Just In
Don't Miss!
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಎಫ್ಸಿ ಗೋವಾ, Live ಸ್ಕೋರ್
- News
"ಸಿಬಿಐ, ಇಡಿ ಮೂಲಕ ಮೋದಿ ತಮಿಳುನಾಡನ್ನು ನಿಯಂತ್ರಿಸುವ ಪ್ರಯತ್ನದಲ್ಲಿದ್ದಾರೆ"
- Automobiles
2021ರ ಕ್ರೆಟಾ ಕಂಪ್ಯಾಕ್ಟ್ ಎಸ್ಯುವಿ ಕಾರಿನ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಚಿತ್ರಕ್ಕೆ ಮೂರು ವರ್ಷ
ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ಕನ್ನಡ ಚಿತ್ರಂಗದಲ್ಲಿ ತೆರೆಗೆ ಬಂದ ಒಂದು ವಿಭಿನ್ನ ಸಿನಿಮಾ. ಕನ್ನಡ ಚಿತ್ರಾಭಿಮಾನಿಗಳ ಮನಗೆದ್ದು ಭರ್ಜರಿ ಯಶಸ್ಸುಗೊಳಿಸಿತ್ತು. ತಂದೆ ಮಗನ ಬಾಂಧವ್ಯದ ನಡುವೆ ಇದ್ದ ಈ ಸಿನಿಮಾ ಕನ್ನಡ ಪ್ರೇಕ್ಷಕರ ಮನ ಕಲಕುವಂತಿತ್ತು.
ತಂದೆಯ ಪಾತ್ರದಲ್ಲಿ ಅನಂತ್ ನಾಗ್ ಮಗನ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದರು. ಅನಂತ್ ನಾಗ್ ಪಾತ್ರ ನೋಡುಗರ ಮನ ಮುಟ್ಟುವಂತಿತ್ತು. ಕಳೆದು ಹೋಗುವ ತಂದೆಯನ್ನು ಹುಡುಕುವ ಮಗನ ಕಥೆ ಇದಾಗಿತ್ತು. ಈ ಸಿನಿಮಾದ ಬಗ್ಗೆ ಈಗ್ಯಾಕೆ ಅಂದ್ರೆ ಚಿತ್ರ ರಿಲೀಸ್ ಆಗಿ ಮೂರು ವರ್ಷಗಳು ಕಳೆದಿವೆ.
ಮತ್ತೆ ನಿರ್ದೇಶನಕ್ಕೆ ಮರಳಿದ ಸಿಂಪಲ್ ಸ್ಟಾರ್: ರಕ್ಷಿತ್ ಈಗ 'ಪುಣ್ಯಕೋಟಿ'
2016 ಜೂನ್ 3ರಂದು ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ಸಿನಿಮಾ ರಿಲೀಸ್ ಆಗಿತ್ತು. ನಿರ್ದೇಶಕ ಹೇವಂತ್ ರಾವ್ ನಿರ್ದೇಶನದ ಮೊದಲ ಸಿನಿಮಾ. ಹೇಮಂತ್ ರಾವ್ ಚೊಚ್ಚಲ ಚಿತ್ರದಲ್ಲೆ ಸ್ಯಾಂಡಲ್ ವುಡ್ ನ ಬರವಸೆಯ ನಿರ್ದೇಶಕನಾಗಿ ಗಮನ ಸೆಳೆದಿದ್ರು.
ಅನಂತ್ ನಾಗ್, ರಕ್ಷಿತ್ ಶೆಟ್ಟಿ, ವಸಿಷ್ಠ ಸಿಂಹ ಮತ್ತು ಶ್ರುತಿ ಹರಿಹರನ್ ಅಭಿನಯ, ಚರಣ್ ರಾಜ್ ಸಂಗೀತ ಹೇಮಂತ್ ರಾವ್ ನಿರ್ದೇಶನ 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಒಂದೊಳ್ಳೆ ಸಿನಿಮಾವಾಗಿ ಹೊರಹೊಮ್ಮಲು ಕಾರಣವಾಗಿತ್ತು. ಚಿತ್ರಕ್ಕೆ ನಿರ್ಮಾಪಕ ಪುಷ್ಕರ್ ಮಲ್ಲಿಖಾರ್ಜುನಯ್ಯ ಬಂಡವಾಳ ಹೂಡಿದ್ದರು.
ಸದ್ಯ ಮೂರು ವರ್ಷದ ಸಂದರ್ಭದಲ್ಲಿ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ ನಿರ್ದೇಶಕ ಹೇವಂತ್ ರಾವ್. "ಈ ಸಿನಿಮಾ ನನ್ನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿತು. ಈ ಸಿನಿಮಾ ಈ ಮಟ್ಟಕ್ಕೆ ಸಕ್ಸಸ್ ಆಗಲು ಕಾರಣರಾದ ಎಲ್ಲರಿಗೂ, ಚಿತ್ರತಂಡ, ಕಲಾವಿದರು ಮತ್ತು ಪ್ರೇಕ್ಷಕರಿಗೆ ನಾನು ಕೃತಜ್ಞನಾಗಿರುತ್ತೇನೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ಸಿನಿಮಾ ರಿಲೀಸ್ ಆದ ನಂತರ ಅಂದ್ರೆ ವರ್ಷಗಳ ಬಳಿಕ ಹೇಮಂತ್ ರಾವ್ ಮತ್ತೊಂದು ಸಿನಿಮಾ 'ಕವಲುದಾರಿ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಕವಲುದಾರಿ ಇತ್ತೀಚಿಗಷ್ಟೆ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.