»   » ಕನ್ನಡದಲ್ಲಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ 'ರಾಜಕುಮಾರ'!

ಕನ್ನಡದಲ್ಲಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ 'ರಾಜಕುಮಾರ'!

Posted By:
Subscribe to Filmibeat Kannada

ಪುನೀತ್ ರಾಜಕುಮಾರ್ ಅವರ 'ರಾಜಕುಮಾರ' ಸಿನಿಮಾ ಈಗಾಗಲೇ ಸಾಕಷ್ಟು ದಾಖಲೆಗಳನ್ನು ತನ್ನ ಖಾತೆಯಲ್ಲಿ ಇಟ್ಟುಕೊಂಡಿದೆ. ಅದೇ ರೀತಿ ಇದೀಗ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ.

ಅಪ್ಪು ಡ್ಯಾನ್ಸ್ ನೋಡಿ ಬೌಲ್ಡ್ ಆದ ವಿದೇಶಿ ನಟಿ ಎಲ್ಲಿ ಅವರಾಮ್.!

'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ..' ಹಾಡು ಈಗ ಯೂ ಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಿಸಿರುವ ಕನ್ನಡದ ಹಾಡು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಸದ್ಯ ಈ ಹಾಡು ಯೂಟ್ಯೂಬ್ ನಲ್ಲಿ 40 ಮಿಲಿಯನ್ ಗೂ ಹೆಚ್ಚು ಹಿಟ್ಸ್ ಪಡೆದಿದೆ. ಜೊತೆಗೆ 143000 ಲೈಕ್ಸ್ ಪಡೆದಿದೆ.

'Gombe Heluthaithe' song has reached 40 million views in Youtube.

ಚಿತ್ರದ ಈ ಹಾಡಿನ ದಾಖಲೆ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಇನ್ನು 'ಬೊಂಬೆ ಹೇಳುತೈತೆ..' ಹಾಡಿಗೆ ವಿ.ಹರಿಕೃಷ್ಣ ಸಂಗೀತ ನೀಡಿದ್ದರು. ವಿಜಯ ಪ್ರಕಾಶ್ ಹಾಡಿಗೆ ಧ್ವನಿಯಾಗಿದ್ದರು. ಸಂತೋಷ್ ಆನಂದ್ ರಾಮ್ ಅವರೇ ಹಾಡಿನ ಸಾಹಿತ್ಯ ಬರೆದಿದ್ದರು.

'Gombe Heluthaithe' song has reached 40 million views in Youtube.

ಇದರೊಂದಿಗೆ 'ಬೊಂಬೆ ಹೇಳುತೈತೆ..' ವಿಡಿಯೋ ಹಾಡಿನ್ನು ಬರಿ ನಾಲ್ಕು ತಿಂಗಳಿನಲ್ಲಿ 8 ಮಿಲಿಯನ್ ಗೂ ಅಧಿಕ ಜನ ನೋಡಿದ್ದಾರೆ. ಸಿನಿಮಾದ ಈ ಹಾಡಿಗೆ ಅನೇಕ ಸಂಖ್ಯೆಯ ಕವರ್ ಹಾಡುಗಳು ಕೂಡ ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.

English summary
'Raajakumara' movie 'Gombe Heluthaithe' song has reached 40 million views in Youtube.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada