»   » ಗೋಲ್ಡನ್ ಗರ್ಲ್ ರಮ್ಯಾ ಸೀಕ್ರೇಟ್ ಸಂಗತಿಗಳು

ಗೋಲ್ಡನ್ ಗರ್ಲ್ ರಮ್ಯಾ ಸೀಕ್ರೇಟ್ ಸಂಗತಿಗಳು

By: ಉದಯರವಿ
Subscribe to Filmibeat Kannada

ಕನ್ನಡ ಚಿತ್ರರಂಗಕ್ಕೆ ಹಾಗೆ ಬಂದು ಹೀಗೆ ಹೋದ ತಾರೆಗಳು ಅದೆಷ್ಟೋ. ಆದರೆ ಒಂದು ದಶಕಕ್ಕೂ ಅಧಿಕ ಕಾಲ ನಂಬರ್ ಒನ್ ಪಟ್ಟ ಉಳಿಸಿಕೊಳ್ಳುವುದೆಂದರೆ ಸಾಮಾನ್ಯದ ಮಾತೆ. ಹಾಗೆ ಉಳಿಸಿಕೊಂಡ ಕೆಲವೇ ಕೆಲವು ತಾರೆಗಳಲ್ಲಿ ಗೋಲ್ಡನ್ ಗರ್ಲ್ ರಮ್ಯಾ ಕೂಡ ಒಬ್ಬರು.

ರಮ್ಯಾ ಅವರು ನವೆಂಬರ್ 29ಕ್ಕೆ 30ರ ಗಡಿದಾಟುತ್ತಿದ್ದಾರೆ. ತಮ್ಮ ಜೀವನದಲ್ಲಿ ಹೊಸ ವಸಂತವನ್ನು ಬರಮಾಡಿಕೊಳ್ಳುತ್ತಿರುವ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಈ ಹಿನ್ನೆಲೆಯಲ್ಲಿ ರಮ್ಯಾ ಬಗ್ಗೆ ಒಂದಷ್ಟು ಸೀಕ್ರೇಟ್ ಸಂಗತಿಗಳು ನಿಮಗಾಗಿ.

ರಮ್ಯಾ ಅವರ ತಂದೆತಾಯಿ ಯಾರು ಗೊತ್ತೆ?

ರಮ್ಯಾ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮೊಮ್ಮಗಳಂತೆ ಎಂಬ ಸುದ್ದಿ ಇತ್ತು. ಈ ಬಗ್ಗೆ ಸ್ಪಷ್ಟಪಡಿಸಿರುವ ರಮ್ಯಾ, ಕೃಷ್ಣ ಅವರೊಂದಿಗೆ ತಮಗೆ ಯಾವ ರೀತಿಯಲ್ಲೂ ಸಂಬಂಧ ಇಲ್ಲ ಎಂದಿದ್ದರು. ಅವರ ತಂದೆಯ ಹೆಸರು ಆರ್.ಟಿ.ನಾರಾಯಣ್ ಹಾಗೂ ತಾಯಿಯ ಹೆಸರು ರಂಜಿತಾ. ಅಪ್ಪಟ ಮಂಡ್ಯ ಮೂಲದ ಹುಡುಗಿ ರಮ್ಯಾ.

ಗೋಲ್ಡನ್ ಗರ್ಲ್ ರಮ್ಯಾ ಹೈಟು ಎಷ್ಟು ಗೊತ್ತೇ?

ರಮ್ಯಾ ಅವರು ಅಂತಹ ಎತ್ತರದ ಹುಡುಗಿ ಅಲ್ಲ ಬಿಡ್ರಿ ಎಂದು ಆಡಿಕೊಳ್ಳುವವರೇ ಹೆಚ್ಚು. ಆದರೆ ಅವರಿಗೂ ಅವರ ಎತ್ತರ ಎಷ್ಟಿರಬಹುದು ಎಂಬುದು ಬಹುಶಃ ಗೊತ್ತಿರಲಿಕ್ಕಿಲ್ಲ. ರಮ್ಯಾ ಎತ್ತರ ಐದು ಅಡಿ ಮೂರು ಇಂಚು. ಹುಡುಗಿ ಇದಕ್ಕಿಂತಲೂ ಎತ್ತರ ಇದ್ದರೆ ಏನು ಚೆಂದ ಬಿಡ್ರಿ.

ಹವ್ಯಾಸ, ಇಷ್ಟಪಡುವ ತಿಂಡಿ, ಬಣ್ಣ ಯಾವುದು?

ರಮ್ಯಾಗೆ ಚಿತ್ರಾನ್ನ ಎಂದರೆ ಪಂಚಾಮೃತದಷ್ಟೇ ಇಷ್ಟ. ಅದರಲ್ಲೂ ಚಿತ್ರಾನ್ನದ ಜೊತೆಗೆ ಚಿಪ್ಸ್ ಇದ್ದರಂತೂ ಸೂಪರ್ ಕಾಂಬಿನೇಷನ್. ಇನ್ನು ಬಣ್ಣದ ವಿಚಾರಕ್ಕೆ ಬರುವುದಾದರೆ ಕಪ್ಪು ಹಾಗೂ ಹಸಿರು ಬಣ್ಣ ಇಷ್ಟ. ಪುಸ್ತಕ ಓದುವುದು, ಸಂಗೀತ ಕೇಳುವುದು, ಸಿನೆಮಾ ವೀಕ್ಷಣೆ ಹವ್ಯಾಸಗಳು.

ಇಷ್ಟ ಪಡುವ ನಿರ್ದೇಶಕ, ನಟ ನಟಿಯರು?

ಯೋಗರಾಜ್ ಭಟ್ ಅವರ ನಿರ್ದೇಶನ ಎಂದರೆ ರಮ್ಯಾ ಇಷ್ಟ. ಆದರೆ ಅವರು ಯೋಗರಾಜ್ ಭಟ್ಟರ ನಿರ್ದೇಶನದಲ್ಲಿ ಅಭಿನಯಿಸಿದ್ದು ಒಂದೇ ಒಂದು ಚಿತ್ರದಲ್ಲಿ, ರಂಗ ಎಸ್ಎಸ್ಎಲ್ ಸಿ. ಇಷ್ಟದ ತಾರೆಗಳು ರಾಜ್ ಕುಮಾರ್, ಅಮಿತಾಬ್ ಬಚ್ಚನ್, ರಜನಿಕಾಂತ್, ಮಮ್ಮುಟ್ಟಿ, ಶಾರುಖ್ ಖಾನ್, ಚಿರಂಜೀವಿ, ಮೋಹನ್ ಲಾಲ್, ಸೌಂದರ್ಯ, ಶೋಭನಾ ಹಾಗೂ ಶ್ರೀದೇವಿ.

ಎಂಥಹ ಪಾತ್ರ, ಚಿತ್ರಗಳೆಂದರೆ ರಮ್ಯಾಗೆ ಇಷ್ಟ?

ಅಭಿನಯಕ್ಕೆ ಸವಾಲೊಡ್ಡುವಂತಹ ಪಾತ್ರಗಳಾಗಿರಬೇಕು. ಹೆಸರಾಂತ ನಿರ್ದೇಶಕರ ಚಿತ್ರದಲ್ಲಿ ಅಭಿನಯಿಸಲು ಇಷ್ಟ. ಜೊತೆಜೊತೆಯಲಿ, ಅಮೃತಧಾರೆ, ಮೀರಾ ಮಾಧವ ರಾಘವ ಚಿತ್ರಗಳಂತಹ ಟ್ರೆಂಡ್ ಇಷ್ಟ. ರಮ್ಯಾ ಅವರ ರಾಶಿ ಯಾವುದು ಗೊತ್ತೇ? ಸದಾ ಕನಸುಗಳ ರೆಕ್ಕೆಯ ಮೂಲಕ ಕಲ್ಪನೆಯ ಲೋಕದಲ್ಲಿ ಹಾರಾಡಲು ಬಯಸುವ ಕುಂಭ ರಾಶಿ!


ಏನಪ್ಪಾ ಅಂಥಹಾ ಸೀಕ್ರೇಟ್ ಅದು ಎಂದು ನಿಮಗೆ ಅಚ್ಚರಿಯಾಗಬಹುದು. ಮುಂದೆ ಓದುತ್ತಾ ಹೋದಂತೆ ನಿಮಗೆ ಗೊತ್ತಾಗುತ್ತದೆ. ರಮ್ಯಾ ಬಗೆಗಿನ ಒಂದೊಂದೇ ಸೀಕ್ರೇಟ್ ಸಂಗತಿಗಳು ಬಿಚ್ಚಿಕೊಳ್ಳುತ್ತಾ ಸಾಗುತ್ತವೆ.

ಸಾಮಾನ್ಯವಾಗಿ ತಾರೆಯೊಬ್ಬರ ವೈಯಕ್ತಿಕ ವಿಚಾರಗಳ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದ್ದೇ ಇರುತ್ತದೆ. ಅವರ ಮನೆ ಎಲ್ಲಿ, ಮೊಬೈಲ್ ನಂಬರ್ ಗೊತ್ತಾ, ಅವರಿಗೆ ಏನಿಷ್ಟ, ಅವರ ರಾಶಿ ಯಾವುದು, ಅವರ ತಂದೆತಾಯಿ ಯಾರು, ಎಲ್ಲಿಯವರು...ಹೀಗೆ ನಾನಾ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿರುತ್ತವೆ.

English summary
Golden Girl Ramya celebrates her birthday on November 29. Here are some secreat facts about the actress. Let's wish to gorgeous actress Ramya. Born on 29th November 1981 in Bangalore, Karnataka.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada