For Quick Alerts
  ALLOW NOTIFICATIONS  
  For Daily Alerts

  ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್

  |
  <ul id="pagination-digg"><li class="next"><a href="/news/ganesh-movies-publicity-romeo-bhavana-shekhar-065811.html">Next »</a></li></ul>

  ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ 'ರೋಮಿಯೋ' ಚಿತ್ರದ ಪ್ರಚಾರಕಾರ್ಯದಲ್ಲಿ ಬಿಜಿಯಾಗಿದ್ದಾರೆ. ಅಷ್ಟಿಷ್ಟು ಬಿಜಿಯಲ್ಲ, ಸಂಪೂರ್ಣವಾಗಿ ಅದರಲ್ಲೇ ತಲ್ಲೀನರಾಗಿದ್ದಾರೆ. ಹೌದು, ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಈಗ ಗೆಲುವಿನ ಅಗತ್ಯವಿದೆ. ಅದಕ್ಕಾಗಿ ಅವರು ಪ್ರಚಾರದ ಮೊರೆ ಹೋಗಿದ್ದಾರೆ.

  ಅದಕ್ಕೆ ಅವರು ಬಿಡುಗಡೆಗೆ ಸಿದ್ಧವಾಗಿರುವ ರೋಮಿಯೋ ಚಿತ್ರದ ಪ್ರಚಾರಕ್ಕಾಗಿ ಊರೂರು ಅಲೆಯುತ್ತಿದ್ದಾರೆ. ಸದ್ಯಕ್ಕೆ ಉತ್ತರ ಕರ್ನಾಟಕದ ಕಡೆ ಮುಖಮಾಡಿರುವ ಗಣೇಶ್ ಬಿಸಿಲಿಗೆ ಬೆದರದೆ ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಮೊನ್ನೆ ಗಲ್ಬರ್ಗಾದ ಕಂದೂರ್ ಮಾಲ್ ಗೆ ಹೋಗಿದ್ದರು ಗಣೇಶ್. ಅಲ್ಲಿ ರೋಮಿಯೋ ಟ್ರೈಲರ್ ಬಿಡುಗಡೆ ಮಾಡಿದರು ಗಣೇಶ್.

  ಅವರನ್ನು ನೋಡಲು ಸಾವಿರಾರು ಜನರು ನೆರೆದಿದ್ದರು. ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಗಣೇಶ್ ಹಾಡಿದರು, ನರ್ತಿಸಿದರು. ಗಣೇಶ್ ಹಾಡು ನೃತ್ಯಕ್ಕೆ ಅಭಿಮಾನಿಗಳೂ ದನಿಗೂಡಿಸಿದರು ಹಾಗೂ ಹೆಜ್ಜೆಹಾಕಿದರು. ಭಾರೀ ಖುಷಿಗೊಂಡ ಗಣೇಶ್, ರೋಮಿಯೋ ಬಿಡುಗಡೆಯಾದಾಗಲೂ ಇದೇ ಪ್ರೀತಿ ಇರಲಿ ಎಂದರು.

  ಮೈಸೂರು ಹಾಗೂ ಹುಬ್ಬಳ್ಳಿಗೂ ಪ್ರಯಾಣ ಬೆಳೆಸಿದ್ದರು ಗಣೇಶ್. ಅಲ್ಲೂ ಗಣೇಶ್ ನೋಡಲು ಸಾವಿರಾರು ಅಭಿಮಾನಿಗಳು ನೆರೆದಿದ್ದರು. ರೋಮಿಯೋ ಚಿತ್ರದ ಟ್ರೈಲರ್ ಹಾಗೂ ಅದು ತುಂಬಾ ಭಿನ್ನವಾಗಿದೆ ಎಂದ ಗಣೇಶ್ ಮಾತಿಗೆ ಜನ ಬೆರಗಾಗಿ ನೋಡಿದರು, ಚಪ್ಪಾಳೆ ತಟ್ಟಿದರು. ಗಣೇಶ್ ಅಲ್ಲೂ ಖುಷಿಯಾದರು, ಇನ್ನೊಂದು ಕಡೆ ಹೊರಟು ನಿಂತರು.

  ಗಣೇಶ್ ಯಾಕೆ ಹೀಗೆ ಮಾಡುತ್ತಿದ್ದಾರೆ ಎನ್ನುವುದು ತುಂಬಾ ಜನರ ಪ್ರಶ್ನೆ. ಏಕೆಂದರೆ ಮುಂಗಾರು ಮಳೆಗಿಂತ ಮೊದಲು ಈಗಿನಷ್ಟು ಗಣೇಶ್ ಪ್ರಖ್ಯಾತಿ ಹೊಂದಿರಲಿಲ್ಲ. ಆದರೆ 'ಕಾಮಿಡಿ ಟೈಮ್' ಕಾರ್ಯಕ್ರಮದ ಮೂಲಕ ಕರ್ನಾಟಕದಾದ್ಯಂತ ಪರಿಚಿತರಾಗಿದ್ದರು ಅಷ್ಟೇ. ಆಗ ಬಂದ ಗಣೇಶ್ ಮೊಟ್ಟ ಮೊದಲ ಚಿತ್ರ 'ಚೆಲ್ಲಾಟ' 125 ದಿನಗಳ ಪ್ರದರ್ಶನ ಕಂಡಿತ್ತು.

  ಆನಂತರ ಬಂದಿದ್ದೇ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಯೋಗರಾಜ್ ಭಟ್ 'ಮುಂಗಾರು ಮಳೆ. ನಂತರ ಬಂದ ಗಣೇಶ್ ಚಿತ್ರಗಳು ಇನ್ನೊಂದು ಮುಂಗಾರು ಮಳೆ ಎನ್ನುವಂತೆ ಓಡಲಿಲ್ಲ. ಭಟ್ಟರ ಇನ್ಯಾವ ಚಿತ್ರವೂ ಕೂಡ ಮುಂಗಾರು ಮಳೆ ಚಿತ್ರದಂತೆ ದಾಖಲೆ ಬರೆಯಲಿಲ್ಲ. ಹಾಗಾದರೆ ಜನಪ್ರಿಯತೆಗೂ, ಚಿತ್ರದ ಯಶಸ್ಸಿಗೂ ಸಂಬಂಧವಿದೆಯೇ ಎಂಬುದನ್ನು ಗಣೇಶ್ ಯೋಚಿಸಬೇಕಿದೆ.

  ಗಣೇಶ್ ಮಾತು ಹಾಗಿರಲಿ, ದುನಿಯಾ ವಿಜಯ್ 'ದುನಿಯಾ' ಚಿತ್ರ ಬರುವುದಕ್ಕೂ ಮೊದಲು ಖ್ಯಾತ ನಟರಾಗಿರಲಿಲ್ಲ. ಆದರೆ ದುನಿಯಾ ಸೂಪರ್ ಹಿಟ್ ಆಗಿದ್ದೇ ತಡ, ವಿಜಯ್ ಸ್ಟಾರ್ ಆದರು. ಅವರು ಕರ್ನಾಟಕದ ತುಂಬೆಲ್ಲಾ ಮನೆಮಾತಾದರು. ಆದರೆ ನಂತರ ಬಂದ ದುನಿಯಾ ವಿಜಯ್ ಚಿತ್ರಗಳಾವುದೂ ದುನಿಯಾದಷ್ಟು ಹಿಟ್ ಆಗಲೇ ಇಲ್ಲ. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/ganesh-movies-publicity-romeo-bhavana-shekhar-065811.html">Next »</a></li></ul>
  English summary
  Golden Star Ganesh is traveling all around Karnataka and promoting his upcoming movie Romeo Trailers. Jockie Bhavana is pair for Ganesh in this movie. PC Shekhar directed this. Ganesh to know that only publicity can't do the Magic for its Success, hence the movie is extra ordinary good. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X