»   » ಮುಂಗಾರು ಮಳೆ 2 ಶೂಟಿಂಗ್ ಗೆ 'ಅರಣ್ಯ' ಕಟಂಕ

ಮುಂಗಾರು ಮಳೆ 2 ಶೂಟಿಂಗ್ ಗೆ 'ಅರಣ್ಯ' ಕಟಂಕ

Posted By:
Subscribe to Filmibeat Kannada

2006 ರಲ್ಲಿ ಯೋಗರಾಜ್ ಭಟ್ಟರ ನಿರ್ದೇಶನದಲ್ಲಿ ತೆರೆ ಕಂಡ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಂಗಾರು ಮಳೆ' ಚಿತ್ರ 'ಮಳೆ' ಪ್ರೀಯರಿಗೆ ಭಾರಿ ಮನರಂಜನೆ ನೀಡಿದ್ದಂತೂ ಸತ್ಯ.

ಅಂದಹಾಗೆ ಇದೀಗ ನಿರ್ದೇಶಕ ಶಶಾಂಕ್ ಆಕ್ಷನ್-ಕಟ್ ಹೇಳುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮಂಗಳೂರು ಬೆಡಗಿ 'ಮಿಸ್ ಮಂಗಳೂರು' ನೇಹಾ ಶೆಟ್ಟಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಮುಂಗಾರು ಮಳೆ 2' ಚಿತ್ರಕ್ಕೆ ಕಂಟಕವೊಂದು ಎದುರಾಗಿದೆ.


Golden Star Ganesh's Mungaru Male 2 shooting in trouble

ಅದೇನಪ್ಪಾ ಅಂದ್ರೆ 'ಮುಂಗಾರು ಮಳೆ 2' ಚಿತ್ರದ ಶೂಟಿಂಗ್ ಗಾಗಿ ಇಡೀ ಚಿತ್ರತಂಡ ಮಳೆಯ ತವರೂರಾದ ಸಕಲೇಶಪುರದಲ್ಲಿ ಬೀಡು ಬಿಟ್ಟಿದ್ದು, ಶೂಟಿಂಗ್ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಖಲೆ ಪರೀಶೀಲನೆ ನಡೆಸಿದ್ದಾರೆ.[ಶಶಾಂಕ್ ಆಕ್ಷನ್ ಕಟ್ ನಲ್ಲಿ 'ಮುಂಗಾರು ಮಳೆ 2']


ಸಕಲೇಶಪುರ ಆಸು-ಪಾಸಿನ ಸಾರ್ವಜನಿಕರು ನೀಡಿದ ದೂರಿನ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು 'ಮುಂಗಾರು ಮಳೆ 2' ಚಿತ್ರದ ಶೂಟಿಂಗ್ ಜಾಗಕ್ಕೆ ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸಿದ್ದರೆನ್ನಲಾಗಿದೆ.


Golden Star Ganesh's Mungaru Male 2 shooting in trouble

ಸಕಲೇಶಪುರ ಸಮೀಪ ಅರಣ್ಯ ಪ್ರದೇಶದಲ್ಲಿ 'ಮುಂಗಾರು ಮಳೆ 2' ಚಿತ್ರದ ಶೂಟಿಂಗ್ ಗಾಗಿ ಅದ್ಧೂರಿ ಸೆಟ್ ನಿರ್ಮಿಸಲಾಗಿದ್ದು, ಈ ಸೆಟ್ ನಿರ್ಮಾಣಕ್ಕೆ ಅನುಮತಿ ಪಡೆದಿಲ್ಲ ಎಂದು ಸಾರ್ವಜನಿಕರು ಅರಣ್ಯ ಇಲಾಖೆಗೆ ದೂರು ನೀಡಿದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ತಾಲ್ಲೂಕು ಉಪ ಸಂರಕ್ಷಣಾ ಅಧಿಕಾರಿ ರಮೇಶ್ ಬಾಬು ಮತ್ತು ಇಲಾಖೆಯ ಕೆಲ ಸಿಬ್ಬಂದಿಗಳು ಶೂಟಿಂಗ್ ಜಾಗಕ್ಕೆ ತೆರಳಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.[ಮುಂಗಾರು ಮಳೆಯಲ್ಲಿ ಗಣೇಶ್ ಜೊತೆಯಾದ ಕುಡ್ಲದ ಬಾಲೆ]


ಇದೀಗ ಎಲ್ಲಾ ದಾಖಲೆ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಶೂಟಿಂಗ್ ಮಾಡುವುದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ತಿಳಿಸಿ ಆಗಸ್ಟ್ 11 ರ ನಂತರ ಚಿತ್ರೀಕರಣಕ್ಕೆ ಇಲಾಖೆಯಿಂದ ಅನುಮತಿ ನೀಡಿ ಚಿತ್ರೀಕರಣಕ್ಕೆ ಸಹಕರಿಸಿದ್ದಾರೆ ಎಂದು ತಿಳಿದು ಬಂದಿದೆ.


ಚಿತ್ರದ ಶೂಟಿಂಗ್ ಶೆಡ್ಯೂಲ್ ಪ್ರಕಾರ ಸುಮಾರು 5 ರಿಂದ 6 ದಿನಗಳ ಕಾಲ ಶೂಟಿಂಗ್ ಪ್ಲಾನ್ ಇರುವುದರಿಂದ ಇಡೀ ಚಿತ್ರತಂಡ ಸಕಲೇಶಪುರದಲ್ಲಿ ಬೀಡುಬಿಟ್ಟಿದೆ.


ಅಂತೂ ಇಂತೂ ಎದುರಾದ ಕಂಟಕ ದೂರವಾಗಿದ್ದು, ಮಲೆನಾಡಿನ ಸೊಗಡಿನಲ್ಲಿ ರಿಯಲ್ ಮಳೆಯಲ್ಲಿ ಸರಾಗವಾಗಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಮಿಂಚಲಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

English summary
Description: Golden Star Ganesh's Mungaru Male 2 shooting in trouble as Forest department officials are checking documents related to permission given to shoot in Sakaleshpura Forest area.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada