For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಸ್ಟಾರ್ ಗಣೇಶ್ 'ಮಿಸ್ಟರ್ 420' ಬಿಡುಗಡೆ

  |

  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮಿಸ್ಟರ್ 420' ಚಿತ್ರವು ಇದೇ ಅಕ್ಟೋಬರ್ 19 ರಿಂದ (19 ಅಕ್ಟೋಬರ್ 2012) ರಾಜ್ಯಾದ್ಯಂತ ತೆರೆಕಾಣಲಿದೆ. ನಟ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಈ ಚಿತ್ರವಾದರೂ ಗೆಲ್ಲುತ್ತೋ ಅಥವಾ ಈ ಮೊದಲಿನ ಸರಣಿ ಸೋಲಿಗೆ ಇದೂ ಸೇರ್ಪಡೆಯಾಗುತ್ತೋ ಎಂಬುದೀಗ ಗಾಂಧಿನಗರದ ತುಂಬಾ ಬಹುದೊಡ್ಡ ಚರ್ಚೆಯ ವಿಷಯವಾಗಿದೆ, ಕಾರಣ, ಒಂದು ಕಾಲದ ಗೋಲ್ಡನ್ ಸ್ಟಾರ್ ಗಣೇಶ್, ಈಗ ಸೋಲಿನ ಸರದಾರ!

  ಅದಿರಲಿ, ಈ 'ಮಿಸ್ಟರ್ 420' ಚಿತ್ರವನ್ನು ಪ್ರದೀಪ್ ರಾಜ್ ನಿರ್ದೇಶಿಸಿದ್ದು ಈ ಚಿತ್ರವನ್ನು ನಿರ್ಮಾಣ ಮಾಡಿರುವವರು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ಸಂದೇಶ್ ನಾಗರಾಜ್. 'ಹುಡುಗ ಹುಡುಗಿ', 'ಪ್ರಿನ್ಸ್', ಹಾಗೂ 'ವೀರಬಾಹು' ಮುಂತಾದ ಚಿತ್ರಗಳ ನಂತರ ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ 19 ನೇ ಚಿತ್ರ 'ಮಿಸ್ಟರ್ 420'. ಈ ಚಿತ್ರದಲ್ಲಿ ನಾಯಕ ಗಣೇಶ್ ಅವರಿಗೆ ಜೋಡಿಯಾಗಿ ಬೊಗಸೆ ಕಂಗಳ ಬೆಡಗಿ ಪ್ರಣೀತಾ ನಟಿಸಿದ್ದಾರೆ.

  ಈ ಚಿತ್ರದಲ್ಲಿ ನಾಯಕ ಗಣೇಶ್ ಅವರಿಗೆ ಸಪೋರ್ಟಿವ್ ಆಗಿ ರಂಗಾಯಣ ರಘು ಹಾಗೂ ಸಾಧುಕೋಕಿಲ ನಟಿಸಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ 'ರೋಮಿಯೋ' ಚಿತ್ರದಲ್ಲಿ ಕೂಡ ನಾಯಕ ಗಣೇಶ್ ಅವರಿಗೆ ಪೋಷಕ ಪಾತ್ರ ಅನ್ನುವುದಕ್ಕಿಂತ ಬೇರೆಯದೇ ಎನಿಸುವ ಸಪೋರ್ಟಿವ್ ಪಾತ್ರದಲ್ಲಿ ಸಾಧುಕೋಕಿಲ ಕಾಣಿಸಿಕೊಂಡು ಚಿತ್ರವನ್ನು ಗೆಲ್ಲಿಸಿದ್ದರು ಎಂಬುದು ಬಹಳಷ್ಟು ಜನರು ಗಮನಿಸಿರುವ ಅಂಶ. ಕಾಕತಾಳೀಯವೆಂಬಂತೆ, ಈ 'ಮಿಸ್ಟರ್ 420' ಚಿತ್ರದಲ್ಲೂ ಸಾಧುಕೋಕಿಲ ಇದ್ದಾರೆ.

  ಅದಕ್ಕಿಂತಲೂ ಗಮನಸೆಳೆಯುತ್ತಿರುವ ಮತ್ತೊಂದು ಅಂಶವೆಂದರೆ, ಈ ಚಿತ್ರದ ಪೋಸ್ಟರ್ ಗಳಲ್ಲಿ ಗಣೇಶ್ ಪಕ್ಕ ನಾಯಕರಂತೆ ರಂಗಾಯಣ ರಘು ನಿಂತಿದ್ದಾರೆ. ಗಣೇಶ್ ಒಬ್ಬರೇ ಚಿತ್ರವನ್ನು ಗೆಲ್ಲಿಸಲಾಗದು ಎಂಬ ಸಂದೇಶ ಚಿತ್ರರಂಗದಿಂದಲೇ ನಿಧಾನವಾಗಿ ರವಾನೆಯಾಗುತ್ತಿದೆ ಎಂಬುದು ಬಹಳಷ್ಟು ಜನರ ಅನಿಸಿಕೆ. ಇನ್ನಾದರೂ ಗಣೇಶ್, ಚಿತ್ರಗಳ ಆಯ್ಕೆಯಲ್ಲಿ ಜಾಣತನ ಮೆರೆಯದಿದ್ದರೆ, ಮುಂದೆ ಪರಿಸ್ಥಿತಿ ಇನ್ನೂ ಬದಲಾಗಬಹುದು ಎನ್ನಲಾಗುತ್ತಿದೆ.

  ಸದ್ಯಕ್ಕೆ, 'ಕಳ್ಳ ಮಳ್ಳ ಸುಳ್ಯ' ಖ್ಯಾತಿಯ ಉದಯಪ್ರಕಾಶ್ ನಿರ್ದೇಶನದ 'ಆಟೋರಾಜಾ' ಹಾಗೂ 'ಶಿಶಿರ ಖ್ಯಾತಿಯ' ಮಂಜು ಸ್ವರಾಜ್ ನಿರ್ದೇಶನದ 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರದಲ್ಲಿ ಗಣೇಶ್ ನಟಿಸುತ್ತಿದ್ದಾರೆ. 'ಆಟೋರಾಜಾ'ದಲ್ಲಿ ಭಾಮಾ ಹಾಗೂ ದೀಪಿಕಾ ಕಾಮಯ್ಯ ಗಣೇಶ್ ಅವರಿಗೆ ಜೊತೆಯಾಗಿದ್ದರೆ 'ಶ್ರಾವಣಿ ಸುಬ್ರಹ್ಮಣ್ಯ' ನಾಯಕಿ 'ಚೆಲುವಿನ ಚಿತ್ತಾರದ' ಬೆಡಗಿ ಅಮೂಲ್ಯಾ. ಇದೀಗ ಗಣೇಶ್ ತಮ್ಮ 'ಮಿಸ್ಟರ್ 420' ಚಿತ್ರದ ಮೂಲಕ ಪ್ರೇಕ್ಷಕರೆದುರು ನಿಲ್ಲುತ್ತಿದ್ದಾರೆ. ಫಲಿತಾಶ ಕಾದು ನೋಡಬೇಕಿದೆ. (ಒನ್ ಇಂಡಿಯಾ ಕನ್ನಡ)

  English summary
  Golden Star Ganesh's movie 'Mister 420' to release on 19th October 2012 all over the Karnataka. Praneetha is the Heroine for Ganesh in this Pradeep Raj directed Movie. Sandesh Nagaraj is the Producer for this movie. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X