»   » ಮುಂಗಾರು ಮಳೆ ಲವರ್ ಬಾಯ್ ಇದೀಗ ಗ್ಯಾಂಗ್ ಸ್ಟರ್

ಮುಂಗಾರು ಮಳೆ ಲವರ್ ಬಾಯ್ ಇದೀಗ ಗ್ಯಾಂಗ್ ಸ್ಟರ್

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅವರ 25 ನೇ ಚಿತ್ರ 'ಬುಗುರಿ' ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ನಲ್ಲಿ ಸ್ವಲ್ಪಮಟ್ಟಿಗೆ ಯಶಸ್ಸು ಕಂಡಿದ್ದರಿಂದ ಗಣಿ ಅವರು ಕೊಂಚ ರಿಲೀಫ್ ಆಗಿದ್ದಾರೆ. ಇದೀಗ ಗೋಲ್ಡನ್ ಸ್ಟಾರ್ ಅವರ ಸ್ಟೈಲ್ ಕಿಂಗ್ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ತೆರೆ ಕಾಣಲಿದೆ.

ಸದ್ಯಕ್ಕೆ 'ಮುಂಗಾರು ಮಳೆ 2' ಹಾಗೂ 'ಪಟಾಕಿ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಗಣೇಶ್ ಅವರು ನಿರ್ದೇಶಕ ಪಿ.ಸಿ ಶೇಖರ್ ಅವರು ಆಕ್ಷನ್-ಕಟ್ ಹೇಳಿರುವ 'ಸ್ಟೈಲ್ ಕಿಂಗ್' ಹಾಗೂ zooಮ್ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.[ಗಣೇಶ್ 'ಬುಗುರಿ' ಆಟ ನೋಡಿ ವಿಮರ್ಶಕರು ಏನಂದ್ರು? ]

2012ರಲ್ಲಿ ತೆರೆ ಕಂಡ 'ರೋಮಿಯೋ' ಚಿತ್ರದಲ್ಲಿ ನಿರ್ದೇಶಕ ಪಿ.ಸಿ ಶೇಖರ್ ಹಾಗೂ ಗಣೇಶ್ ಒಂದಾಗಿದ್ದರು. ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಬಹುಭಾಷಾ ತಾರೆ ಭಾವನಾ ಮಿಂಚಿದ್ದರು. ಜೊತೆಗೆ ಸಾಧುಕೋಕಿಲ, ರಂಗಾಯಣ ರಘು, ಸುಧಾ ಬೆಳವಾಡಿ ಮುಂತಾದವರು ಕಾಣಿಸಿಕೊಂಡಿದ್ದರು.

Golden Star Ganesh's 'Style King' Coming Soon

ಇದೀಗ 2015ರಲ್ಲಿ ಅದೇ ನಿರ್ದೇಶಕರಿಂದ ಮತ್ತೊಂದು ಪಕ್ಕಾ ಆಕ್ಷನ್-ಎಂರ್ಟಟೈನ್ಮೆಂಟ್ 'ಸ್ಟೈಲ್ ಕಿಂಗ್' ಚಿತ್ರ ಹೊರಬರುತ್ತಿದೆ.

ಯಾವಾಗಲೂ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ, ಗಣೇಶ್ ಅವರು ಸ್ಟೈಲ್ ಕಿಂಗ್ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಮೂಲಕ ಚಿತ್ರ ಗಣಿ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸುತ್ತಿದೆ.['ಪಟಾಕಿ' ಹಚ್ಚಲಿದ್ದಾರೆ ಗಣೇಶ್ ಮತ್ತು ರನ್ಯ]

ಆದರೆ ವಿಶೇಷ ಏನಪ್ಪಾ ಅಂದ್ರೆ, ಗಣಿ ಅವರ 'ಸ್ಟೈಲ್ ಕಿಂಗ್' ಚಿತ್ರದಲ್ಲಿ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಅಂತ ಸಿನಿ ಪ್ರೇಕ್ಷಕರಿಗೆ ಕುತೂಹಲವಿದ್ದು, ನಿರ್ದೇಶಕರು ಇನ್ನು ರಹಸ್ಯ ಬಿಚ್ಚಿಟ್ಟಿಲ್ಲ. ಇನ್ನು ಲವರ್ ಬಾಯ್ ಆಗಿದ್ದ ಗಣಿ ಅವರು 'ಸ್ಟೈಲ್ ಕಿಂಗ್' ನಲ್ಲಿ ಗ್ಯಾಂಗ್ ಸ್ಟರ್ ಆಗಿ ಪ್ರೇಕ್ಷಕರ ಮನಗೆಲ್ಲುತ್ತಾರ ಅಂತ ಕಾದು ನೋಡೋಣ.

English summary
Golden Star Ganesh's Buguri turned out to be a moderate box office success. After Buguri, the reports says Ganesh will soon reach the big screens with PC Shekar's next action movie, 'Style King'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada