For Quick Alerts
  ALLOW NOTIFICATIONS  
  For Daily Alerts

  ಗಣೇಶ್ ಕೋಟಿ ಸಂಭಾವನೆ ಪಡೆದ ಮೊದಲ ಹೀರೋ: ಗಣಿ ಹೇಳಿದ ಕೋಟಿ ಕಥೆಯೇನು?

  |

  ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಗಾಳಿಪಟ- 2' ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಇಂತಹ ಹೊತ್ತಲ್ಲೇ ಗಣಿ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಬಿಚ್ಚಿಟ್ಟಿದ್ದಾರೆ. 14 ವರ್ಷಗಳ ಹಿಂದೆ 'ಗಾಳಿಪಟ' ಚಿತ್ರಕ್ಕೆ ಗಣಿ ಎಷ್ಟು ಸಂಭಾವನೆ ಪಡೆದಿದ್ದರು ಅನ್ನುವುದು ಈಗ ರಿವೀಲ್ ಆಗಿದೆ.

  ಸಾಮಾನ್ಯವಾಗಿ ನಟ- ನಟಿಯರ ಸಂಭಾವನೆ ವಿಚಾರ ಗುಟ್ಟಾಗಿಯೇ ಇರುತ್ತದೆ. ಯಾರಿಗೆ ಎಷ್ಟು ಸಂಭಾವನೆ ಸಿಕ್ತು ಅನ್ನುವುದು ಕೊಟ್ಟವರಿಗೆ ತಗೊಂಡವರಿಗೆ ಮಾತ್ರ ಗೊತ್ತಿರುತ್ತದೆ. ಇನ್ನುಳಿದಿದ್ದೆಲ್ಲಾ ಅಂತೆ ಕಂತೆ ಸಮಾಚಾರ ಅಷ್ಟೆ. 'ಗಾಳಿಪಟ- 2' ಸಿನಿಮಾ ಪ್ರಚಾರಕ್ಕಾಗಿ ಗೋಲ್ಡನ್ ಸ್ಟಾರ್ ಗಣೇಶ್ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಸಿನಿ ಬಝ್‌ ಯೂಟ್ಯೂಬ್‌ ಸಂದರ್ಶನದಲ್ಲಿ ಮಾತನಾಡುತ್ತಾ 'ಗಾಳಿಪಟ' ಚಿತ್ರಕ್ಕೆ ತಾವು ಅಂದು ಪಡೆದಿದ್ದ ಸಂಭಾವನೆ ಎಷ್ಟು ಅನ್ನುವುದನ್ನು ರಿವೀಲ್ ಮಾಡಿದ್ದಾರೆ. ಅಲ್ಲಿವರೆಗೂ ಕನ್ನಡ ನಟರು ಬರೀ ಲಕ್ಷಗಳಲ್ಲೇ ಸಂಭಾವನೆ ಪಡೆಯುತ್ತಿದ್ದರು. ಮೊದಲು ಕೋಟಿ ಸಂಭಾವನೆ ಗಡಿ ದಾಟ್ಟಿದ್ದು ಗೋಲ್ಡನ್ ಸ್ಟಾರ್ ಗಣೇಶ್.

  ಆತಂಕ- ಭರವಸೆ ಎರಡೂ ಇದೆ, ಪ್ರೇಕ್ಷಕರೇ ಪ್ರಭುಗಳು; ನಿರ್ದೇಶಕ ಯೋಗರಾಜ್ ಭಟ್!ಆತಂಕ- ಭರವಸೆ ಎರಡೂ ಇದೆ, ಪ್ರೇಕ್ಷಕರೇ ಪ್ರಭುಗಳು; ನಿರ್ದೇಶಕ ಯೋಗರಾಜ್ ಭಟ್!

  ಯೋಗರಾಜ್ ಭಟ್‌ ನಿರ್ದೇಶನದಲ್ಲಿ ಗಣೇಶ್, ದಿಗಂತ್, ರಾಜೇಶ್ ಕೃಷ್ಣನ್ ನಟಿಸಿದ್ದ 'ಗಾಳಿಪಟ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾ ಹಾಡುಗಳನ್ನು ಕನ್ನಡ ಸಿನಿರಸಿಕರು ಇನ್ನು ಮರೆತ್ತಿಲ್ಲ. ಗಣೇಶ್ ಡೈಲಾಗ್ಸ್, ಕಾಮಿಡಿ ಸೀನ್ಸ್, ರತ್ನವೇಲು ಛಾಯಾಗ್ರಹಣ, ಮಲೆನಾಡಿನ ಸೊಬಗು ಇವತ್ತಿಗೂ ಕಣ್ಣ ಮುಂದಿದೆ. ಇದೀಗ ಗಣಿ- ಭಟ್ಟರು ಸೇರಿ ಹೊಸ 'ಗಾಳಿಪಟ' ಹಾರಿಸಲು ಸಿದ್ಧತೆ ನಡೆಸಿದ್ದಾರೆ. ಮುಂದಿನ ವಾರವೇ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಲಿದೆ.

   ಕನ್ನಡದ ಮೊದಲ ಕೋಟಿ ಹೀರೊ ಗಣೇಶ್?

  ಕನ್ನಡದ ಮೊದಲ ಕೋಟಿ ಹೀರೊ ಗಣೇಶ್?

  ಫಸ್ಟ್ ಕೋಟಿ ತಗೊಂಡಿದ್ದೆ ಗಣೇಶ್ ಅವ್ರು ಅಂತ ನಿರೂಪಕಿ ಕೇಳಿದ ಪ್ರಶ್ನೆಗೆ ಗಣೇಶ್ ಉತ್ತರಿಸಿದ್ದಾರೆ. "ನನಗೂ ಗೊತ್ತಿಲ್ಲ ಅವಾಗ ಅಷ್ಟೆಲ್ಲಾ ಕೊಡ್ತಾರೆ ಅಂತ. ಅವ್ರು ಕೊಟ್ರು ನಾನು ತಗೊಂಡೆ. ನಾನೇನು ಡಿಮ್ಯಾಂಡ್ ಮಾಡಿ ತಗೊಳ್ಳಿಲ್ಲ. ನಿಜ ಹೇಳಬೇಕು ಅಂದ್ರೆ, ಅದು ಬಂದಿದ್ದೆ 'ಗಾಳಿಪಟ' ಚಿತ್ರಕ್ಕೆ. ಈ ತರ ಇದೆ. ಇಷ್ಟು ತಗೊಳ್ತಾರೆ ಅಂತೆಲ್ಲಾ ಸುದ್ದಿ ಬಂತು. ಆಫರ್ ಮಾಡಿದ್ದು ಪ್ರೊಡಕ್ಷನ್ ಹೌಸ್. ನಾನು ಯಾವತ್ತೂ ಯಾರಿಗೂ ಡಿಮ್ಯಾಂಡ್ ಮಾಡುತ್ತಿರಲಿಲ್ಲ. ಆಮೇಲೆ ಗೊತ್ತಾಯ್ತು. ಹೋ ಇಷ್ಟು ತಗೊಬಹುದು ಅಂತ" ಗಣಿ ನಗೆ ಬೀರಿದ್ದಾರೆ.

   ಕೋಟಿ ಸಂಭಾವನೆ ಕೊಟ್ಟಿದ್ಯಾಕೆ?

  ಕೋಟಿ ಸಂಭಾವನೆ ಕೊಟ್ಟಿದ್ಯಾಕೆ?

