For Quick Alerts
  ALLOW NOTIFICATIONS  
  For Daily Alerts

  ''ನಮ್ಮ ಕೈ ಬಿಡಬೇಡಿ''- ಸ್ಟಾರ್ ನಟರ ಫ್ಯಾನ್ಸ್ ಗೆ ಸಂಚಾರಿ ವಿಜಯ್ ಮನವಿ

  |
  ''ನಮ್ಮ ಕೈ ಬಿಡಬೇಡಿ''- ಸ್ಟಾರ್ ನಟರ ಫ್ಯಾನ್ಸ್ ಗೆ ಸಂಚಾರಿ ವಿಜಯ್ ಮನವಿ | Sanchari Vijay | Pleading To Fans

  ಕನ್ನಡ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ತಮ್ಮ ಬೇಸರವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. ತಮ್ಮ 'ಜಂಟಲ್ ಮ್ಯಾನ್' ಸಿನಿಮಾಗೆ ಚಿತ್ರಮಂದಿರ ಸಮಸ್ಯೆ ಎದುರಾಗಿದ್ದು, ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

  ಪ್ರಜ್ವಲ್ ದೇವರಾಜ್ ಅಭಿನಯದ 'ಜಂಟಲ್ ಮ್ಯಾನ್' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿತ್ತು. ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಆದರೂ, ಚಿತ್ರಮಂದಿರಗಳ ಕೊರತೆ ಉಂಟಾಗಿದೆ. ಇಂದು ಕನ್ನಡದಲ್ಲಿಯೇ 12 ಸಿನಿಮಾಗಳು ಬಿಡುಗಡೆ ಆಗಿದ್ದು, 'ಜಂಟಲ್ ಮ್ಯಾನ್'ಗೆ ತೊಂದರೆಯಾಗಿದೆ.

  Gentleman Movie Review: ಕುತೂಹಲಕಾರಿಯಾಗಿದೆ ಜಂಟಲ್ ಮ್ಯಾನ್ ಜರ್ನಿ

  ಸಂಚಾರಿ ವಿಜಯ್ 'ಜಂಟಲ್ ಮ್ಯಾನ್' ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದಾರೆ. ಅವರ ಪಾತ್ರಕ್ಕೂ ಒಳ್ಳೆಯ ಮಾತುಗಳು ಕೇಳಿ ಬಂದಿದೆ. ಇದೀಗ ಚಿತ್ರತಂಡ ತಮ್ಮ ಸಿನಿಮಾಗೆ ಆಗುತ್ತಿರುವ ಸಮಸ್ಯೆಯನ್ನು ಜನರ ಮುಂದೆ ಇಟ್ಟಿದೆ. ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕಪ್ಪು ಡಿಪಿ ಬಳಸಿ ವಿರೋಧ ವ್ಯಕ್ತಪಡಿಸಿದೆ.

  ನೋವು ಹಂಚಿಕೊಂಡ ಸಂಚಾರಿ ವಿಜಯ್

  ನೋವು ಹಂಚಿಕೊಂಡ ಸಂಚಾರಿ ವಿಜಯ್

  ತಮ್ಮ ಫೇಸ್ ಬುಕ್ ಖಾತೆಯಲ್ಲಿ ನಟ ಸಂಚಾರಿ ವಿಜಯ್ ನೋವು ಹಂಚಿಕೊಂಡಿದ್ದಾರೆ. ''ಜಂಟಲ್ ಮ್ಯಾನ್ ಒಂದು ಸ್ವಮೇಕ್ ಸಿನಿಮಾ. ಎಲ್ಲರೂ ಒಳ್ಳೆಯ ಅಭಿಪ್ರಾಯ ನೀಡಿದ್ದಾರೆ. ಆದರೆ, ಸಿನಿಮಾವನ್ನು ಜನರು ನೋಡಬೇಕು ಎನ್ನುವ ಹೊತ್ತಿಗೆ ಅವು ಚಿತ್ರಮಂದಿರಗಳಿಂದ ಕಾಣೆ ಆಗುತ್ತಿದೆ. ಇದು ತುಂಬ ನೋವಿನ ಸಂಗತಿ. ಈ ಚಿತ್ರವನ್ನು ದಯಮಾಡಿ ಕೈ ಬಿಡಬೇಡಿ.'' ಎಂದಿದ್ದಾರೆ.

  ಚಿತ್ರಮಂದಿರಗಳು ಸಿಗುತ್ತಿಲ್ಲ

  ಚಿತ್ರಮಂದಿರಗಳು ಸಿಗುತ್ತಿಲ್ಲ

  ''ಇಂತಹ ಸಿನಿಮಾಗಳು ಗೆದ್ದರೆ ಕನ್ನಡದಲ್ಲಿ ಹೊಸ ಅಲೆಯ ನಿರ್ದೇಶಕ, ನಿರ್ಮಾಪಕರು ಹುಟ್ಟಿಕೊಳ್ಳುತ್ತಾರೆ. ಯಾವುದೇ ಕಳಪೆ ಸಿನಿಮಾ ಆಗಿದ್ದರೆ, ನಾನು ಮಾತನಾಡುತ್ತಿರಲಿಲ್ಲ. ಸಿನಿಮಾ ಎರಡನೇ ವಾರಕ್ಕೆ ಕಾಲಿಟ್ಟಿದೆ. ಆದರೆ, ಬೇರೆ ಬೇರೆ ಸಿನಿಮಾಗಳು ಬರುತ್ತಿರುವ ಕಾರಣ ಒಂದಷ್ಟು ಚಿತ್ರಮಂದಿರಗಳು ಸಿಗುತ್ತಿಲ್ಲ.'' - ಸಂಚಾರಿ ವಿಜಯ್, ನಟ

  ಅಬ್ಬಾ! ನಾಳೆ ಬರೋಬ್ಬರಿ 12 ಕನ್ನಡ ಸಿನಿಮಾಗಳ ಬಿಡುಗಡೆ

  ಸಿನಿಮಾವನ್ನು ಉಳಿಸಿಕೊಡಿ

  ಸಿನಿಮಾವನ್ನು ಉಳಿಸಿಕೊಡಿ

  ''ನಾನು ಎಲ್ಲವೂ ಒಳ್ಳೆಯ ಸಿನಿಮಾ ಮಾಡಲು ಆಗಿಲ್ಲ. ಆದರೆ, ಒಳ್ಳೆಯ ಸಿನಿಮಾ ಮಾಡಿದಾಗಲೂ ಚಿತ್ರಮಂದಿರದಿಂದ ತೆಗೆದಿದ್ದಾರೆ. 'ಜಂಟಲ್ ಮ್ಯಾನ್' ಜನರಿಗೆ ತಲುಪುತ್ತಿದೆ. ಶನಿವಾರ ಮತ್ತು ಭಾನುವಾರ ಸಿನಿಮಾ ನೋಡಿ. ಹಾಗಾದರೆ, ಸೋಮವಾರದಿಂದ ಸಿನಿಮಾ ಮುಂದೆ ಹೋಗುತ್ತದೆ. ಇದೇ ಸಿನಿಮಾ ಬೇರೆ ಭಾಷೆಯಲ್ಲಿ ಬಂದಿದ್ದರೆ, ನಾವು ಕನ್ನಡಿಗರೇ ಹೆಚ್ಚು ಪ್ರೋತ್ಸಾಹ ನೀಡುತ್ತೇವೆ. ಈಗ ಈ ಚಿತ್ರವನ್ನು ಉಳಿಸಿಕೊಡಿ.'' - ಸಂಚಾರಿ ವಿಜಯ್, ನಟ

  ಸ್ಟಾರ್ ನಟರ ಅಭಿಮಾನಿಗಳಿಗೆ ಮನವಿ

  ''ಇಡೀ ತಂಡದ ಶ್ರಮ ನೀವು ನೋಡಿದರೆ ಮಾತ್ರ ಉಳಿಯುತ್ತದೆ. ನಾನು ದರ್ಶನ್ ಸರ್, ಸುದೀಪ್ ಸರ್, ಶಿವಣ್ಣ ಸರ್ ಪುನೀತ್ ಸರ್, ಯಶ್ ಸರ್ ಹೀಗೆ ಎಲ್ಲ ಸ್ಟಾರ್ ನಟರ ಅಭಿಮಾನಿಗಳಿಗೆ ಮನವಿ ಮಾಡುತ್ತೇನೆ. ನೀವು ಹೆಚ್ಚು ಹೆಚ್ಚು ಜನರಿಗೆ ಈ ಸಿನಿಮಾ ತಲುಪಿಸಿದಷ್ಟು ಸಹಾಯ ಆಗುತ್ತದೆ. ನೀವು ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ಇದೆ.'' - ಸಂಚಾರಿ ವಿಜಯ್, ನಟ

  English summary
  Actor Prajwal Devaraj and Sanchari Vijay's 'Gentleman' kannada movie facing theatre problem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X