ಬಿಡುಗಡೆಗೂ ಮುಂಚೆ ಪರಭಾಷೆಯಲ್ಲಿ 'ಜಂಟಲ್ ಮ್ಯಾನ್'ಗೆ ಭಾರಿ ಬೇಡಿಕೆ

ಡೈನಾಮಿಕ್ ಪ್ರಿನ್ಸ್ ನಟನೆಯ ಜಂಟಲ್ ಮ್ಯಾನ್ ಸಿನಿಮಾದ ಟ್ರೈಲರ್ ಭಾರಿ ಸದ್ದು ಮಾಡ್ತಿದೆ. ಸ್ಯಾಂಡಲ್ವುಡ್ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡ ಈ ಚಿತ್ರಕ್ಕೀಗ ಪರಭಾಷೆಯಲ್ಲಿ ಭಾರಿ ಬೇಡಿಕೆ ಬಂದಿದೆ.

ಜಂಟಲ್ ಮ್ಯಾನ್ ಟ್ರೈಲರ್ ನೋಡಿ ಥ್ರಿಲ್ ಆಗಿರುವ ತೆಲುಗು, ತಮಿಳು ಸಿನಿಮಾ ಮಂದಿ, ಚಿತ್ರದ ರೀಮೇಕ್ ಹಕ್ಕಿಗಾಗಿ ಮುಂದೆ ಬಂದಿದ್ದಾರಂತೆ. ಸಿನಿಮಾ ಬಿಡುಗಡೆಗೂ ಮುಂಚೆಯೇ ಪರಭಾಷಿಗರು ರೀಮೇಕ್ ಹಕ್ಕು ಖರೀದಿಸಿಲು ಸಿದ್ಧವಾಗಿರುವುದು ಚಿತ್ರಕ್ಕೆ ಸಿಕ್ಕಿರುವ ಜಯ.

ಡೈಲಾಗ್ ಸಿಂಗ್ ಸಾಯಿ ಕುಮಾರ್ ತೆಲುಗಿನಲ್ಲಿ, ನಟ ಸಿಂಬು ಅವರ ಮ್ಯಾನೇಜರ್ ಮತ್ತು ಪಿಸಿ ಗಣೇಶ್ ತಮಿಳಿನಲ್ಲಿ ಹಾಗೂ ತ್ರಿಶೂರ್ ಬ್ಯಾನರ್ ನಲ್ಲಿ ಸುನಿಲ್ ಮಲಯಾಳಂ ಭಾಷೆಯಲ್ಲಿ ಸಿನಿಮಾ ರೀಮೇಕ್ ಮಾಡಲು ಆಸಕ್ತಿ ತೋರಿದ್ದಾರಂತೆ. ಈ ಕುರಿತು ಯಾವುದೇ ಅಂತಿಮ ನಿರ್ಧಾರವಾಗಿಲ್ಲ.

Gentleman Movie Remake In Telugu And Tamil

ಜನವರಿ 31 ರಂದು ಜಂಟಲ್ ಮ್ಯಾನ್ ಸಿನಿಮಾ ಬಿಡುಗಡೆಯಾಗಲಿದೆ. ಒಳ್ಳೆಯ ಕಥೆ ಮತ್ತು ಕುತೂಹಲಕಾರಿ ಚಿತ್ರಕಥೆಯಿಂದ ನಿರೀಕ್ಷೆ ಹೆಚ್ಚಿಸಿದೆ. ಪ್ರಜ್ವಲ್ ದೇವರಾಜ್ ಕರಿಯರ್ ನಲ್ಲಿ ಇದು ವಿಶೇಷ ಸಿನಿಮಾ ಆಗಿ ಉಳಿದುಕೊಳ್ಳಲಿದೆ ಎಂಬ ಮಾತು ಚಿತ್ರರಂಗದಲ್ಲಿ ಕೇಳಿಬರುತ್ತಿದೆ.

ಈ ಬಗ್ಗೆ ಚಿತ್ರದ ನಿರ್ಮಾಪಕ ಗುರುದೇಶಪಾಂಡೆ ಸಂತಸ ಹಂಚಿಕೊಂಡಿದ್ದು, ''ಟ್ರೈಲರ್ ನೋಡಿ ಬೇರೆ ಭಾಷೆಯವರು ಇಂಪ್ರೆಸ್ ಆಗಿದ್ದಾರೆ. ರೀಮೇಕ್ ಗಾಗಿ ಬೇಡಿಕೆ ಬಂದಿದೆ. ಮಾತುಕತೆ ನಡೆಯುತ್ತಿದೆ. ಇದು ಖುಷಿ ನೀಡಿದೆ'' ಎಂದಿದ್ದಾರೆ.

Gentleman Movie Remake In Telugu And Tamil

ಇತ್ತೀಚಿಗಷ್ಟೆ ಪುನೀತ್ ರಾಜ್ ಕುಮಾರ್ ಮತ್ತು ಧ್ರುವ ಸರ್ಜಾ ಟ್ರೈಲರ್ ಬಿಡುಗಡೆ ಮಾಡಿದ್ದರು. ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನ ಗುರುದೇಶ ಪಾಂಡೆ ನಿರ್ಮಿಸಿದ್ದಾರೆ. ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಂಚಾರಿ ವಿಜಯ್, ಬೇಬಿ ಆರಾಧ್ಯ, ಭರತ್ ಕಲ್ಯಾಣ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Prajwal Devaraj and nishvika naidu starrer Gentleman movie set to release on january 31st. it's going to remake in telugu and tamil.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X