For Quick Alerts
  ALLOW NOTIFICATIONS  
  For Daily Alerts

  ನಟಿ ಪ್ರೇಮ ಜೊತೆ ಲವ್ ಅಫೇರ್!? RJ ರಾಜೇಶ್ ಏನಂತಾರೆ ಗೊತ್ತೇ?

  By Harshitha
  |

  ಚಂದನವನದ 'ಚೆಲ್ವಿ' ನಟಿ ಪ್ರೇಮ ಸಂಸಾರದಲ್ಲಿ ಬಿರುಗಾಳಿ ಎದ್ದಿರುವ ಸುದ್ದಿ ನಿಮಗೆ ಗೊತ್ತಿದೆ.

  2006ರಲ್ಲಿ ಕೊಡಗಿನ ಜೀವನ್ ಅಪ್ಪಚ್ಚು ಎಂಬುವವರನ್ನ ವಿವಾಹವಾಗಿದ್ದ ನಟಿ ಪ್ರೇಮ ಇದೀಗ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

  ಪರಸ್ಪರ ಒಪ್ಪಿಗೆ ಮೇರೆಗೆ ನಟಿ ಪ್ರೇಮ-ಜೀವನ್ ಅಪ್ಪಚ್ಚು ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರ ಸಂಬಂಧ ಬಿರುಕು ಮೂಡುವುದಕ್ಕೆ ಅನೇಕ ಕಾರಣಗಳಿರಬಹುದು. ಆದ್ರೆ, ಗಾಂಧಿನಗರದಲ್ಲಿ ಹಬ್ಬಿದ ಪುಕಾರೇ ಬೇರೆ. [ನಟಿ 'ಪ್ರೇಮ' ಸಂಸಾರ 'ಜೀವನ'ದಲ್ಲಿ ಬಿರುಕು! ಅಸಲಿ ಕಾರಣವೇನು?]

  ನಟಿ ಪ್ರೇಮ ಹಾಗೂ 'ಲವ್ ಗುರು' ಖ್ಯಾತಿಯ RJ ರಾಜೇಶ್ 'ಪ್ರೇಮದ ಅಮಲಿನಲ್ಲಿದ್ದಾರಂತೆ' ಅಂತೆಲ್ಲಾ ಅಂತೆ-ಕಂತೆ ಮಾತುಗಳು ಗಾಂಧಿನಗರದ ಮೂಲೆ ಮೂಲೆಯಲ್ಲೂ ಕೇಳಿಬಂತು. [ಕನ್ನಡ ಥಳಕು ಬಳುಕಿನ ಲೋಕದಲ್ಲಿ ದಾಂಪತ್ಯದ ಹುಳುಕು]

  ಈ ಬಗ್ಗೆ ಅಂದು ಪ್ರತಿಕ್ರಿಯೆ ನೀಡದ RJ ರಾಜೇಶ್, ಈಗ 'ವಿಜಯ ಕರ್ನಾಟಕ' ದಿನಪತ್ರಿಕೆಗೆ ಸಂದರ್ಶನ ನೀಡಿದ್ದಾರೆ. RJ ರಾಜೇಶ್ ಹಾಗೂ ಪ್ರೇಮ ಮದುವೆಯಾಗಲಿದ್ದಾರಾ? ಎಂಬ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ. ಮುಂದೆ ಓದಿ....

  ಪ್ರೇಮ ಜೊತೆಗಿನ ಲವ್ ಅಫೇರ್ ಗಾಸಿಪ್ ಬಗ್ಗೆ RJ ರಾಜೇಶ್ ಮಾತು

  ಪ್ರೇಮ ಜೊತೆಗಿನ ಲವ್ ಅಫೇರ್ ಗಾಸಿಪ್ ಬಗ್ಗೆ RJ ರಾಜೇಶ್ ಮಾತು

  ನಟಿ ಪ್ರೇಮ ಹಾಗೂ RJ ರಾಜೇಶ್ ಅಲ್ಲಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ಇಬ್ಬರು ಹಸೆಮಣೆ ಏರಲಿದ್ದಾರೆ ಅಂತ ಯಾರು ಗಾಸಿಪ್ ಸೃಷ್ಟಿಸಿದರೋ ಗೊತ್ತಿಲ್ಲ. ಅಂಥವರ ಬಗ್ಗೆ ಕೊಂಚ ಗರಂ ಆಗಿ RJ ರಾಜೇಶ್ ಪ್ರತಿಕ್ರಿಯೆ ನೀಡಿದ್ದಾರೆ. [ನಟಿ ಪ್ರೇಮಾ ದಾಂಪತ್ಯದಲ್ಲಿ ಬಿರುಕು, ವಿಚ್ಛೇದನಕ್ಕಾಗಿ ಅರ್ಜಿ]

  ಸಂದರ್ಶನದ ಆಯ್ದ ಭಾಗ ಇಲ್ಲಿದೆ...

  ಸಂದರ್ಶನದ ಆಯ್ದ ಭಾಗ ಇಲ್ಲಿದೆ...

  ನಟಿ ಪ್ರೇಮ ಜೊತೆಗಿನ ಲವ್ವಿ ಡವ್ವಿ ಗಾಸಿಪ್ ವಿಚಾರವಾಗಿ 'ವಿಜಯ ಕರ್ನಾಟಕ' ದಿನಪತ್ರಿಕೆಗೆ RJ ರಾಜೇಶ್ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ, ಮುಂದಿನ ಸ್ಲೈಡ್ ಕ್ಲಿಕ್ಕಿಸಿ....

  ನಾವಿಬ್ಬರೂ ಅಕ್ಕ-ತಮ್ಮ

  ನಾವಿಬ್ಬರೂ ಅಕ್ಕ-ತಮ್ಮ

  ''ಈ ಮಟ್ಟಕ್ಕೆ ಗಾಸಿಪ್ ಗಳು ಹರಡುತ್ತವೆ ಅಂತ ಅಂದುಕೊಂಡಿರಲಿಲ್ಲ. ನಾವಿಬ್ಬರೂ ಅಕ್ಕ-ತಮ್ಮನಂತೆ ಇದ್ದೇವೆ. ಇಂದಿಗೂ ನಾನು ಅವರನ್ನು ಪ್ರೇಮಕ್ಕ ಅಂತಾನೇ ಕರೆಯೋದು. ಹೀಗಿರುವಾಗ, ಅಕ್ಕ-ತಮ್ಮ ನಡುವೆ ಸಂಬಂಧ ಕಟ್ಟೋದನ್ನು ಕೇಳಿದರೆ ಹೇಗಾಗಬೇಡ ನೀವೇ ಹೇಳಿ'' - RJ ರಾಜೇಶ್

  ಅಯ್ಯಪ್ಪ ಹೇಗೋ, ಹಾಗೇ ನಾನು!

  ಅಯ್ಯಪ್ಪ ಹೇಗೋ, ಹಾಗೇ ನಾನು!

  ''ಸುಮಾರು 8 ವರ್ಷಗಳಿಂದ ಪ್ರೇಮಕ್ಕ ನನಗೆ ಪರಿಚಯ. ಒಂದೇ ಹೊಟ್ಟೆಯಲ್ಲಿ ಹುಟ್ಟಿಲ್ಲ ಅಷ್ಟೆ. ಅವರಿಗೆ ಅಯ್ಯಪ್ಪ ಹೇಗೋ ನಾನು ಹಾಗೇ'' - RJ ರಾಜೇಶ್

  ಒಟ್ಟಿಗೆ ಸುತ್ತಾಟ?

  ಒಟ್ಟಿಗೆ ಸುತ್ತಾಟ?

  ''ನಮ್ಮ ಅಮ್ಮ, ತಂಗಿ, ಪ್ರೇಮಕ್ಕ ಎಲ್ಲರೂ ಒಂದು ಗ್ಯಾಂಗ್. ಎಲ್ಲೇ ಹೋದರೂ ಒಟ್ಟಿಗೆ ಹೋಗ್ತೀವಿ. ದೇವಸ್ಥಾನಗಳಿಗೆ ಟೂರ್ ಹೋಗ್ತೀವಿ. ಮೊನ್ನೆ ಶಿರಡಿಗೂ ಹೋಗಿ ಬಂದೆವು. ನನ್ನ ತಂಗಿ ಮದುವೆಯಲ್ಲಿ ಪ್ರೇಮಕ್ಕ ತಮ್ಮ ಮನೆ ಮದುವೆಯಷ್ಟೇ ಸಂಭ್ರಮದಿಂದ ಓಡಾಡಿದ್ದಾರೆ. ಆಗ ತೆಗೆದ ಫೋಟೋ ಕ್ರಾಪ್ ಮಾಡಿ ಪಬ್ಲಿಷ್ ಮಾಡಿದ್ದಾರೆ'' - RJ ರಾಜೇಶ್

  ಗಾಸಿಪ್ ಬಗ್ಗೆ ಮೊದಲು ಕೇಳಿದ್ದು...

  ಗಾಸಿಪ್ ಬಗ್ಗೆ ಮೊದಲು ಕೇಳಿದ್ದು...

  ''ನನ್ನ ಮೊದಲ ಚಿತ್ರ 'ಫಸ್ಟ್ ಲವ್' ಚಿತ್ರದ ಚಿತ್ರೀಕರಣಕ್ಕಾಗಿ ವಿಜಯಪುರಕ್ಕೆ ಹೋಗ್ತಿದ್ದೆ. ಆಗ ಟಿವಿ ಚಾನೆಲ್ ಗಳಿಂದ ಫೋನ್ ಕಾಲ್ ಬರತೊಡಗಿತು. ಪ್ರೇಮ ಡಿವೋರ್ಸ್ ಬಗ್ಗೆ ನೀವೇನು ಹೇಳ್ತೀರಿ? ಡಿಸ್ಕಷನ್ ಗೆ ಬನ್ನಿ. ಅಂತೆಲ್ಲಾ. ನಾನು ಯಾಕೆ ರಿಯಾಕ್ಟ್ ಮಾಡಬೇಕು? ಬಹಳ ಬೇಸರ ಆಯ್ತು'' - RJ ರಾಜೇಶ್

  ಡಿವೋರ್ಸ್ ಪರ್ಸನಲ್ ವಿಚಾರ...

  ಡಿವೋರ್ಸ್ ಪರ್ಸನಲ್ ವಿಚಾರ...

  'ಡಿವೋರ್ಸ್ ಅವರ ಪರ್ಸನಲ್ ವಿಚಾರ. ನಾನು ಎಂದೂ ಅವರನ್ನು ಇದರ ಬಗ್ಗೆ ಕೇಳಿದವನಲ್ಲ'' - RJ ರಾಜೇಶ್

  ಮನೆಯವರು ಏನು ಹೇಳ್ತಾರೆ?

  ಮನೆಯವರು ಏನು ಹೇಳ್ತಾರೆ?

  ''ಈ ಸುದ್ದಿ ಕೇಳಿ ನನ್ನ ಅಮ್ಮ ನಕ್ಕುಬಿಟ್ಟರು'' - RJ ರಾಜೇಶ್

  ಪ್ರೇಮ ಪ್ರತಿಕ್ರಿಯೆ?

  ಪ್ರೇಮ ಪ್ರತಿಕ್ರಿಯೆ?

  ''ವೆಲ್ ಕಮ್ ಟು ದಿ ಫಿಲ್ಮ್ ಇಂಡಸ್ಟ್ರಿ'' ಅಂತ ನಕ್ಕು ಬಿಟ್ಟರು.

  ಬೇಸರವಾಗಿದೆ!

  ಬೇಸರವಾಗಿದೆ!

  ''ಸಮಾಜದಲ್ಲಿ ಗಂಡು ಹೆಣ್ಣಿನ ನಡುವೆ ಅಕ್ಕ-ತಮ್ಮನ ಹಾಗೆ ಇರೋದು ಸಾಧ್ಯವೇ ಇಲ್ಲವೇ? ಅದನ್ನು ಹೀಗೆ ತಪ್ಪಾಗಿ ಅರ್ಥೈಸಿಕೊಳ್ಳೋದೇ ಪತ್ರಿಕೋದ್ಯಮನಾ?'' - RJ ರಾಜೇಶ್

  RJ ರಾಜೇಶ್ ಹಿನ್ನಲೆ

  RJ ರಾಜೇಶ್ ಹಿನ್ನಲೆ

  ರೇಡಿಯೋ ಸಿಟಿ 91.1 FM ನಲ್ಲಿ ರಾಜೇಶ್ ರೇಡಿಯೋ ಜಾಕಿ. 'ಲವ್ ಗುರು' ಎಂಬ ಶೋ ಮೂಲಕ ಜನಪ್ರಿಯತೆ ಗಳಿಸಿದವರು ರಾಜೇಶ್. ಇದೀಗ 'ಫಸ್ಟ್ ಲವ್' ಎಂಬ ಸಿನಿಮಾದಲ್ಲಿ ರಾಜೇಶ್ ಅಭಿನಯಿಸುತ್ತಿದ್ದಾರೆ.

  ನಟಿ ಪ್ರೇಮ ಮಾತ್ರ ಯಾರ ಕೈಗೂ ಸಿಕ್ಕಿಲ್ಲ!

  ನಟಿ ಪ್ರೇಮ ಮಾತ್ರ ಯಾರ ಕೈಗೂ ಸಿಕ್ಕಿಲ್ಲ!

  ವಿಚ್ಛೇದನ ವಿಚಾರವಾಗಿ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆದರೂ, ನಟಿ ಪ್ರೇಮ ಮಾತ್ರ ಇದುವರೆಗೂ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ.

  ಸಂಪೂರ್ಣ ಸಂದರ್ಶನ ಇಲ್ಲಿದೆ...

  ಸಂಪೂರ್ಣ ಸಂದರ್ಶನ ಇಲ್ಲಿದೆ...

  'ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂದರ್ಶನದ ಲಿಂಕ್ ಇಲ್ಲಿದೆ.

  English summary
  'Love Guru' fame RJ Rajesh has reacted to the Leading Daily 'Vijaya Karnataka' regarding the Gossip surrounding his Love affair with Kannada Actress Prema.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X