For Quick Alerts
  ALLOW NOTIFICATIONS  
  For Daily Alerts

  'ಎದ್ದೇಳು ಭಾರತೀಯ' ಅಂತಿದ್ದಾರೆ ಪ್ರಜ್ವಲ್ ದೇವರಾಜ್

  |

  'ಜಂಟಲ್ ಮನ್' ಸಿನಿಮಾ ಈಗಾಗಲೇ ತನ್ನ ಕಥಾ ವಸ್ತುವಿನ ಮೂಲಕ ಕುತೂಕಲ ಮೂಡಿಸಿದೆ. ದಿನಕ್ಕೆ 18 ಗಂಟೆಗಳ ಕಾಲ ನಿದ್ದೆ ಮಾಡುವ ವ್ಯಕ್ತಿಯಾಗಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿದ್ದಾರೆ.

  ಗಣರಾಜ್ಯೋತ್ಸವದ ವಿಶೇಷವಾಗಿ ಭಾರತೀಯರನ್ನು ಎಚ್ಚರಗೊಳಿಸು ಎಂಬ ಅರ್ಥವನ್ನು ಹೊಂದಿರುವ 'ಎದ್ದೇಳು ಭಾರತೀಯ' ಎಂಬ ಸಾಹಿತ್ಯದೊಂದಿಗೆ 'ಜಂಟಲ್ ಮನ್' ಚಿತ್ರತಂಡ ಹಾಡಿನ ಟೀಸರ್ ಅನ್ನು ಬಿಡುಗಡೆ ಮಾಡುತ್ತಿದೆ.

  ಯೋಗರಾಜ್ ಭಟ್ ಈ ಹಾಡನ್ನು ಬರೆದಿದ್ದಾರೆ. "ಸ್ವಾಮಿ ವಿವೇಕಾನಂದರು ನಿದ್ರಿಸುತ್ತಿರುವ ಭಾರತೀಯರನ್ನು ಎಚ್ಚರಗೊಳಿಸಿದರು. ಅದೇ ರೀತಿ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಪಾತ್ರವನ್ನು ನಾನು ಎಚ್ಚರಗೊಳಿಸಲು ಈ ಹಾಡನ್ನು ರಚಿಸಿದ್ದೇನೆ." ಎಂದು ಯೋಗರಾಜ್ ಭಟ್ ತಿಳಿಸಿದ್ದಾರೆ.

  'ಟಗರು ಬಂತು ಟಗರು..' ಖ್ಯಾತಿಯ ಗಾಯಕ ಆಂಥೋನಿ ದಾಸ್ ಈ ಹಾಡನ್ನು ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ದೇಶಭಕ್ತಿಯ ಹಾಡು ಇದಾಗಿದೆ.

  ಗಣರಾಜ್ಯೋತ್ಸವದಂದು ಹಾಡಿನ ಟೀಸರ್ ಹಾಗೂ ಪೂರ್ಣ ಹಾಡನ್ನು ಜನವರಿ 29 ರಂದು ಬಿಡುಗಡೆ ಆಗಲಿದೆ. ಈ ಹಿಂದೆ ಬಿಡುಗಡೆಯಾದ ರೋಮ್ಯಾಂಟಿಕ್ ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ.

  ಗುರು ದೇಶಪಾಂಡೆ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಜಡೇಶ್ ಕುಮಾರ್ ನಿರ್ದೇಶಿಸಿದ್ದಾರೆ. ನಿಶ್ವಿಕಾ ನಾಯ್ಡು ಸಿನಿಮಾದ ನಾಯಕಿಯಾಗಿದ್ದಾರೆ. 'ಜಂಟಲ್ ಮನ್' ಚಿತ್ರ ಫೆಬ್ರವರಿ 7 ರಂದು ವಿಶ್ವದಾದ್ಯಂತ ಬಿಡುಗಡೆಗೆ ಆಗಲಿದೆ.

  English summary
  Gentleman kannada movie song teaser out.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X