»   » ತಮಿಳು, ತೆಲುಗು ಭಾಷೆಗೆ ಗೋವಿಂದಾಯ ನಮಃ

ತಮಿಳು, ತೆಲುಗು ಭಾಷೆಗೆ ಗೋವಿಂದಾಯ ನಮಃ

Posted By:
Subscribe to Filmibeat Kannada

"ನಮ್ದುಕೆ ಪ್ಯಾರ್ ಗೆ ಆಗ್ಬಿಟ್ಟೈತೆ..." ಎಂದು ರಾಜ್ಯದಾದ್ಯಂತ ಸದ್ದು ಮಾಡಿದ್ದ ಕೋಮಲ್ ಅಭಿನಯದ ಚಿತ್ರ 'ಗೋವಿಂದಾಯ ನಮಃ'. ಯಶಸ್ವಿ ನಿರ್ದೇಶಕ ಯೋಗರಾಜ್ ಭಟ್ ಗರಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಪವನ್ ವಡೆಯರ್ ನಿರ್ದೇಶನದ ಈ ಚಿತ್ರ ಇದೀಗ ತೆಲುಗು, ತಮಿಳು ಭಾಷೆಗೆ ರೀಮೇಕ್ ಆಗುತ್ತಿದೆ.

2012ನೇ ಸಾಲಿನಲ್ಲಿ ಭರ್ಜರಿ ಹಿಟ್ ದಾಖಲಿಸಿದ ಈ ಚಿತ್ರದಲ್ಲಿ ಹಾಸ್ಯ ನಟ ಕೋಮಲ್ ಪ್ರಮುಖ ಪಾತ್ರ ಪೋಷಿಸಿದ್ದಾರೆ. ಪಾರುಲ್ ಯಾದವ್, ಮಧುಲಿಕಾ, ರೇಖಾ ವೇದವ್ಯಾಸ್, ಅನಾ ಜಾರ್ಜಿಯಾ, ಹರೀಶ್ ರಾಜ್, ವಿನಾಯಕ ಜೋಷಿ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. (ಗೋವಿಂದಾಯ ನಮಃ ಚಿತ್ರ ವಿಮರ್ಶೆ)


ಚಿತ್ರ ಬಿಡುಗಡೆಯಾದ ಒಂದು ವರ್ಷದ ಬಳಿಕ ಈಗ ತಮಿಳಿಗೆ ರೀಮೇಕ್ ಆಗುತ್ತಿದೆ. ಈ ಹಿಂದೆಯೇ ತಮಿಳು ರೀಮೇಕ್ ಹಕ್ಕುಗಳು ಮಾರಾಟವಾಗಿದ್ದರೂ, ಈಗ ತೆಲುಗು ರೀಮೇಕ್ ಹಕ್ಕುಗಳು ಮಾರಾಟವಾಗುತ್ತಿವೆ ಎಂದಿದ್ದಾರೆ ಚಿತ್ರದ ನಿರ್ದೇಶಕ ಪವನ್ ಕುಮಾರ್.

ತಮಿಳು ಚಿತ್ರಕ್ಕೆ ಪವನ್ ಅವರೇ ಆಕ್ಷನ್ ಕಟ್ ಹೇಳುತ್ತಾರಂತೆ. ಸದ್ಯಕ್ಕೆ ಅವರು ಯಶ್ ಹಾಗೂ ಕೃತಿ ಖರಬಂದ ಮುಖ್ಯಭೂಮಿಕೆಯಲ್ಲಿರು 'ಗೂಗ್ಲಿ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಅದಾದ ಬಳಿಕ ಅವರು ತಮಿಳು 'ಗೋವಿಂದಾಯ ನಮಃ' ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರಂತೆ. (ಏಜೆನ್ಸೀಸ್)

English summary
Director Pawan Wadeyar debut directional Kannada Comedy-drama movie (2012) to be remade in Tamil and Telugu, which starred Komal, Parul Yadav and Madhulika, among others, in the lead. Pawan will be directing the Tamil version.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada