»   » ಗೋಧಿ ಬಣ್ಣ ಸಾಧಾರಣ ಮೈಕಟ್ಟು ಅನಂತ್ ನಾಪತ್ತೆ ವಿಡಿಯೋ

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಅನಂತ್ ನಾಪತ್ತೆ ವಿಡಿಯೋ

Posted By:
Subscribe to Filmibeat Kannada

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಎಂಬ ಮಾತು ಕಿವಿಗೆ ಬೀಳುತ್ತಲೇ ಇದು ಯಾವುದೋ ನಾಪತ್ತೆಯಾದವರ ಬಗ್ಗೆ ಪ್ರಕಟಣೆ ಎಂದು ಆಕಾಶವಾಣಿ ಕೇಳುಗರಿಗೆ ಥಟ್ಟನೆ ಹೊಳೆಯುತ್ತದೆ. ಇದೇ ಹೆಸರಿನಲ್ಲಿ ಸಿನಿಮಾ ಮಾಡುತ್ತಿರುವ ಹೊಸಬರ ತಂಡ ಈಗ ಚಿತ್ರದ ಮುಹೂರ್ತ ಸಮಾರಂಭ, ಅನಂತ್ ನಾಗ್ ಅನಿಸಿಕೆ, ರಕ್ಷಿತ್ ಶೆಟ್ಟಿ ಅಭಿಪ್ರಾಯ, ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.

ಚಿತ್ರದ ಕಥೆ, ಶೀರ್ಷಿಕೆ ಯೂ ಟ್ಯೂಬ್‌ನಲ್ಲಿ ಹರಿದಾಡುತ್ತಿರುವ ಚಂದದ ಪ್ರೋಮೋ ಈಗಾಗಲೇ ಸದ್ದು ಮಾಡಿದೆ. ಈಗ ಬಿಡುಗಡೆಯಾಗಿರುವ ಟೀಸರ್ ನ ಬಗ್ಗೆ ಹಾಗೂ ಚಿತ್ರದ ಬಗ್ಗೆ ನಿರ್ದೇಶಕ ಹೇಮಂತ್ ರಾವ್, ನಿರ್ಮಾಪಕ ಪುಷ್ಕರ್ ಅವರು ಕೂಡಾ ಮಾತನಾಡಿದ್ದಾರೆ.

ಅನಂತ್ ನಾಗ್ ಮೆಚ್ಚುಗೆ: ಕಳೆದ ಹತ್ತು ಹದಿನೈದು ವರ್ಷಗಳಿಂದ ಇಂಥ ಸ್ಕ್ರಿಪ್ಟ್ ನನಗೆ ಸಿಕ್ಕಿರಲಿಲ್ಲ. ಹೊಸಬರ ತಂಡವಾದರೂ ಅವರ ವೃತ್ತಿಪರತೆ ನನಗೆ ಮೆಚ್ಚುಗೆಯಾಗಿದೆ. ಚಿತ್ರದ ಬಗ್ಗೆ ಹೆಚ್ಚು ಹೇಳುವುದಕ್ಕಿಂತ ತೆರೆಯ ಮೇಲೆ ನೋಡಿದರೆ ಚೆಂದ. ಒಟ್ಟಾರೆ ಅಪ್ಪ ಮಗನ ಸಂಬಂಧದ ಬಗ್ಗೆ ಈ ಚಿತ್ರದಲ್ಲಿ ಹೊಸತನದ ನಿರೂಪಣೆ ಕಾಣಬಹುದು.

Godhi Banna Sadharna Mykattu Muhurtham plus Search Promo

ನಿರ್ದೇಶಕ ಹೇಮಂತ್: ಗಿರೀಶ್‌ ಕಾಸರವಳ್ಳಿ ಅವರ ಜತೆ "ಗುಲಾಬಿ ಟಾಕೀಸ್‌' ಚಿತ್ರ, ಜೇಕಬ್‌ ವರ್ಗೀಸ್‌ ಜತೆಯಲ್ಲೂ "ಪೃಥ್ವಿ' ಹಾಗು "ಸವಾರಿ' ಚಿತ್ರಗಳಲ್ಲಿ ಸಹನಿರ್ದೇಶಕರಾಗಿ ದುಡಿದ ಅನುಭವವಿರುವ ಹೇಮಂತ್ ಅವರು ಮೊದಲ ಚಿತ್ರದಲ್ಲೇ ಚಿತ್ರರಂಗದ ದಿಗ್ಗಜ ಅನಂತ್ ನಾಗ್ ಹಾಗೂ ಹೊಸ ಪ್ರತಿಭೆ ರಕ್ಷಿತ್ ಶೆಟ್ಟಿ ಅವರಿಗೆ ನಿರ್ದೇಶನ ಮಾಡುತ್ತಿದ್ದಾರೆ.ಲೂಸಿಯಾ ಖ್ಯಾತಿಯ ಶ್ರುತಿ ಹರಿಹರನ್ ಚಿತ್ರಕ್ಕೆ ನಾಯಕಿ.

ದೂರದರ್ಶನ, ಆಕಾಶವಾಣಿಯಲ್ಲಿ ಬರುವ ಕಾಣೆಯಾದವರ ಪ್ರಕಟಣೆಯನ್ನು ಕಂಡಾಗ ಚಿತ್ರದ ಬಗ್ಗೆ ಕಥೆ ಮೂಡಿತು. ಪ್ರಕಟಣೆಯಲ್ಲಿ ಕಾಣೆಯಾದವರ ವಿವರ ಇರುತ್ತದೆ. ಆದರೆ, ಅವರು ಸಿಕ್ಕಿದರೋ ಇಲ್ಲವೋ ಗೊತ್ತಾಗುವುದಿಲ್ಲ. ಈ ಬಗ್ಗೆ "ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಎಂಬ ಶೀರ್ಷಿಕೆ ಇಟ್ಟುಕೊಂಡು ಸಿನಿಮಾ ಮಾಡಿದರೆ ಹೇಗೆ ಎಂದು ಅಂದುಕೊಂಡೆ ಅದಕ್ಕೆ ತಕ್ಕಂತೆ ತುಮಕೂರಿನ ಪುಷ್ಕರ್‌ ಮಲ್ಲಿಕಾರ್ಜುನ್‌ ನಿರ್ಮಾಣದ ಹೊಣೆ ಹೊತ್ತುಕೊಂಡರು.

ಅನಂತ್ ಹಾಗೂ ರಕ್ಷಿತ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಈ ಚಿತ್ರಕ್ಕೆ ಕಥೆಯೇ ಜೀವಾಳ ಎಂದು ನಿರ್ದೇಶಕ ಹೇಮಂತ್ ಹೇಳಿದ್ದಾರೆ. ಸದ್ಯಕ್ಕೆ ಚಿತ್ರದ ಹೊಸ ಪ್ರೋಮೋ ನೋಡಿ...

Godhi Banna Sadharna Mykattu Muhurtham
English summary
Godhi Banna Sadharna Mykattu Muhurtham plus search Promo is out. Small snippets from the Muhurtham along with interviews with Anant Nag & Rakshit Shetty. The next promo for our film can be found at the end of the video. Please watch, share and support.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada