»   » ಶೀಘ್ರದಲ್ಲೇ 'ಆರಂಭ' ಮತ್ತೊಂದು 'ಹೃದಯಸ್ಪರ್ಶಿ' ಪ್ರಮೋ!

ಶೀಘ್ರದಲ್ಲೇ 'ಆರಂಭ' ಮತ್ತೊಂದು 'ಹೃದಯಸ್ಪರ್ಶಿ' ಪ್ರಮೋ!

Posted By:
Subscribe to Filmibeat Kannada

ಪ್ರಾರಂಭದಿಂದಲೂ ತನ್ನ ವಿಭಿನ್ನ ಪ್ರಚಾರದಿಂದ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಚಿತ್ರ 'ಆರಂಭ - ಲಾಸ್ಟ್ ಚಾನ್ಸ್'. ಇತ್ತೀಚೆಗಷ್ಟೇ ನಾಯಕಿಯ ಎದೆಗೆ ಕೈಹಾಕುವ ಟೀಸರ್ ಬಿಡುಗಡೆ ಮಾಡಿ ಸಂಚಲನ ಸೃಷ್ಟಿಸಿರುವ ನಿರ್ದೇಶಕರು ಇದೀಗ ಅಸಲಿ ಪ್ರಮೋ ಬಿಡುಗಡೆ ಮಾಡಲು ರೆಡಿಯಾಗಿದ್ದಾರೆ.

ಆರಂಭದ ಟೀಸರ್ ನಲ್ಲಿ "ವಯಸ್ಸಿಗೆ ಬಂದ ಹುಡುಗಿಗೆ ಯಾರಾದರೂ ಬಂದು ನನ್ನ ಎದೆ ಮುಟ್ಟಲಿ ಎಂಬ ಆಸೆ ಇರುತ್ತದೆ" ಎಂಬ ಡೈಲಾಗ್ ಹಿನ್ನೆಲೆಯಲ್ಲಿ ಕೇಳಿ ಬರುತ್ತಿದ್ದರೆ ತೆರೆಯ ಮೇಲೆ ನಾಯಕನಟ ನಾಯಕಿಯ ಎದೆಗೇ ಕೈಹಾಕುತ್ತಾನೆ. ಈ ರೀತಿಯ ವಿಭಿನ್ನ ಸಾಹಸವನ್ನು ಮಾಡಿ ಗಮನಸೆಳೆದಿದ್ದಾರೆ ಚಿತ್ರದ ನಿರ್ದೇಶಕರಾದ ಅಭಿ ಎಸ್ ಹನಕೆರೆ. ['ಆರಂಭ' ಚಿತ್ರದ ಟೀಸರ್ ನಲ್ಲಿ ಇದೇನಿದು 'ಆ' ದೃಶ್ಯ?]

Aarabmha movie still

ಇನ್ನು ಎರಡನೇ ಪ್ರಮೋದಲ್ಲಿ ಇನ್ನೇನು ಇರುತ್ತದೋ ಏನೋ? ಎಂದು ಎದುರುನೋಡುತ್ತಿರುವವರಿಗೆ ಅಸಲಿ ಉತ್ತರ ಜನವರಿ 7ಕ್ಕೆ ಸಿಗಲಿದೆ. ಅಲ್ಲಿಯವರೆಗೂ ಕಾಯ್ತಾ ಇರಿ ಮತ್ತೊಂದು ಹೃದಯಸ್ಪರ್ಶಿ ಪ್ರಮೋ ನಿಮ್ಮ ಮುಂದೆ ತರುತ್ತಿದ್ದೇವೆ ಎಂದು ಪ್ರಮೋಗೆ ಪ್ರಮೋ ಬಿಡುಗಡೆ ಮಾಡಿದ್ದಾರೆ ಅಚ್ಚರಿ ಮೂಡಿಸಿದ್ದಾರೆ ನಿರ್ದೇಶಕರು.

ಮೊದಲ ಪ್ರಮೋ ಎದೆಯ ಸ್ಪರ್ಶಿಯಾದರೆ ಇದೀಗ ಬಿಡುಗಡೆಯಾಗಲಿರುವ ಎರಡನೇ ಪ್ರಮೋ ಹೃದಯಸ್ಪರ್ಶಿ ಎಂಬುದು ವಿಶೇಷ. ಇಲ್ಲೂ "ಅಹಂಕಾರದಿಂದಲ್ಲ ದುರಹಂಕಾರದಿಂದ ಹೇಳ್ತಾ ಇದ್ದೀನಿ ಇಡೀ ಸಮಾಜದ ದಿಕ್ಕನೇ ಬದಲಾಯಿಸ್ತೀನಿ" ಎಂಬ ಧ್ವನಿ ಕೇಳಿಸುತ್ತದೆ.

ಚಿತ್ರದ ಉಳಿದ ವಿವರಗಳ ಬಗ್ಗೆ ಹೇಳಬೇಕೆಂದರೆ, ಶರ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಡಿ. ಗಣೇಶ್ ವಿ ನಾಗೇನಹಳ್ಳಿ ನಿರ್ಮಿಸಿ ಎಸ್ ಅಭಿ ಹನಕೆರೆ ನಿರ್ದೇಶನದ ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ. ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಊರಾದ ಕಣಗಾಲ್ ನಲ್ಲಿ ಈ ಚಿತ್ರದ ಚಿತ್ರೀಕರಣ ನದೆದಿರುವುದು ಇನ್ನೊಂದು ವಿಶೇಷ. ಕಣಗಾಲ್ ನಲ್ಲಿ ಚಿತ್ರೀಕರಿಸಿರುವ ಮೊದಲ ಚಿತ್ರ ಎನ್ನುತ್ತಾರೆ ನಿರ್ದೇಶಕರು.


ಗೋವಾ, ಮುಂಬೈ, ದೆಹಲಿ, ಪುಣೆ, ಕೋಲ್ಕತ್ತಾ, ಚೆನ್ನೈ, ಕೊಯಮತ್ತೂರು, ಹೊಸೂರು, ಕಾಸರಗೋಡು ಮತ್ತಿತರ ಕಡೆ ಆರಂಭ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಈ ಚಿತ್ರದ ಟ್ಯಾಗ್ ಲೈನ್ "Last Chance" ಎಂಬುದು.

ನಟ ಮಿಥುನ್ ಪ್ರಕಾಶ್, ಅಭಿರಾಮಿ ಸೇರಿದಂತೆ ಕಲಾವಿದರ ಬಳಗವೇ ಈ ಚಿತ್ರದಲ್ಲಿದೆ. ಗುರುಕಿರಣ್, ಗೋಟುರಿ, ಕವಿರಾಜ್, ಅಭಿ ಹನಕೆರೆ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ನಾಗರಾಜ್ ಛಾಯಾಗ್ರಹಣ, ಗಿರೀಶ್ ಸಂಕಲನ ಹಾಗೂ ಸಂದೀಪ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. (ಫಿಲ್ಮಿಬೀಟ್ ಕನ್ನಡ)

English summary
Get ready for second promo of Kannada movie 'Aarambha - Last Chance'', which is all set to release on 7th January. The first teaser of the movie crated lot of curiosity in Sandalwood. The movie directed by S Abhi Hanakere and produced by D Ganesh, V Nagenahalli.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada