»   » ಮೂರು ತಿಂಗಳು ಗಾಂಧಿನಗರದಲ್ಲಿ ಸಿನಿಮಾ ಹಬ್ಬ

ಮೂರು ತಿಂಗಳು ಗಾಂಧಿನಗರದಲ್ಲಿ ಸಿನಿಮಾ ಹಬ್ಬ

By: ಜೀವನರಸಿಕ
Subscribe to Filmibeat Kannada

ಇನ್ನು ಮೂರು ತಿಂಗಳು ಯಾವುದೇ ಹಬ್ಬಗಳಿಲ್ಲ. ನಾಡಿಗೆ ಮುಂದೆ ಬರೋ ಹಬ್ಬ ಅಂದ್ರೆ ವರಮಹಾಲಕ್ಷ್ಮಿ ಹಬ್ಬ. ಅದಾದ ನಂತರ ಗೌರಿ ಗಣೇಶ ಹಬ್ಬ, ದೀಪಾವಳಿ ಹೀಗೆ. ಆದರೆ ಹಬ್ಬಗಳು ಶುರುವಾಗೋದು ಮೂರು ತಿಂಗಳ ನಂತ್ರಾನೇ. ಈ ಮೂರು ತಿಂಗಳಲ್ಲಿ ಸಿನಿಮಾಗಳ ಹಬ್ಬಾನೇ ನಡೆಯುತ್ತೆ.

ಸಿನಿಮಾಗಳು ಅಂದ್ರೆ ರಾಶಿ ರಾಶಿಯಾಗಿ ಬರೋ ಹೊಸಬರ ಸಿನಿಮಾಗಳಲ್ಲ. ಇವತ್ತು ಸ್ಯಾಂಡಲ್ ವುಡ್ ನಲ್ಲಿ ವಾರಕ್ಕೆ ಮೂರು ಸಿನಿಮಾಗಳು ರಿಲೀಸ್ ಆಗ್ತವೆ. ಅದೆಲ್ಲ ಮಾಮೂಲು ಬಿಡಿ. ಆದರೆ ಈಗ ನಿಮ್ಮ ತಟ್ಟೆಗೆ ಬರ್ತಿರೋದು ಮೃಷ್ಟಾನ್ನ ಭೋಜನ. [ಸದ್ದಿಲ್ಲದಂತೆ ಸಾಗಿದೆ ದರ್ಶನ್ 'ಅಂಬರೀಶ' ಶೂಟಿಂಗ್]

ಸ್ಟಾರ್ ಸಿನಿಮಾಗಳು ಮೇ, ಜೂನ್, ಜುಲೈ ಮತ್ತು ಆಗಸ್ಟ್ ಈ ನಾಲ್ಕು ತಿಂಗಳಲ್ಲಿ ಥಿಯೇಟರ್ಗೆ ಅಪ್ಪಳಿಸಲಿವೆ. ಸ್ಯಾಂಡಲ್ ವುಡ್ ನ ಶಿವಣ್ಣ, ಉಪೇಂದ್ರ, ದರ್ಶನ್, ಪುನೀತ್, ಸುದೀಪ್, ಯಶ್ ಸೇರಿದಂತೆ ಅಷ್ಟೂ ಸ್ಟಾರ್ ಗಳ ಸಿನಿಮಾಗಳು ಈ ಮೂರು ತಿಂಗಳಲ್ಲಿ ಬ್ಯಾಕ್ ಟು ಬ್ಯಾಕ್ ತೆರೆಗೆ ಬರಲಿವೆ.

ಈ ಸ್ಟಾರ್ ಗಳ ಸಿನಿಮಾ ಯಾವುದು. ಯಾವ ಸಿನಿಮಾವನ್ನ ಯಾವಾಗ ನೋಡ್ಬಹುದು ಅನ್ನೋ ಇಂಟರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ. ಒಟ್ಟಾರೆ ನಾಡಹಬ್ಬಗಳಿಲ್ಲದಿದ್ರೂ ಸಿನಿಪ್ರೇಮಿಗಳಿಗೆ ಹಬ್ಬವಂತೂ ಗ್ಯಾರಂಟಿ. ನಾಲ್ಕೈದು ಸ್ಟಾರ್ಗಳಲ್ಲಿ ಯಾವ ಸ್ಟಾರ್ ಸಿನಿಮಾ ನೋಡೋದು ಅಂತ ಜನ್ರು ಕನ್ಫ್ಯೂಸ್ ಆಗದಿದ್ರೆ ಅಷ್ಟೇ ಸಾಕು.

ಓಪನಿಂಗ್ ಕೊಡ್ತಾರೆ ಕಿಚ್ಚ

'ಮಾಣಿಕ್ಯ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗ್ರ್ಯಾಂಡ್ ಓಪನಿಂಗ್ ಕೊಡ್ತಾರೆ. ಚಿತ್ರ ಮೇ ಮೊದಲ ವಾರ ತೆರೆಗೆ ಬರೋದು ಕನ್ಫರ್ಮ್.

ಮಾಣಿಕ್ಯ ನಂತರ ಗಜಕೇಸರಿ ಗರ್ಜನೆ

'ಗಜಕೇಸರಿ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿರೋ ಯಶ್ ಸಿನಿಮಾ. ಮೊದಲ ಬಾರಿಗೆ ಯಶ್ ಡಬಲ್ ಆಕ್ಟಿಂಗ್ ಮಾಡ್ತಿದ್ದು ಬ್ಯಾಕ್ ಟು ಬ್ಯಾಕ್ ಗೆಲುವಿನಿಂದ ಯಶ್ ಮುಂದಿನ ಸಿನಿಮಾ ನೋಡೋಕೆ ಕಾದು ಕುಳಿತಿದ್ದಾರೆ.

ಆರ್ಯನ್ ಬರುತ್ತೆ ಮೇ ಕೊನೆಗೆ

ಶಿವಣ್ಣನನ್ನ ಅಥ್ಲೆಟಿಕ್ ಕೋಚ್ ರೂಪದಲ್ಲಿ ನೋಡಲಿರೋ 'ಆರ್ಯನ್' ಚಿತ್ರ ಗ್ರಾಫಿಕ್ಸ್ ವರ್ಕ್ ನಲ್ಲಿ ಬಿಜಿಯಾಗಿದ್ದು 'ಭಜರಂಗಿ' ಗೆಲುವನ್ನ ಕಂಟಿನ್ಯೂ ಮಾಡೋಕೆ ಮೇ ತಿಂಗಳ ಕೊನೆಗೆ ತೆರೆಗೆ ಬರಲಿದೆ.

ಸೂಪರೋ ರಂಗ ಜೂನ್ ಮೊದಲಿಗೆ

ರಿಯಲ್ ಸ್ಟಾರ್ ಉಪ್ಪಿಯ 'ಕಿಕ್' ರೀಮೇಕ್ 'ಸೂಪರ್ರೋ ರಂಗ' ಚಿತ್ರ ಕಂಪ್ಲೀಟ್ ಎಡಿಟಿಂಗ್ ಮುಗಿಸಿದ್ದು ಚಿತ್ರ ಜೂನ್ ಮೊದಲವಾರ ತೆರೆಗೆ ಬರೋ ಸಾಧ್ಯತೆಯಿದೆ. ಉಪ್ಪಿ ಸಿನಿಮಾ 'ಬ್ರಹ್ಮ' ಬಂದು ಒಂದು ಗ್ಯಾಪ್ ಆಗಿದ್ದು 'ಸೂಪರ್ರೋ ರಂಗ' ಬೇಗನೆ ತೆರೆಗಪ್ಪಳಿಸೋ ತಯಾರಿಯಲ್ಲಿದೆ..

ಪುನೀತ್ ಸಿನಿಮಾ ದೂಕುಡು ರೀಮೇಕ್

ಈಗಾಗ್ಲೇ ಟೈಟಲ್ ಮತ್ತು ತ್ರಿಷಾ ಕನ್ನಡ ಎಂಟ್ರಿಯ ಕಾರಣಕ್ಕೆ ಯರ್ರಾಬಿರ್ರಿ ನಿರೀಕ್ಷೆ ಮೂಡಿಸಿರೋ 'ದೂಕುಡು' ರೀಮೇಕ್ 'ರಾಜಕುಮಾರ' ಅಥವಾ 'ಅಧಿಪತಿ' ಅನ್ನೋ ಟೈಟಲ್ ನಲ್ಲಿ ಚಿತ್ರ ತೆರೆಗೆ ಬರಲಿದೆ.

ಅಂಬರೀಶ ಚಾಲೆಂಜ್ ಗೆ ರೆಡಿ

ಜುಲೈ ವೇಳೆಗೆ ದರ್ಶನ್ ಅಭಿನಯದ ಅಂಬರೀಶ ತೆರೆಗೆ ಬರೋದು ಕನ್ಫರ್ಮ್. ದರ್ಶನ್, ಪ್ರಿಯಾಮಣಿ ಮತ್ತು ರಚಿತಾರಾಮ್ ಜೋಡಿಯ ಅಂಬರೀಶನ ಅಬ್ಬರ ಈಗಾಗ್ಲೇ ದರ್ಶನ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

English summary
Get ready for the most awaited Kannada movies in coming months. Darshan, Sudeep, Puneeth, Yash movies are ready for release. Here's a whole range of movies coming up in a theatre near you in 2014. Here's a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada