»   » ಕಂದನ ನಿರೀಕ್ಷೆಯಲ್ಲಿ ಚೊಚ್ಚಲ ಗರ್ಭಿಣಿ ಜೆನಿಲಿಯಾ

ಕಂದನ ನಿರೀಕ್ಷೆಯಲ್ಲಿ ಚೊಚ್ಚಲ ಗರ್ಭಿಣಿ ಜೆನಿಲಿಯಾ

By: ಉದಯರವಿ
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ 'ಸತ್ಯ ಇನ್ ಲವ್' ಚಿತ್ರದಲ್ಲಿ ಅಭಿನಯಿಸಿದ್ದ ತಾರೆ ಜೆನಿಲಿಯಾ ಡಿಸೋಜಾ ಈಗ ತುಂಬು ಗರ್ಭಿಣಿ. ಇನ್ನೇನು ಕೆಲ ಸಮಯದಲ್ಲಿ ಆಕೆಯ ಮನೆಗೆ ಹೊಸ ಅತಿಥಿ ಆಗಮನವಾಗಲಿದೆ. ಇತ್ತೀಚೆಗೆ ನಡೆದ ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್ ಅವರ ಮದುವೆ ನಿಶ್ಚಿತಾರ್ಥಕ್ಕೆ ಜೆನಿಲಿಯಾ ಆಗಮಿಸಿದ್ದರು.

ತನ್ನ ಪತಿ ರಿತೇಶ್ ದೇಶ್ ಮುಖ್ ರೊಂದಿಗೆ ಬಂದಿದ್ದ ಜೆನಿಲಿಯಾ ಮೇಲೆ ಎಲ್ಲರ ಕಣ್ಣು ಬಿತ್ತು. ಮಾಧ್ಯಮಗಳಂತೂ ಆಕೆಯ ಫೋಟೋಗಳನ್ನು ಸೆರೆಹಿಡಿಯುವಲ್ಲಿ ಬಿಜಿಯಾದವು. ತಾಯ್ತನದ ಆನಂದವನ್ನು ಸವಿಯುತ್ತಿರುವ ಜೆನಿಲಿಯಾ ಮದುವೆ ಮನೆಯಲ್ಲಿ ಎಲ್ಲರೊಂದಿಗೂ ಕಲೆತುಬೆರೆತು ಖುಷಿಯಾಗಿದ್ದರು.

ಜೆನಿಲಿಯಾ ಪತಿರಾಯ ರಿತೇಶ್ ದೇಶ್ ಮುಖ್ ಅವರಂತೂ ತಮ್ಮ ಪತ್ನಿಯನ್ನು ಒಂದು ಕ್ಷಣವೂ ಬಿಡದಂತೆ ಜಾಗ್ರತೆಯಾಗಿ ನೋಡಿಕೊಳ್ಳುತ್ತಿದ್ದರು. ತಂದೆತಾಯಿಯಾಗುತ್ತಿದ್ದೇವೆ ಎಂದ ಖುಷಿ ಇಬ್ಬರ ಮುಖದಲ್ಲೂ ಲಾಸ್ಯವಾಡುತ್ತಿತ್ತು.

ದಕ್ಷಿಣ ಭಾರತದಲ್ಲೇ ಸಖತ್ ಬಿಜಿಯಾಗಿದ್ದ ತಾರೆ

ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲೇ ಸಖತ್ ಬಿಜಿಯಾಗಿದ್ದ ತಾರೆ ಜೆನಿಲಿಯಾ ಡಿಸೋಜಾ. ಹೈದರಾಬಾದ್ ನಲ್ಲಿ ಆಕೆಯನ್ನು ಬಹಳ ಸಮಯದ ಬಳಿಕ ನೋಡಿದವರು ಆಲ್ ದ ಬೆಸ್ಟ್ ಹೇಳಿದರು.

ಲವ್ ಕಮ್ ಅರೇಂಜ್ಡ್ ಮ್ಯಾರೇಜ್

ಅಂದಹಾಗೆ ರಿತೇಶ್ ಹಾಗೂ ಜೆನಿಲಿಯಾ ಅವರದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮದುವೆಗೂ ಮುನ್ನವೇ ಇವರಿಬ್ಬರೂ ಸಾಕಷ್ಟು ಸಮಯ ಜೊತೆಯಾಗಿ ಓಡಾಡಿಕೊಂಡೇ ಇದ್ದವರು. 'ತುಜೆ ಮೇರಿ ಕಸಮ್' ಒಟ್ಟಿಗೆ ಅಭಿನಯಿಸಿದಾಗಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

ಹತ್ತು ವರ್ಷಗಳ ಪ್ರೀತಿ ಪ್ರೇಮ ಪ್ರಣಯ

ಇವರಿಬ್ಬರದ್ದೂ ಸುದೀರ್ಘ ಹತ್ತು ವರ್ಷಗಳ ಪ್ರೀತಿ ಪ್ರೇಮ ಪ್ರಣಯ. 2012ರಲ್ಲಿ ಸತಿಪತಿಯಾಗುವ ಮೂಲಕ ಇವರ ಕುಚ್ ಕುಚ್ ವ್ಯವಹಾರ ಅಧಿಕೃತವಾಯಿತು.

ನನ್ನಲ್ಲೇನು ಬದಲಾವಣೆಯಾಗಿಲ್ಲ

ತನ್ನ 10ನೇ ವರ್ಷಕ್ಕೆ ಬೆಳ್ಳಿಪರದೆಗೆ ಅಡಿಯಿಟ್ಟ ತಾನು ವರ್ಷದ 365 ದಿನವೂ ಬಿಜಿಯಾಗಿರುತ್ತಿದ್ದೆ. ಈಗ ಬ್ರೇಕ್ ತಗೊಂಡಿದ್ದಿದ್ದೇನೆ ಅಷ್ಟೇ ಎನ್ನುತ್ತಾರೆ. ಮದುವೆಗೆ ಮುಂಚೆ ನಾನು ಹೇಗಿದ್ದೆನೋ ಈಗಲೂ ಹಾಗೆಯೇ ಇದ್ದೇನೆ. ನನ್ನಲ್ಲೇನು ಬದಲಾವಣೆಯಾಗಿಲ್ಲ. ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸುತ್ತಿಲ್ಲ ಅಷ್ಟೆ. ತೆರೆಯ ಮೇಲೆ ಇಲ್ಲದಿದ್ದರೂ ಬೇರೆ ಕೆಲಸಗಳಲ್ಲಿ ತಾನು ಬಿಜಿಯಾಗಿದ್ದೇನೆ ಎನ್ನುತ್ತಾರೆ.

ಈಗ ಚೊಚ್ಚಲ ಕಂದನ ನಿರೀಕ್ಷೆಯಲ್ಲಿದ್ದಾರೆ

ಜೆನಿಲಿಯಾ ಐದು ಭಾಷೆಗಳಲ್ಲಿ ಮಿಂಚಿ ಪಡ್ಡೆಗಳ ಕಣ್ಣು ಕುಕ್ಕಿದವರು. ಬಾಲಿವುಡ್, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ಒಂದು ಸುತ್ತು ಹಾಕಿಕೊಂಡು ಬಂದವರು. ಈಗ ಚೊಚ್ಚಲ ಕಂದನ ನಿರೀಕ್ಷೆಯಲ್ಲಿದ್ದಾರೆ.

English summary
Bollywood stars Genelia D'Souza and Riteish Deshmukh were attended Salman Khan's sister Arpita's wedding reception.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada