»   » ಅನಂತಮೂರ್ತಿ ಕುರಿತು ಗಿರೀಶ್ ಕಾಸರವಳ್ಳಿ ಚಿತ್ರ

ಅನಂತಮೂರ್ತಿ ಕುರಿತು ಗಿರೀಶ್ ಕಾಸರವಳ್ಳಿ ಚಿತ್ರ

Posted By:
Subscribe to Filmibeat Kannada

ಪ್ರತಿಭಾನ್ವಿತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಕುರಿತು ಒಂದು ಸಾಕ್ಷ್ಯಚಿತ್ರ ಮಾಡಿದ್ದಾರೆ. ತಮ್ಮ ಸಾಕ್ಷ್ಯಚಿತ್ರಕ್ಕೆ ಅವರು "Ananthamurthy not a Biography But Hypothesis" ಎಂದು ಹೆಸರಿಟ್ಟಿದ್ದಾರೆ.

ಫಿಲಂಸ್ ಡಿವಿಜನ್ ನಿರ್ಮಿಸಿರುವ ಈ ಸಾಕ್ಷ್ಯಚಿತ್ರದ ಪ್ರದರ್ಶನ ಶನಿವಾರ (ಡಿ.14) ಬೆಂಗಳೂರು ಇನ್ಫೆಂಟ್ರಿ ರಸ್ತೆಯಲ್ಲಿರುವ ವಾರ್ತಾ ಇಲಾಖೆಯ ಸುಲೋಚನಾ ಹಾಲ್ ನಲ್ಲಿ ಪ್ರದರ್ಶಿಸಲಾಗುತ್ತಿದೆ. ಬೆಳಗ್ಗೆ 10.30ಕ್ಕೆ ಪ್ರದರ್ಶನವಿರುತ್ತದೆ.

Documentary film on U.R. Ananthamurthy

ಈ ಸಾಕ್ಷ್ಯಚಿತ್ರ ಅನಂತಮೂರ್ತಿ ಅವರ ಬಗ್ಗೆ ಹೊಸ ಬೆಳಕು ಚೆಲ್ಲಲಿದೆ. ಅವರ ಸಾಮಾಜಿಕ ಹೋರಾಟ, ಗಾಂಧಿಜಿಯವರ ಆದರ್ಶ, ಸಮಾಜವಾದಿ ಧೋರಣೆ ಇವೆಲ್ಲವನ್ನೂ ಚಿತ್ರದಲ್ಲಿ ನೋಡಬಹುದು. ಹಲವು ದಶಕಗಳಿಂದ ಚಿಂತಕರು, ವಿಮರ್ಶಕರ ಜೊತೆಗಿನ ಅವರ ಒಡನಾಟವನ್ನೂ ಕಾಣಬಹುದಾಗಿದೆ.

ಈ ಸಾಕ್ಷ್ಯಚಿತ್ರಕ್ಕೆ ಗಿರೀಶ್ ಕಾಸರವಳ್ಳಿ ಅವರು ಚಿತ್ರಕಥೆ ಹಾಗೂ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಹಣ ಜಿ.ಎಸ್.ಭಾಸ್ಕರ್, ವಿಷಯ ಸಮಾಲೋಚನೆ ಎನ್.ಮನುಚಕ್ರವರ್ತಿ, ಸಂಕಲನ ಮೋಹನ್ ಕಾಮಾಕ್ಷಿ, ಸಂಗೀತ ಬಿಂದು ಮಾಲಿನಿ ಹಾಗೂ ಗೋಕುಲ್ ಅಭಿಷೇಕ್ ಧ್ವನಿ ಇದೆ. (ಒನ್ಇಂಡಿಯಾ ಕನ್ನಡ)

English summary
The preview of documentary film on "Ananthamurthy...not a biography...but a Hypothesis" (Produced by Films Division,Mumbai) held at Sulochana Hall of Information department, at Infantry Road on Saturday 14th at 10.30 am. The film foregrounds the vision of his fiction and his reflections on Gandhian thought, socialism and diverse cultural issues.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada