»   » ಏಪ್ರಿಲ್ 27ರಿಂದಲೇ 'ಮಲ್ಟಿಪ್ಲೆಕ್ಸ್'ಗಳಲ್ಲಿ ರೂ 200 ಟಿಕೆಟ್ ದರ ಜಾರಿ: ಸಾ.ರಾ ಗೋವಿಂದು!

ಏಪ್ರಿಲ್ 27ರಿಂದಲೇ 'ಮಲ್ಟಿಪ್ಲೆಕ್ಸ್'ಗಳಲ್ಲಿ ರೂ 200 ಟಿಕೆಟ್ ದರ ಜಾರಿ: ಸಾ.ರಾ ಗೋವಿಂದು!

Posted By:
Subscribe to Filmibeat Kannada

'ಮಲ್ಟಿಪ್ಲೆಕ್ಸ್' ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ನಾಳೆಯಿಂದನೇ ಜಾರಿಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.['ಮಲ್ಟಿಫ್ಲೆಕ್ಸ್'ಗಳಿಗೆ ಸಿದ್ದು ಸರ್ಕಾರ ಶಾಕ್: ಚಿತ್ರಪ್ರೇಮಿಗಳಿಗೆ 'ಸಿನಿಮಾ ಭಾಗ್ಯ' ]

ಏಕರೂಪ ಟಿಕೆಟ್ ದರ ನೀತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಸಹಿ ಮಾಡಿದ್ದು, ನಾಳೆ ಪತ್ರ ಅಧಿಕೃತವಾಗಿ ವಾಣಿಜ್ಯ ಮಂಡಳಿ ಕೈಸೇರಲಿದೆ. ಪತ್ರ ಕೈಸೇರುತ್ತಿದ್ದಂತೆ ತಕ್ಷಣವೇ ಮಲ್ಟಿಪ್ಲೆಕ್ಸ್ ಗಳಲ್ಲಿ 200 ಟಿಕೆಟ್ ದರ ಜಾರಿಯಾಗಲಿದೆ ಎಂದು ಸಾರಾ ಗೋವಿಂದು ಸ್ವಷ್ಟಪಡಿಸಿದರು.['ಮಲ್ಟಿಪ್ಲೆಕ್ಸ್'ಗಳಲ್ಲಿ ರೂ.200 ಟಿಕೆಟ್ ದರ: ಇನ್ನೆರೆಡು ದಿನಗಳಲ್ಲಿ ಅಧಿಕೃತ]

Government Orders for Rs 200 in Multiflex Say Sa ra Govindu

ಏಕರೂಪ ಟಿಕೆಟ್ ದರ ಕೇವಲ ಮಲ್ಟಿಪ್ಲೆಕ್ಸ್ ಗಳಲ್ಲಿ ಮಾತ್ರವಲ್ಲ, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಕ್ಕೂ ಈ ನೀತಿ ಅನ್ವಯವಾಗಲಿದೆ ಎಂದರು. ಇನ್ನು 'ಬಾಹುಬಲಿ' ಚಿತ್ರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಸಾರಾ ಗೋವಿಂದು, 500, 600 ರೂ ಕೊಟ್ಟು 'ಬಾಹುಬಲಿ' ಚಿತ್ರಕ್ಕೆ ಟಿಕೆಟ್ ಪಡೆಯುತ್ತಿದ್ದಾರೆ. ದಯವಿಟ್ಟು ಹೆಚ್ಚು ದುಡ್ಡು ಕೊಟ್ಟು ಟಿಕೆಟ್ ಪಡಯಬೇಡಿ, ಏಕರೂಪ ಟಿಕೆಟ್ ದರ ನಾಳೆಯೇ ಜಾರಿಯಾಗಲಿದೆ ಎಂದು ಮನವಿ ಮಾಡಿಕೊಂಡರು.[ಮೇ ತಿಂಗಳಿಂದ 'ಮಲ್ಟಿಪ್ಲೆಕ್ಸ್'ಗಳಲ್ಲಿ 200 ರೂ ಟಿಕೆಟ್ ಕಡ್ಡಾಯ: ಸಿದ್ದರಾಮಯ್ಯ]

ಮಾರ್ಚ್ 15 ರಂದು 2017ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಮಲ್ಟಿಪ್ಲೆಕ್ಸ್'ಗಳಿಗೆ ಏಕರೀತಿಯ ಪ್ರವೇಶದರ ನೀತಿ ಆದೇಶ ಹೊರಡಿಸಿದ್ದರು. ಮೇ ತಿಂಗಳಿನಿಂದ ಈ ನೀತಿ ಜಾರಿಯಾಗಲಿದೆ ಎಂದು ಸರ್ಕಾರ ತಿಳಿಸಿತ್ತು.['ಮಲ್ಟಿಪ್ಲೆಕ್ಸ್'ಗಳಲ್ಲಿ ಇನ್ನೂ ಸಿಗುತ್ತಿಲ್ಲ 200 ರೂಗೆ ಸಿನಿಮಾ ಟಿಕೆಟ್ ]

English summary
The Karnataka government has issued a Government Order on capping of film ticket prices in single screens and multiplexes at Rs 200.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada