For Quick Alerts
  ALLOW NOTIFICATIONS  
  For Daily Alerts

  "ನಮ್‌ ಅಪ್ಪನ ಕೈಗೆ ತಮಟೆ ಕೊಟ್ಬಿಡಿ, ಮುತ್ತು ಕೊಡ್ಬೇಡಿ": ಭಟ್ಟರ ವೈರಲ್ ಕಿಸ್‌ಗೆ ಮಗಳಿಂದ ವಿಡಿಯೋ

  |

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಜೋಡಿಯ 'ಗಾಳಿಪಟ- 2' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗೆ ಥಿಯೇಟರ್‌ ಮುಂದೆ ಭಟ್ರ ತಮಟೆ ಹಿಡಿದು ಎರಡೇಟು ಹಾಕಿದ್ದರು. ಯಾರೋ ಅಭಿಮಾನಿಯೊಬ್ಬರು ಒಬ್ಬರು ವಿಕಟ ಕವಿ ತುಟಿಗೆ ತುಟಿ ಒತ್ತಿದ್ದರು.

  'ಗಾಳಿಪಟ- 2' ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ನಟ ಗಣೇಶ್, ಬರೆದು ಬರೆದು ನಮ್ ಭಟ್ರು ಲೂಸ್ ಆಗಿಬಿಟ್ಟಿದ್ದಾರೆ ಎಂದು ಹೇಳಿದ್ದರು. ಅದಕ್ಕೆ ಈಗ ಸಾಕ್ಷಿ ಒಂದನ್ನು ಒದಗಿಸಿದ್ದಾರೆ. ಯೋಗರಾಜ್ ಭಟ್ರ ಮನೆಯಲ್ಲಿ ನಡೆದ ಸಣ್ಣ ಫನ್ನಿ ವಿಡಿಯೋ ಶೇರ್ ಮಾಡಿದ್ದಾರೆ. ವಿಡಿಯೋ ನಿಜಕ್ಕೂ ಸಖತ್ ಮಜವಾಗಿದೆ. ಭಟ್ರು ಪತ್ನಿ ಜೊತೆ ಸೇರಿ ಮಗಳು ಪುನರ್ವಸುಳನ್ನು ಗದರುವ ವಿಡಿಯೋ ಅದು. ವಿಡಿಯೋದಲ್ಲಿ ಪುನರ್ವಸು ಅಪ್ಪನ ಬಗ್ಗೆ ತಮಾಷೆ ಮಾಡಿರುವುದು ಫನ್ನಿಯಾಗಿದೆ.

  ಗಣಿ ಈಸ್ ಬ್ಯಾಕ್; ಮೊದಲ ದಿನ 'ಗಾಳಿಪಟ'-2 ಕಲೆಕ್ಷನ್ ಎಷ್ಟು ಕೋಟಿ?ಗಣಿ ಈಸ್ ಬ್ಯಾಕ್; ಮೊದಲ ದಿನ 'ಗಾಳಿಪಟ'-2 ಕಲೆಕ್ಷನ್ ಎಷ್ಟು ಕೋಟಿ?

  ಶೂ ಧರಿಸಿ ಎಲ್ಲೋ ಹೊರಟ ಯೋಗರಾಜ್ ಭಟ್ಟರ ವಿಡಿಯೋ ಮಾಡಿರೋ ಪುನರ್ವಸು, "ನಮ್ ಅಪ್ಪ ಲೂಸ್ ಆಗಿದ್ದಾರಂತೆ. ನಮ್ ಅಮ್ಮ ಹೇಳ್ತಿದ್ದಾರೆ" ನೋಡಿ ಗೇಲಿ ಮಾಡಿದ್ದಾಳೆ. ವಿಡಿಯೋ ಮಾಡಬೇಡ, ಕಟ್ ಮಾಡು ಎಂದು ಭಟ್ರು ಹಾಗೂ ಪತ್ನಿ ರೇಣುಕಾ ಭಟ್ ಇಬ್ಬರೂ ಹೇಳಿದ್ದಾರೆ. ಇಲ್ಲ ನಾನು ಅಪ್‌ಲೋಡ್‌ ಮಾಡ್ತಿನಿ ಎಂದು ಪುನರ್ವಸು ತಮಾಷೆ ಮಾಡಿರೋದನ್ನು ವಿಡಿಯೋದಲ್ಲಿ ನೋಡಬಹುದು.

  'ಅಪ್ಪನ ಕೈಗೆ ತಮಟೆ ಕೊಟ್ಟುಬಿಡಿ'

  ಮೊನ್ನೆ ಯೋಗರಾಜ್‌ ಭಟ್ರು ವೀರೇಶ್ ಥಿಯೇಟರ್ ಮುಂದೆ ತಮಟೆ ಬಾರಿಸಿ, ಗಮನ ಸೆಳೆದಿದ್ದರು. 'ಗಾಳಿಪಟ- 2' ಚಿತ್ರದ ಫಸ್ಟ್‌ ಡೇ ಫಸ್ಟ್‌ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ ಜೋಶ್‌ನಲ್ಲಿ ಎರಡೇಟು ಹಾಕಿದ್ರು. ಇದೇ ವಿಚಾರವನ್ನು ಪ್ರಸ್ತಾಪಿಸಿ ಪುನರ್ವಸು "ನಮ್ಮ ಅಪ್ಪ ಈಗ ಹೊರಗೆ ಹೋಗ್ತಿದ್ದಾರೆ ಪ್ಲೀಸ್ ಅವರ ಕೈಗೆ ತಮಟೆ ಕೊಟ್ಟುಬಿಡಿ' ಎಂದು ವ್ಯಂಗ್ಯ ಮಾಡಿದ್ದಾಳೆ.

  Gaalipata 2 Review: ಬಗೆಹರಿಯದ ಭಾವನೆಗಳು ಮತ್ತು ಕನ್ನಡ, ಇದು ಭಟ್ಟರು ಬಿಟ್ಟ 2ನೇ 'ಗಾಳಿಪಟ'!Gaalipata 2 Review: ಬಗೆಹರಿಯದ ಭಾವನೆಗಳು ಮತ್ತು ಕನ್ನಡ, ಇದು ಭಟ್ಟರು ಬಿಟ್ಟ 2ನೇ 'ಗಾಳಿಪಟ'!

   'ಪ್ಲೀಸ್ ಡೋಂಟ್ ಕಿಸ್ ಹಿಮ್'

  'ಪ್ಲೀಸ್ ಡೋಂಟ್ ಕಿಸ್ ಹಿಮ್'

  'ಗಾಳಿಪಟ- 2' ಸಿನಿಮಾ ಸೆಲೆಬ್ರೆಷನ್ ಸಮಯದಲ್ಲೇ ಅಭಿಮಾನಿಯೊಬ್ಬರು ಯೋಗರಾಜ್ ಭಟ್ರ ತುಟಿಗೆ ಮುತ್ತು ಕೊಟ್ಟಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಫುಲ್ ಟೈಟ್‌ ಆಗಿ ತೂರಾಡುತ್ತಿದ್ದ ಅಭಿಮಾನಿಯೊಬ್ಬರು ಥಿಯೇಟರ್ ಮುಂದೆ ಭಟ್ರ ಕಾಲಿಗೆ ಬಿದ್ದಿದ್ದರು. ಆತನನ್ನು ಆಲಂಗಿಸಿಕೊಂಡಿದ್ದ ಭಟ್ರು, ಆತನ ಹಣೆಗೆ ಮುತ್ತು ಕೊಟ್ಟಿದ್ದರು. ಆತ ಕೂಡ ಭಟ್ಟರನ್ನು ಮುದ್ದಾಡಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ಹೊರಗೆ ಹೊರಟ ತಂದೆಯನ್ನು ನೋಡಿ ಪುನರ್ವಸು 'ಪ್ಲೀಸ್ ಡೋಂಟ್ ಕಿಸ್ ಹಿಮ್' ಎಂದಿದ್ದಾಳೆ.

   ತಮ್ಮ ಮಾತಿಗೆ ಸಾಕ್ಷಿ ತೋರಿಸಿದ ಗಣೇಶ್

  ತಮ್ಮ ಮಾತಿಗೆ ಸಾಕ್ಷಿ ತೋರಿಸಿದ ಗಣೇಶ್

  ಪುನರ್ವಸು ಮಾಡಿರುವ ಫನ್ನಿ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿರುವ ಗಣೇಶ್‌, "ನಾನು ಹೇಳ್ದೆ 'ನಮ್ ಭಟ್ರು ಲೂಸ್ ಆಗವ್ರೆ' ಅಂತ. ಯಾರೂ ನಂಬಲಿಲ್ಲ. ಇಲ್ಲಿ ನೋಡಿ. 'ಲೂಸ್ ಆಗವ್ರೆ' ಅಂತ ಭಟ್ರ ಹೆಂಡತಿ ಮತ್ತೆ ಮಗಳೇ ಕನ್ಫರ್ಮ್ ಮಾಡ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ. ವಿಡಿಯೋ ನೋಡಿ ನಕ್ಕಿರುವ ಗಣೇಶ್ 'ಗಾಳಿಪಟ- 2 ರಿಲೀಸ್ ಆಗಿ ಪ್ರಪಂಚಾದ್ಯಂತ ಅಭಿಮಾನಿಗಳು ಜಾಸ್ತಿ ಪ್ರೀತಿ ತೋರ್ಸೋಕ್ಕೆ ಶುರು ಮಾಡಿದ್ಮೇಲಂತೂ ಕಂಟ್ರೋಲ್‌ಗೇ ಸಿಗದೆ ಹೆಂಗೆಂಗೋ ಆಡ್ತಾವ್ರೆ, 'ಕೈಲಿ ತಮಟೆ ಕೊಡ್ಬೇಡಿ' ಅನ್ನುವು ಎಪಿಕ್' ಎಂದು ಟ್ವೀಟ್ ಮಾಡಿದ್ದಾರೆ.

   'ಗಾಳಿಪಟ- 2'ಗೆ ಸಖತ್ ರೆಸ್ಪಾನ್ಸ್

  'ಗಾಳಿಪಟ- 2'ಗೆ ಸಖತ್ ರೆಸ್ಪಾನ್ಸ್

  ಶುಕ್ರವಾರ ಬಿಡುಗಡೆಯಾದ 'ಗಾಳಿಪಟ- 2' ಸಿನಿಮಾ ಪ್ರಪಂಚದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಗಿಸಿ, ಅಳಿಸುವ ಸಿನಿಮಾ ಪ್ರೇಕ್ಷಕರ ಮನಗೆದ್ದಿದ್ದು ಥಿಯೇಟರ್‌ಗಳು ಹೌಸ್‌ಫುಲ್ ಆಗ್ತಿದೆ. ಕೋಟಿ ಕೋಟಿ ರೂ. ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. ಎಲ್ಲಾ ವಿಭಾಗದಲ್ಲೂ ಒಳ್ಳೆ ಅಂಕ ಗಿಟ್ಟಿಸಿಕೊಂಡಿರುವ ಸಿನಿಮಾ ಉತ್ತಮ ಗಳಿಕೆ ಕಾಣುತ್ತಿದೆ. ಯೋಗರಾಜ್ ಭಟ್ ಹಾಗೂ ಗಣೇಶ್ ಇಬ್ಬರಿಗೂ ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿದೆ.

  English summary
  Golden Star Ganesh Shared Director Yogaraj Bhat Funny Video. Know More
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X