  2008ರಲ್ಲಿ ಬಂದಿದ್ದ 'ಗಾಳಿಪಟ' ಸಿನಿಮಾ ಬಜೆಟ್, ಕಲೆಕ್ಷನ್ ಎಲ್ಲಾ ವಿಚಾರದಲ್ಲೂ ಸುದ್ದಿ ಮಾಡಿತ್ತು. ಅದಾಗಲೇ 'ಮುಂಗಾರುಮಳೆ' ಅನ್ನುವ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ಗಣಿ- ಭಟ್ರ ಜೋಡಿ ಮತ್ತೆ ಒಂದಾಗುತ್ತೆ ಅನ್ನುವ ಸುದ್ದಿ ಕೇಳಿ ಸಿನಿರಸಿಕರು ಥ್ರಿಲ್ಲಾಗಿದ್ದರು. ಇವರಿಬ್ಬರನ್ನು ಸೇರಿಸಿ ಎಸ್‌ಪಿಆರ್ ಎಂಟರ್‌ಟೈನರ್ಸ್‌ ಸಂಸ್ಥೆ ಮೆಗಾ ಪ್ರಾಜೆಕ್ಟ್ ಪ್ಲ್ಯಾನ್ ಮಾಡಿತ್ತು. ಅದಕ್ಕೆ ತಕ್ಕಂತೆ ಎಲ್ಲರಿಗೂ ಸಂಭಾವನೆ ಸಿಕ್ಕಿತ್ತು. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿ ತೆರೆಗೆ ಬಂದಿತ್ತು.

   'ಗಾಳಿಪಟ' ಸಿನಿಮಾ ಕಥೆಯೇನು?

  'ಗಾಳಿಪಟ' ಸಿನಿಮಾ ಕಥೆಯೇನು?

  ಗಣಿ, ಕಿಟ್ಟಿ ಮತ್ತು ದಿಗಂತ್ ಮೂವರು ಸ್ನೇಹಿತರು. ಬೆಂಗಳೂರು ಸಾಕಾಗಿ ಮೂವರು ದಿಗಂತ್‌ ಅಜ್ಜನ ಊರು ಮುಗಿಲ್‌ಪೇಟೆಗೆ ಹೋಗುತ್ತಾರೆ. ದಿಗಂತ್ ಅಜ್ಜನ ಮನೆಯ ಪಕ್ಕದ ಎಸ್ಟೇಟ್‌ನಲ್ಲಿ ಕೋದಂಡರಾಮ ಮತ್ತವರ ಫ್ಯಾಮಿಲಿ ವಾಸವಾಗಿರುತ್ತೆ. ಅವರ ಮನೆಯಲ್ಲಿ ಮೂವರು ಹೆಣ್ಣುಮಕ್ಕಳು ಇರ್ತಾರೆ. ಗಣಿ, ಕಿಟ್ಟಿ ಮತ್ತು ದಿಗಂತ್‌ಗೆ ಆ ಮೂವರು ಹೇಗೆ ಜೊತೆಯಾಗುತ್ತಾರೆ ಅನ್ನುವುದೇ ಚಿತ್ರದ ಒನ್‌ಲೈನ್‌ ಸ್ಟೋರಿ.

   175 ದಿನ ಪ್ರದರ್ಶನ ಕಂಡ ಸಿನಿಮಾ

  175 ದಿನ ಪ್ರದರ್ಶನ ಕಂಡ ಸಿನಿಮಾ

  ಕೆಜಿ ರಸ್ತೆಯ ಅಪರ್ಣ ಸೇರಿದಂತೆ ರಾಜ್ಯಾದ್ಯಂತ ತೆರೆಕಂಡಿದ್ದ 'ಗಾಳಿಪಟ' ಸಿನಿಮಾ ಸೂಪರ್ ಆಗಿತ್ತು. ಬರೋಬ್ಬರಿ 175 ದಿನ ಪ್ರದರ್ಶನ ಕಂಡು ಒಳ್ಳೆ ಕಲೆಕ್ಷನ್ ಮಾಡಿತ್ತು. ವಿಶೇಷ ಅಂದ್ರೆ ಮುಂದಿನ ವಾರ ಅದೇ ಅಪರ್ಣ ಥಿಯೇಟರ್‌ನಲ್ಲಿ 'ಗಾಳಿಪಟ- 2' ಸಿನಿಮಾ ಸಹ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾ ಟ್ರೈಲರ್ ಹಾಗೂ ಸಾಂಗ್ಸ್ ಹಿಟ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

  English summary
  Golden Star Ganesh Revealed Gaalipata Movie Remuneration Secret. Know More.
  Friday, August 5, 2022, 19:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X