»   » ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ ವಿಶೇಷಗಳು

ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ ವಿಶೇಷಗಳು

By: ಜೀವನರಸಿಕ
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಗೆ ಇವತ್ತು 34 ವರ್ಷದ ಹುಟ್ಟುಹಬ್ಬ ಸಂಭ್ರಮ. ಕನ್ನಡ ಚಿತ್ರರಂಗಕ್ಕೆ 'ಮುಂಗಾರುಮಳೆ'ಯ ಮೂಲಕ ಗೆಲುವಿನ ಮಳೆ ಸುರಿಸಿದ ಗಣೇಶ್ ಹುಟ್ಟುಹಬ್ಬ ಅಂದ್ರೆ ಅಭಿಮಾನಿಗಳಿಗೆ ಹಬ್ಬ. ಚಿತ್ರಪ್ರೇಮಿಗಳಿಗೆ ಸಂಭ್ರಮ. ಲವರ್ ಬಾಯ್ ಗಣೇಶ್ ಪ್ರೇಮಿಗಳ ಅಚ್ಚುಮೆಚ್ಚಿನ ನಟ.

ಈ ವರ್ಷವಂತೂ ಗಣೇಶ್ ಪಾಲಿಗೆ ಬಹುನಿರೀಕ್ಷಿತ ವರ್ಷ. 2013ರವರೆಗೂ ಇದ್ದ ಸೋಲಿನ ಸರಪಳಿಯನ್ನ ಸಂಪೂರ್ಣವಾಗಿ ತೊಡೆದು ಹಾಕಿದೆ. ಗಣೇಶ್-ಅಮೂಲ್ಯಾ ಜೋಡಿಯ 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರ. ಈ ವರ್ಷ ಗಣೇಶ್ ಗೆ ಮೋಸ್ಟ್ ಎಕ್ಸ್ ಪೆಕ್ಟೆಡ್ ಈಯರ್. ಯಾಕಂದ್ರೆ ಗಣೇಶ್ ಅಭಿನಯದ 25ನೇ ಸಿನಿಮಾ ಈ ವರ್ಷ ತಯಾರಾಗಲಿದೆ. [ಗೋಲ್ಡನ್ ಸ್ಟಾರ್ ಗೆ ಬೆಂಜ್ ಕಾರು ಉಡುಗೊರೆ]

34ನೇ ವರ್ಷದ ಹುಟ್ಟುಹಬ್ಬಕ್ಕೆ ಗಣೇಶ್ ಸಂಭ್ರಮದಲ್ಲಿ ತೇಲಾಡೋಕೆ ಹಲವು ಕಾರಣಗಳಿವೆ. ಅಂತಹಾ ಸಂಭ್ರಮಗಳನ್ನನ ನೋಡ್ತಾ ಹೋಗೋಣ ಗೋಲ್ಡನ್ ಸ್ಟಾರ್ ಬರ್ತಡೇ ದಿನ ಅವರ ಒಂದಷ್ಟು ವಿಶೇಷ ವಿಷಯಗಳನ್ನ ನೋಡೋಣ ಬನ್ನಿ. ನಮ್ಮ ಕಡೆಯಿಂದಾನೂ ಗೋಲ್ಡನ್ ಸ್ಟಾರ್ ಗಣೇಶ್ ಗೆ ಹ್ಯಾಪಿ ಬರ್ತಡೇ. ಗೋಲ್ಡನ್ ಸ್ಟಾರ್ ಸ್ಯಾಂಡಲ್ ವುಡ್ ಗೆ ಮತ್ತಷ್ಟು ಲವ್ಲಿ ಸಿನಿಮಾಗಳನ್ನ ಕೊಡ್ಲಿ.

