For Quick Alerts
  ALLOW NOTIFICATIONS  
  For Daily Alerts

  ಬ್ರೇಕ್ ನಿರೀಕ್ಷೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

  By Rajendra
  |

  ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಸಕ್ಕರೆ' ಚಿತ್ರ ಹಲವಾರು ಕಾರಣಗಳಿಗಾಗಿ ನಿರೀಕ್ಷಿಸುವಂತಾಗಿದೆ. ಮೊದಲನೆಯದಾಗಿ ಶೈಲಜಾ ನಾಗ್ ಹಾಗೂ ಬಿ ಸುರೇಶ್ ಅವರ ನಿರ್ಮಾಣದ ಚಿತ್ರ ಎಂಬ ಕಾರಣಕ್ಕೆ. ಏನೋ ಹೊಸದನ್ನು ಕೊಡುತ್ತಾರೆ ಎಂಬ ನಿರೀಕ್ಷೆಗಳು ನಿರ್ಮಾಪಕರ ಮೇಲಿವೆ.

  ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಸಹ ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ. ಸಕ್ಕರೆಗೂ ಮುನ್ನ ಬಿಡುಗಡೆಯಾದ ರೋಮಿಯೋ, ಮಿ.420 ಹಾಗೂ ಆಟೋರಾಜ ಚಿತ್ರಗಳು ನಿರೀಕ್ಷಿಸಿದ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಈಗ 'ಸಕ್ಕರೆ'ಯ ಅಕ್ಕರೆ ನಿರೀಕ್ಷೆಯಲ್ಲಿದ್ದಾರೆ.

  ಇನ್ನೊಂದು ಮುಖ್ಯ ವಿಚಾರ ಅಂದ್ರೆ, 'ಗುಬ್ಬಚ್ಚಿಗಳು', 'ಶಿಕಾರಿ' ತರಹದ ಅದ್ಭುತ ಚಿತ್ರಗಳನ್ನು ಕೊಟ್ಟ ಅಭಯ ಸಿಂಹ ಆಕ್ಷನ್ ಕಟ್ ಹೇಳಿರುವುದು. ಈ ಎಲ್ಲಾ ಕಾರಣಗಳಿಗಾಗಿ ಸಕ್ಕರೆ ಚಿತ್ರ ಭಾರಿ ನಿರೀಕ್ಷೆಗಳನ್ನೂ ಮೂಡಿಸಿದೆ. ರೊಮ್ಯಾಂಟಿಕ್ ಚಿತ್ರ ಸೆನ್ಸಾರ್ ಮಂಡಳಿಯಲ್ಲಿ 'ಯು' ಸರ್ಟಿಫಿಕೇಟ್ ಪಡೆದುಕೊಂಡಿದೆ.

  ಮೀಡಿಯಾ ಹೌಸ್ ಸ್ಟೂಡಿಯೋ ಲಾಂಛನದಲ್ಲಿ ಶೈಲಜಾನಾಗ್ ಹಾಗೂ ಬಿ.ಸುರೇಶ್ ನಿರ್ಮಿಸಿರುವ ಚಿತ್ರ. ಅಭಯಸಿಂಹ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ದೀಪಾಸನ್ನಿಧಿ, ಅನಂತನಾಗ್, ವಿನಯಾಪ್ರಸಾದ್, ಅನುಪ್ರಭಾಕರ್, ರಾಜೇಶ್, ಅಚ್ಯುತಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  ವಿ.ಹರಿಕೃಷ್ಣ ಸಂಗೀತ ನೀಡಿರುವ ಈ ಚಿತ್ರಕ್ಕೆ ಡಾ.ವಿಕ್ರಂ ಶ್ರೀವಾತ್ಸವ್ ಅವರ ಛಾಯಾಗ್ರಹಣವಿದೆ. ಜೋ.ನಿ.ಹರ್ಷ ಸಂಕಲನ, ಹರ್ಷ, ಚಿನ್ನಿ ಪ್ರಕಾಶ್ ನೃತ್ಯ ನಿರ್ದೇಶನ, ಮಾಸ್ ಮಾದ ಸಾಹಸ ನಿರ್ದೇಶನ, ಶಶಿಧರ್‍ ಅಡಪ ಕಲಾ ನಿರ್ದೇಶನವಿರುವ 'ಸಕ್ಕರೆ' ಚಿತ್ರದ ಸಂಭಾಷಣೆಯನ್ನು ಸುಮನ್ ದೀಪ್ ಬರೆದಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Golden Star Ganesh and Deepa Sannidhi's Kannada film 'Sakkare' is releases on 18th October. The producer Shylaja Nag and B Suresh confirmed the news about the romantic drama. Apart from Ganesh and Deepa Sannidhi, Ananthnag, Vinayaprasad, Anu Prabhakar, Rajesh, Achyuth Kumar play pivotal roles in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X