»   » ಡಾ ರಾಜ್ ಬ್ಯಾನರ್ ಚಿತ್ರದಲ್ಲಿ ಗಿರೀಶ್ ಕಾರ್ನಾಡ್

ಡಾ ರಾಜ್ ಬ್ಯಾನರ್ ಚಿತ್ರದಲ್ಲಿ ಗಿರೀಶ್ ಕಾರ್ನಾಡ್

Posted By:
Subscribe to Filmibeat Kannada
Girish Karnad
ಗಿರೀಶ್ ಕಾರ್ನಾಡ್ ಅವರಿಗೂ ಚಿತ್ರರಂಗಕ್ಕೂ ಹಳೆಯ ನಂಟು. ಚಿತ್ರಕಥೆ, ನಟನೆ ಹಾಗೂ ನಿರ್ದೇಶನ ಹೀಗೆ ಚಿತ್ರರಂಗದ ಅನೇಕ ವಿಭಾಗಗಳಲ್ಲಿ ಕೆಲಸಮಾಡಿರುವ ಅವರು ಈಗಾಗಲೇ ಪ್ರಸಿದ್ಧರು. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಕಾರ್ನಾಡ್ ಅವರ ಅಭಿನಯ ಸಾಮರ್ಥ್ಯ ಗಮನಾರ್ಹವಾದದ್ದು. ಆದರೆ ಸಿಕ್ಕ ಸಿಕ್ಕ ಸಿನಿಮಾಗಳಲ್ಲಿ ನಟಿಸಿ, ಸುದ್ದಿಯಾಗುವವರಲ್ಲ ಈ ಗಿರೀಶ್ ಕಾರ್ನಾಡ್.

ತುಂಬಾ ಚೂಸಿಯಾಗಿರುವ ಕಾರ್ನಾಡ್ ಇತ್ತೀಚಿಗೆ ಅಭಿನಯಿಸಿರುವ ಚಿತ್ರವೆಂದರೆ ಸಲ್ಮಾನ್ ಖಾನ್ ಅಭಿನಯದ ಇದೀಗ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಬಾಲಿವುಡ್ ಚಿತ್ರ 'ಏಕ್ ಥಾ ಟೈಗರ್'. ಆ ಚಿತ್ರದಲ್ಲಿ ಅವರು RAW ಮುಖ್ಯಸ್ಥರಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಗಳಿಕೆ ಮೂಲಕ ಪ್ರದರ್ಶನವಾಗುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ.

ಇಂಥ ಕಾರ್ನಾಡರು, ಇದೀಗ 'ವಜ್ರೇಶ್ವರಿ ಸಂಸ್ಥೆ'ಯಡಿ ನಿರ್ಮಾಣವಾಗುತ್ತಿರುವ, ಪುನೀತ್ ರಾಜ್ ಕುಮಾರ್ ಅಭಿನಯದ 'ಯಾರೇ ಕೂಗಾಡಲಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ಡಾ ರಾಜ್ ಕುಮಾರ್ ಬ್ಯಾನರ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ, ಶಿವರಾಜ್ ಕುಮಾರ್ ನಟನೆ ಹಾಗೂ ಓಂ ಪ್ರಕಾಶ್ ರಾವ್ ನಿರ್ದೇಶನದ 'ಎಕೆ 47' ಚಿತ್ರದಲ್ಲಿ ನಟಿಸಿ ಪ್ರೇಕ್ಷಕರ ಗಮನಸೆಳೆದಿದ್ದರು.

ತಮಿಳಿನ 'ಪೊರಾಲಿ' ಚಿತ್ರದ ಕನ್ನಡ ರೀಮೇಕ್ 'ಯಾರೇ ಕೂಗಾಡಲಿ' ಚಿತ್ರವನ್ನು ವಜ್ರೇಶ್ವರಿ ಸಂಸ್ಥೆಯಡಿ ಮೂಲ ಚಿತ್ರದ ನಿರ್ದೇಶಕರಾದ ಸಮುತ್ತಕರನಿ ಅವರೇ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಲೂಸ್ ಮಾದ ಯೋಗೇಶ್ ಕೂಡ ಅಭಿನಯಿಸುತ್ತಿದ್ದಾರೆ. ಭಾವನಾ ಹಾಗೂ ಸಿಂಧು ಲೋಕನಾಥ್ ಚಿತ್ರಕ್ಕೆ ನಾಯಕಿಯರು. ಒಟ್ಟಿನಲ್ಲಿ 'ಯಾರೇ ಕೂಗಾಡಲಿ'ಗೆ ಗಿರೀಶ್ ಕಾರ್ನಾಡ್ ಆಗಮನವಾಗಲಿದೆ. (ಒನ್ ಇಂಡಿಯಾ ಕನ್ನಡ)

English summary
Girish Karnad acts in a Kannada movie, Puneeth Rajkumar and Yogesh lead 'Yaare Koogadali'. This is Tamil movie Porali remake Kannada movie and director is the Tamil movie Samuttakarani himself. 
 
Please Wait while comments are loading...