»   » ಮತ್ತೆ ಪ್ರಶಸ್ತಿ ಪಡೆದ ಲಕ್ಕಿ ಸ್ಟಾರ್ ರಮ್ಯಾ, ಪುನೀತ್

ಮತ್ತೆ ಪ್ರಶಸ್ತಿ ಪಡೆದ ಲಕ್ಕಿ ಸ್ಟಾರ್ ರಮ್ಯಾ, ಪುನೀತ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಗೋಲ್ಡನ್ ಗರ್ಲ್ ರಮ್ಯಾಗೆ ಇನ್ನೊಂದು ಪ್ರಶಸ್ತಿ ಸಿಕ್ಕಿದೆ. ಫಿಲಂ ಫೇರ್, ಬೆಂಗಳೂರು ಟೈಮ್ಸ್ ಸೇರಿದಂತೆ ಈ ವರ್ಷದಲ್ಲಿ ರಮ್ಯಾಗೆ ಸಿಗುತ್ತಿರುವ ಹನ್ನೆರಡನೇ ಪ್ರಶಸ್ತಿಯಿದು. ಈ ಮೊದಲು ಬರೋಬ್ಬರಿ ಹನ್ನೊಂದು ಪ್ರಶಸ್ತಿ ಪಡೆದ ರಮ್ಯಾಗೆ ಇತ್ತೀಚಿಗೆ 'ಆಡಿ ರಿಡ್ಜ್ ಐಕಾನ್ ಅವಾರ್ಡ್ಸ್ - 2012' ಸಿಗುವುದರ ಮೂಲಕ ಪ್ರಶಸ್ತಿಗಳ ಸಂಖ್ಯೆ ಹನ್ನೆರಡಾಗಿದೆ. ರಮ್ಯಾ ಮಾತ್ರವಲ್ಲದೇ ಕನ್ನಡದ ಪವರ್ ಸ್ಟಾರ್ ಪುನೀತ್ ಅವರಿಗೆ ಕೂಡ ಈ ಪ್ರಶಸ್ತಿ ಸಿಕ್ಕಿದೆ.

ಈ 'ಆಡಿ ಐಕಾನ್ ಪ್ರಶಸ್ತಿ' ಪಡೆದಿರುವ ಇತರರೆಂದರೆ, ಪ್ರಭುದೇವಾ, ರಾಣಾ ದಗ್ಗುಬಾಟಿ, ರೀಮಾ ಕಲ್ಲಿಂಗಲ್, ತ್ರಿಶಾ ಕೃಷ್ಣನ್, ಅನಿರುದ್ಧ್ ರವಿಚಂದರ್ ಮುಂತಾದವರು. ಇತ್ತೀಚಿಗೆ ರಮ್ಯಾ ಅಭಿನಯದ ಚಿತ್ರಗಳು ತೆರೆಗೆ ಬರುತ್ತಿರುವುದು ಕಡಿಮೆಯಾಗಿದೆ. ಆದರೆ ಒಂದಾದ ಮೇಲೆ ಇನ್ನೊಂದರಂತೆ ಪ್ರಶಸ್ತಿ ಪಡೆಯುವುದರ ಮೂಲಕ ರಮ್ಯಾ ಇಡೀ ವರ್ಷವೂ ಸುದ್ದಿಯಲ್ಲೇ ಇದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಚಿತ್ರಗಳಿಗೇ ರಮ್ಯಾ ಇಷ್ಟೊಂದು ಪ್ರಶಸ್ತಿ ಪಡೆದಿದ್ದಾರೆ.

ಕಳೆದ ವರ್ಷ ಶ್ರೀನಗರ ಕಿಟ್ಟಿ ಜೊತೆ ನಾಯಕಿಯಾಗಿ ರಮ್ಯಾ ನಟಿಸಿದ 'ಸಂಜು ವೆಡ್ಸ್ ಗೀತಾ' ಚಿತ್ರ ಬಹಳಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಆ ಚಿತ್ರದ ಅಭಿನಯಕ್ಕಾಗಿ ರಮ್ಯಾಗೆ ಪ್ರಪಂಚದ ಮೂಲೆಮೂಲೆಗಳಿಂದಲೂ ಪ್ರಶಸ್ತಿಗಳು ಲಭಿಸಿ ಪ್ರಶಸ್ತಿಗಳ ಸರಮಾಲೆಯೇ ರಮ್ಯಾ ಕೊರಳಲ್ಲಿದೆ. ಇಷ್ಟೇ ಅಲ್ಲ, ದುನಿಯಾ ವಿಜಯ್ ಜೊತೆ ನಟಿಸಿದ 'ಜಾನಿ ಮೇರಾ ನಾಮ್' ಚಿತ್ರದ ಅಭಿನಯಕ್ಕೂ ರಮ್ಯಾ ಸಾಕಷ್ಟು ಪ್ರಶಸ್ತಗಳನ್ನು ಪಡೆದಿದ್ದಾರೆ.

ಈ ವರ್ಷ, 2012 ರಲ್ಲಿ ಬಿಡುಗಡೆಯಾದ ರಮ್ಯಾ ನಟನೆಯ ಚಿತ್ರಗಳೆಂದರೆ ಲೂಸ್ ಮಾದ ಯೋಗೇಶ್ ನಾಯಕತ್ವದ 'ಸಿದ್ಲಿಂಗು', ಯಶ್ ನಾಯಕತ್ವ ಹಾಗೂ ರಾಧಿಕಾ ನಿರ್ಮಾಣದ 'ಲಕ್ಕಿ', ಉಪೇಂದ್ರ ನಟನೆ ಹಾಗೂ ಮುನಿರತ್ನ ನಿರ್ಮಾಣದ 'ಕಠಾರಿ ವೀರ ಸುರಸುಂದರಾಂಗಿ'. ಕವಿತಾ ಲಂಕೇಶ್ ನಿರ್ದೇಶನದ 'ಕ್ರೇಜಿಲೋಕ' ದಲ್ಲಿ ರಮ್ಯಾ ಹಾಡೊಂದರಲ್ಲಿ ಕಾಣಿಸಿಕೊಂಡರಾದರೂ ಅದೇನು ಲೆಕ್ಕಕ್ಕೆ ಸಿಗಲಿಲ್ಲ. ಸದ್ಯಕ್ಕೆ ರಮ್ಯಾ, ದಿಗಂತ್ ಹಾಗೂ ಪ್ರಜ್ವಲ್ ದೇವರಾಜ್ ನಾಯಕತ್ವದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Golden Girl Ramya won the 'Audi RITZ Icon Awards 2012' recently. This award is 12th for Ramya on this year 2012 and Power Star Puneeth Rajkumar also won this. Ramya is now acting in two movie with Prajwal Devaraj and Diganth. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada