For Quick Alerts
  ALLOW NOTIFICATIONS  
  For Daily Alerts

  ನಟಿ ರಮ್ಯಾ ನೀರ್ ದೋಸೆ ಈಗ ಖಾಲಿ ದೋಸೆ

  By Rajendra
  |

  ಗೋಲ್ಡನ್ ಗರ್ಲ್ ರಮ್ಯಾ ಅವರು 'ನೀರ್ ದೋಸೆ' ಠುಸ್ ಆಗಿದೆ. ಅವರು ಚಿತ್ರದಿಂದ ಹೊರಬಿದ್ದಿದ್ದಾರೆ. ಚಿತ್ರದಲ್ಲಿ ಅಭಿನಯಿಸುವುದಾಗಿ ಹೇಳಿದ್ದ ಅವರು ನಿರ್ಮಾಪಕ ಸುಧಿ ಅವರಿಂದ ಮುಂಗಡವಾಗಿ ರು.15 ಲಕ್ಷ ಹಣ ತೆಗೆದುಕೊಂಡಿದ್ದರು. ಈಗ ನೀರ್ ದೋಸೆಯನ್ನು ಕ್ಯಾನ್ಸಲ್ ಮಾಡಿದ್ದಾರೆ.

  ಇದ್ದಕ್ಕಿದ್ದಂತೆ ರಮ್ಯಾ ಅವರಿಗೆ ಅದೇನಾಯಿತೋ ಏನೋ ಚಿತ್ರವನ್ನು ಕೈಬಿಟ್ಟಿದ್ದಾರೆ. ಈ ಬಗ್ಗೆ ಟ್ವೀಟಿಸಿರುವ ಅವರು, "ಚಿತ್ರಕಥೆ ತುಂಬಾ ಇಷ್ಟವಾಗಿತ್ತು. ಆದರೆ ಆ ಪಾತ್ರಕ್ಕೆ ತಮ್ಮ್ಮಿಂದ ಸಾತ್ವಿಕ ನ್ಯಾಯ ಒದಗಿಸಲು ಸಾಧ್ಯವಾಗಲ್ಲ. ಹಾಗಾಗಿ ತಾನು ಚಿತ್ರದಿಂದ ಹೊರಬರುತ್ತಿದ್ದೇನೆ" ಎಂದಿದ್ದಾರೆ.

  ರಮ್ಯಾ ಅವರ ಈ ದಿಢೀರ್ ನಿರ್ಧಾರದಿಂದ ಚಿತ್ರತಂಡಕ್ಕೆ ಖಾಲಿ ದೋಸೆ ಸವಿದಂತಾಗಿದೆ. ಆದರೆ ರಮ್ಯಾ ಇಲ್ಲದೆಯೂ 'ನೀರ್ ದೋಸೆ' ಹುಯ್ಯುವುದಾಗಿ ಚಿತ್ರದ ನಿರ್ದೇಶಕ ವಿಜಯ್ ಪ್ರಸಾದ್ ಹೇಳಿದ್ದಾರೆ. ರು.15 ಲಕ್ಷ ಮುಂಗಡ ಹಣನ್ನು ರಮ್ಯಾ ವಾಪಸ್ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.

  ಈ ಚಿತ್ರದಲ್ಲಿ ಅಭಿನಯಿಸಲು ರಮ್ಯಾ ಜೊತೆ ರು.48 ಲಕ್ಷ ಮಾತುಕತೆಯಾಗಿತ್ತು. ರು.15 ಲಕ್ಷ ಅಡ್ವಾನ್ಸ್ ಕೊಡಲಾಗಿತ್ತು. ಇನ್ನು ರು.5 ಲಕ್ಷ ಕೊಟ್ಟು ಒಪ್ಪಂದ ಪತ್ರಗಳಿಗೆ ಸಹಿ ಮಾಡಿಸಿಕೊಳ್ಳಬೇಕಾಗಿತ್ತು. ಅಷ್ಟರಲ್ಲಿ 'ನೀರ್ ದೋಸೆ'ಗೆ ರಮ್ಯಾ ತಣ್ಣೀರೆರಚಿದ್ದಾರೆ.

  ಚಿತ್ರದಲ್ಲಿ ರಮ್ಯಾ ಅವರು ವೇಶ್ಯೆ ಪಾತ್ರ ಪೋಷಿಸುತ್ತಿದ್ದಾರೆ ಎನ್ನಲಾಗಿದ್ದು, ಈ ಪಾತ್ರ ಮಾಡಿದರೆ ಎಲ್ಲಿ ತಮ್ಮ ಗೌರವಕ್ಕೆ ಧಕ್ಕೆ ಬರುತ್ತದೋ ಎಂದು ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುತ್ತವೆ ಮೂಲಗಳು. 'ನೀರ್ ದೋಸೆ' ಚಿತ್ರದ ಚಿತ್ರೀಕರಣ ಇನ್ನೇನು ಆರಂಭವಾಗಬೇಕಿತ್ತು. (ಒನ್ಇಂಡಿಯಾ ಕನ್ನಡ)

  English summary
  Golden Girl Ramya opted out of 'Neer Dose'. Ramya has expressed her inability to do the film, because she will not be able to deliver full justice to the role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X