ಗೆಲುವಿನ ಕಳೆ ಇದೆ ಗಣೇಶ್ ಮುಖದಲ್ಲಿ

2013ರಲ್ಲಿ ಆಟೋರಾಜ ಸಿನಿಮಾದ ಅರ್ಧಂಬರ್ಧ ಗೆಲುವಿನ ಜೊತೆ ಹುಟ್ಟುಹಬ್ಬ ಅಚರಿಸಿಕೊಂಡಿದ್ದ ಗಣೇಶ್ ಮುಖದಲ್ಲಿ ಅರ್ಧ ನಗು ಇನ್ನರ್ಧ ಆತಂಕವಿತ್ತು. ಆದ್ರೆ ಈ ಬಾರಿ ಫುಲ್ ಖುಷ್. ಶ್ರಾವಣಿ ಸುಬ್ರಹ್ಮಣ್ಯ ಗೆಲುವು ಗಣೇಶ್ ಗೆ ಹೊಸ ದಿಕ್ಕು ತೋರಿಸಿದೆ.

ಅವಮಾನಗಳನ್ನ ಎದುರಿಸಿ ಬಂದ ನಟ

ಇವತ್ತು ಗಣೇಶ್ ಗೆ ದೊಡ್ಡ ಅಭಿಮಾನಿ ಬಳಗವಿದೆ. 25 ಸಿನಿಮಾಗಳ ಕೆರಿಯರ್ ಗ್ರಾಫ್ ಇದೆ. ಆದರೆ ಸಿನಿಮಾಗೆ ಎಂಟ್ರಿಕೊಡೋವಾಗ ಗಣೇಶ್ ಕೂಡ ಒಬ್ಬ ಸಾಮಾನ್ಯ ಕಲಾವಿದನಾಗೀನೇ ಈ ಎತ್ತರವನ್ನ ಏರಿದ್ದು. ನಮಸ್ಕಾರ ನಮಸ್ಕಾರ ನಮಸ್ಕಾರ ಅಂತಿದ್ದ ಕಾಮಿಡಿ ಟೈಂ ಗಣೇಶ್ ಕೂಡ ಹಲವು ಅವಮಾನಗಳ ಎದುರಿಸಿ ಬಂದಿದ್ದಾರೆ. ಆದರೆ ಈಗ ಅದನ್ನ ಹೇಳಿಕೊಳ್ಳೋದಿಲ್ಲ ಅಷ್ಟೆ.

ಅವಮಾನ ಅನುಮಾನ ಅಮೇಲೆ ಸನ್ಮಾನ

ಸಿನಿ ಜೀವನದಲ್ಲಿ ಮೊದಲು ಅವಮಾನ. ಆಮೇಲೆ ಅನುಮಾನ ಅದಾದ ನಂತರ ಸನ್ಮಾನ ಅನ್ನೋ ಪಾಲಿಸಿಯಲ್ಲೇ ಗಣೇಶ್ ಕೂಡ ಬೆಳೆದು ಬಂದಿದ್ದು. ಅದನ್ನ ಕೆಲವು ಸಲ ಹೇಳಿಕೊಂಡಿದ್ದಾರೆ ಕೂಡ ಗೋಲ್ಡನ್ ಸ್ಟಾರ್.

25 ಸಿನಿಮಾಗಳ ಸರದಾರ

ಗೋಲ್ಡನ್ ಸ್ಟಾರ್ ಚೆಲ್ಲಾಟದಿಂದ ಒಂದೊಂದೇ ಸಿನಿಮಾಗಳ ಮೆಟ್ಟಿಲೆರ್ತಾ 25ನೇ ಸಿನಿಮಾಗೆ ಬಂದು ನಿಂತಿದ್ದಾರೆ. ಕಾಕತಾಳೀಯ ಅಂದ್ರೆ ಗಣೇಶ್ ರ ಮೊದಲ ಸಿನಿಮಾ 'ಚೆಲ್ಲಾಟ' ಡೈರೆಕ್ಟ್ ಮಾಡಿದ್ದ ಎಂ ಡಿ ಶ್ರೀಧರ್ 25ನೇ ಸಿನಿಮಾವನ್ನ ಡೈರೆಕ್ಟ್ ಮಾಡ್ತಿದ್ದಾರೆ.

ಮುಂಗಾರುಮಳೆ-2 ಬರ್ತಿದೆ

ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿದ ಸಿನಿಮಾ 'ಮುಂಗಾರುಮಳೆ'. ಎಂಟು ವರ್ಷಗಳ ನಂತರ 'ಮುಂಗಾರುಮಳೆ-2' ಶುರುವಾಗುವ ಸೂಚನೆ ಸಿಕ್ಕಿದೆ. ಗಣೇಶ್ ಅಭಿನಯದ 'ಮುಂಗಾರುಮಳೆ-2' ಚಿತ್ರವನ್ನ ಜಿ ಗಂಗಾಧರ್ ನಿರ್ಮಿಸುತ್ತಿದ್ದಾರೆ.

ಬರ್ತಡೇಗೆ ಸಿಕ್ಕಿದೆ ಭರ್ಜರಿ ಗಿಫ್ಟ್

ಗೋಲ್ಡನ್ ಸ್ಟಾರ್ ಬರ್ತಡೇಗೆ 25ನೇ ಸಿನಿಮಾ 'ಬುಗುರಿ', ಮುಂಗಾರುಮಳೆ-2 ಸಿನಿಮಾದ ಜೊತೆಗೆ ಜೂಮ್ ಅನ್ನೋ ಮತ್ತೊಂದು ಸಿನಿಮಾ ಕೂಡ ಶುರುವಾಗಿದೆ. ಲವ್ ಗುರು ಪ್ರಶಾಂತ್ ರಾಜ್ ಡೈರೆಕ್ಟ್ ಮಾಡ್ತಿರೋ ಸಿನಿಮಾ ಇದು. ಬರ್ತಡೇಗೆ ಇದಕ್ಕಿಂತಾ ಗಿಫ್ಟ್ ಬೇಕಾ?

ಮನೆಗೆ ಬಂದಿದೆ ಹೊಸ ಅತಿಥಿ

34ನೇ ಬರ್ತಡೇಗೆ ಮುದ್ದಿನ ಮಡದಿ ಶಿಲ್ಪಾ ಗಣೇಶ್ ರಿಗೆ ದುಬಾರಿ ಗಿಫ್ಟ್ ಒಂದನ್ನ ಕೊಟ್ಟಿದ್ದಾರೆ. ಅದು ಒಂದೂವರೆ ಕೋಟಿಯ ಮರ್ಸಿಡಿಸ್ ಬೆಂಜ್ ಕಾರು.

ಎಲ್ಲದಕ್ಕಿಂತ ಬೆಸ್ಟ್ ಗಿಫ್ಟ್

ಆದ್ರೆ ಗಣೇಶ್ಗೆ ಇದಕ್ಕಿಂತ ಬೆಸ್ಟ್ ಗಿಫ್ಟ್ ಒಂದಿದೆ ಗೊತ್ತಾ. ಅದು ಮಗಳು ಚಾರಿತ್ರಿಯಾ ಕೊಡೋ ಸಿಹಿ ಮುತ್ತು. ಯಾವ ಗಿಪ್ಟ್ ಇದ್ರೂ ಪ್ರೀತಿಗೆ ಬೆಲೆಕಟ್ಟೋಕಾಗುತ್ತಾ ಅಂತಾರೆ. ಮುಂಗಾರುಮಳೆಯ ಮೂಲಕ ಪ್ರೀತಿಗೆ ಹೊಸ ಭಾಷ್ಯ ಬರೆದ ಗೋಲ್ಡನ್ ಸ್ಟಾರ್ ಸೂಪರ್ ಅಲ್ವಾ.

English summary
Golden Star Ganesh celebrating 34th birthday on 2nd July, 2014. This time what is special on his birthday? He got Mercedes-Benz GL-Class gift from his wife Shilpa and Mungaru Male 2, Buguri, Zoom, Style King movies are announced on his birthday.
Please Wait while comments are loading...