For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ನಟಿ ಗೌತಮಿ ