಾನ್ಯರಲ್ಲಿ ಮನೆ ಮಾಡುತ್ತಿದೆ.

ಇತ್ತೀಚಿಗಷ್ಟೆ ರಾಕಿಂಗ್ ಸ್ಟಾರ್ ಯಶ್ ನಾನು ಚುನಾವಣೆಯ ಪ್ರಚಾರದಲ್ಲಿ ಭಾಗಿ ಆಗುವುದಿಲ್ಲ ನನಗೆ ವಯಕ್ತಿಕವಾಗಿ ಅದರಲ್ಲಿ ಆಸಕ್ತಿ ಇಲ್ಲ ಎಂದು ತಿಳಿಸಿದ್ದರು. ಅದರ ಬೆನ್ನಲ್ಲೇ ಅಣ್ಣಾವ್ರ ಸೊಸೆ ಗೀತಾ ಶಿವರಾಜ್ ಕುಮಾರ್ ಸಹೋದರ ಎಸ್ ಮಧು ಬಂಗಾರಪ್ಪ ಅವರ ಜೊತೆ ಸೇರಿ 'ಜೆ ಡಿ ಎಸ್' ಪಕ್ಷದ ಪರವಾಗಿ ಪ್ರಚಾರ ಮಾಡಲು ಆರಂಭ ಮಾಡಿದ್ದಾರೆ.

Geetha Shivraj Kumar is campaigning for the JDS party,

ರಾಜಕೀಯದ ಬಗ್ಗೆ ರಾಕಿಂಗ್ ಸ್ಟಾರ್ ನೇರ ಮಾತು

ಕಳೆದ ಬಾರಿ ಗೀತಾ ಶಿವರಾಜ್ ಕುಮಾರ್ ಚುನಾವಣೆಗೆ ನಿಂತಾಗ ಕೆಲ ಅಭಿಮಾನಿಗಳಿಂದ ವಿರೋಧವೂ ವ್ಯಕ್ತವಾಗಿತ್ತು. ಸದ್ಯ ಮಧು ಬಂಗಾರಪ್ಪ ಪರವಾಗಿ ಗೀತಾ ಶಿವರಾಜ್ ಕುಮಾರ್ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಇತ್ತೀಚಿಗಷ್ಟೆ ಶಿವಮೊಗ್ಗ ಜಿಲ್ಲೆಯ ಆಯನೂರುನಲ್ಲಿ ನಡೆದ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶದಲ್ಲಿ ಗೀತಾ ಶಿವರಾಜ್ ಕುಮಾರ್ ಭಾಗಿ ಆಗಿ ಸಹೋದರನಿಗೆ ಸಪೋರ್ಟ್ ಮಾಡಿದರು.

ಚುನಾವಣೆಯ ದಿನಾಂಕ ನಿಗದಿ ಆಗಿ ಪಕ್ಷದ ಪ್ರಚಾರ ಆರಂಭವಾದ ನಂತರ ಬಾಮೈದನ ಪರವಾಗಿ ಹ್ಯಾಟ್ರಿಕ್ ಹೀರೂ ಅಖಾಡಕ್ಕೆ ಇಳಿದು ಪ್ರಚಾರ ಮಾಡುತ್ತಾರಾ ಎನ್ನುವ ಕುತೂಹಲ ಜನರಿಗೆ ಮೂಡಿದೆ.

English summary
Kannada actor Shivarajkumar's wife Geetha Shivraj Kumar is campaigning for the JDS party, Geeta Shivraj Kumar will campaign in Shimoga for brother Madhu Bangarappa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X