For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಚಿತ್ರ ದಿಲ್ ರಂಗೀಲಾ

  By Rajendra
  |

  ಗೋಲ್ಡನ್ ಸ್ಟಾರ್ ಗಣೇಶ್ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಬಾರಿ ಆಕ್ಷನ್ ಕಟ್ ಹೇಳುತ್ತಿರುವವರು ಪ್ರೀತಂ ಗುಬ್ಬಿ. ಗಣೇಶ ಚತುರ್ಥಿ (ಸೆ.9) ದಿನವೇ ಚಿತ್ರ ಸೆಟ್ಟೇರುತ್ತಿರುವುದು ವಿಶೇಷ. ಗಣೇಶನಿಗೆ ಈ ಬಾರಿ ವಿಘ್ನರಾಜನ ಆಶೀರ್ವಾದ ಖಂಡಿತ ಸಿಗುತ್ತದೆ ಬಿಡಿ. ಅಂದಹಾಗೆ ಚಿತ್ರದ ಹೆಸರು 'ದಿಲ್ ರಂಗೀಲಾ'.

  ಈ ಬಾರಿ ಪ್ರೀತಂ ಗುಬ್ಬಿ ಅವರು ಗಣೇಶ್ ಅವರಿಗೆ ಒಪ್ಪುವಂತಹ ನವಿರಾದ ಪ್ರೇಮಕಥೆಗೆ ಕೈಹಾಕಿದ್ದಾರೆ. ಈ ಹಿಂದೆ ಗಣೇಶ್ ಅವರ ಸ್ವಂತ ನಿರ್ಮಾಣದ ಮಳೆಯಲಿ ಜೊತೆಯಲಿ ಚಿತ್ರಕ್ಕೆ ಪ್ರೀತಂ ಆಕ್ಷನ್ ಕಟ್ ಹೇಳಿದ್ದರು. ಈ ಬಾರಿ ಕೆ.ಮಂಜು ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

  ಚಿತ್ರದ ನಾಯಕಿ ಬುಲ್ ಬುಲ್ ಚಿತ್ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಹೆಜ್ಜೆ ಹಾಕಿದ್ದ ಕ್ಯೂಟ್ ಬೆಡಗಿ ರಚಿತಾ ರಾಮ್. ಉಳಿದ ತಾರಾಗಣ ಹಾಗೂ ತಾಂತ್ರಿಕ ಬಳಗದ ಆಯ್ಕೆ ಇನ್ನಷ್ಟೇ ನಡೆಯಬೇಕು.

  ಈ ಚಿತ್ರ ಅತ್ತ ಗಣೇಶ್ ಅವರಿಗೂ ಇತ್ತ ಪ್ರೀತಂ ಅವರಿಗೂ ಬಹಳ ಮುಖ್ಯವಾದದ್ದು. ಏಕೆಂದರೆ ಇಬ್ಬರೂ ಬಿಗ್ ಬ್ರೇಕ್ ಕೊಟ್ಟು ಬಹಳಷ್ಟು ದಿನಗಳಾಗಿವೆ. ಗಣೇಶ್ ಅವರ ಆಟೋರಾಜ ಹಾಗೂ ಪ್ರೀತಂ ಅವರ ನಮ್ ದುನಿಯಾ ನಮ್ ಸ್ಟೈಲ್ ಚಿತ್ರಗಳು ನಿರೀಕ್ಷಿಸಿದ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಲಿಲ್ಲ. ಇಬ್ಬರ ಆಸೆಗಳನ್ನೂ ದಿಲ್ ರಂಗೀಲಾ ಚಿತ್ರ ಈಡೇರಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. (ಏಜೆನ್ಸೀಸ್)

  English summary
  Golden Star Ganesh new film titled as Dil Rangeela. This time Preetam Gubbi directing the film. The film is all set to be launched on the auspicious day of Ganesha Chaturthi (9th Sept).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X