»   » 'ಫಿಲ್ಮಿಬೀಟ್ ಕನ್ನಡ'ದ ಫೇಸ್ ಬುಕ್ ಲೈವ್ ವಿ.ನಾಗೇಂದ್ರ ಪ್ರಸಾದ್ ಮತ್ತು ತಂಡ

'ಫಿಲ್ಮಿಬೀಟ್ ಕನ್ನಡ'ದ ಫೇಸ್ ಬುಕ್ ಲೈವ್ ವಿ.ನಾಗೇಂದ್ರ ಪ್ರಸಾದ್ ಮತ್ತು ತಂಡ

Posted By:
Subscribe to Filmibeat Kannada

ವಿ.ನಾಗೇಂದ್ರ ಪ್ರಸಾದ್ ನಟನೆ ಮತ್ತು ನಿರ್ದೇಶನದ 'ಗೂಗಲ್' ಸಿನಿಮಾ ಇದೇ ಶುಕ್ರವಾರ ರಾಜ್ಯಾದಂತ್ಯ ಬಿಡುಗಡೆ ಆಗಲಿದೆ. ಈ ವಿಶೇಷವಾಗಿ ಇಂದು ಮಧ್ಯಾಹ್ನ 3 ಗಂಟೆಗೆ ವಿ.ನಾಗೇಂದ್ರ ಪ್ರಸಾದ್, ನಟಿ ಶುಭಾ ಪೂಂಜಾ ಸೇರಿದಂತೆ ಚಿತ್ರತಂಡ 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಬರಲಿದೆ.

ಅಂದಹಾಗೆ, 'ಗೂಗಲ್' ಸಿನಿಮಾ 2001 ಇಸವಿನಲ್ಲಿ ನಡೆದಿರುವ ಸತ್ಯ ಘಟನೆಯ ಸಿನಿಮಾವಾಗಿದೆ. ಈ ಚಿತ್ರದಲ್ಲಿ ನಾಗೇಂದ್ರ ಪ್ರಸಾದ್ ಒನ್ ಶೋ ಇದೆ. ಕಾರಣ ಈ ಚಿತ್ರದಲ್ಲಿ ಅವರ ನಟನೆ, ನಿರ್ದೇಶನ, ನಿರ್ಮಾಣ, ಸಂಗೀತ ನಿರ್ದೇಶನದ ಜೊತೆಗೆ ಎಂದಿನಂತೆ ಸುಂದರ ಹಾಡುಗಳನ್ನು ಬರೆದಿದ್ದಾರೆ. ಅದರಲ್ಲಿಯೂ 'ಜೋಲಾಲಿ..' ಹಾಡು ಎಲ್ಲರ ಮನ ಗೆದ್ದಿದೆ.

ಬಿಡುಗಡೆಗೂ ಮುಂಚೆಯೇ 'ಗೂಗಲ್' ಚಿತ್ರಕ್ಕೆ ಭಾರಿ ಡಿಮ್ಯಾಂಡ್

ಬಿಡುಗಡೆಯಾಗದ 'ಗೂಗಲ್' ಚಿತ್ರದ ಟ್ರೈಲರ್ ನೋಡಿ ತಮಿಳು ನಿರ್ಮಾಪಕರೊಬ್ಬರು ರೀಮೇಕ್ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಗೂಗಲ್ ಚಿತ್ರತಂಡದ ಜೊತೆ ಮಾತುಕತೆ ಮಾಡಿದ್ದು, ಎಲ್ಲ ಅಂದುಕೊಂಡಂತೆ ಆದ್ರೆ ಪರಭಾಷೆಯಲ್ಲೂ 'ಗೂಗಲ್' ಮಿಂಚಲಿದೆ.

Google kannada movie team will be on filmibeat kannada facebook live today at 3pm

ಉತ್ಸವ್ ಮೂವೀಸ್ ಬ್ಯಾನರ್ ಅಡಿಯಲ್ಲಿ 'ಗೂಗಲ್' ಚಿತ್ರ ನಿರ್ಮಾಣ ಆಗಿದೆ. ಸಿನಿಮಾದಲ್ಲಿ 8 ಪ್ರಮುಖ ಪಾತ್ರಗಳಿವೆ. ನಾಯಕಿ ಶುಭಾ ಪೂಂಜಾ ಇದೇ ಮೊದಲ ಬಾರಿಗೆ ಕೌಟುಂಬಿಕ ಹೊಣೆ ಹೊತ್ತ ಗೃಹಿಣಿಯಾಗಿ ಚಿತ್ರದಲ್ಲಿ ನಟಿಸಿದ್ದಾರೆ. ದೀಪಕ್ ಹಾಗೂ ಅಮೃತಾ ರಾವ್ ಎಂಬ ಹೊಸ ಪ್ರತಿಭೆಗಳು ಚಿತ್ರದಲ್ಲಿ ನಟಿಸಿದ್ದಾರೆ.

English summary
Google kannada movie team will be on filmibeat kannada facebook live today at 3pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada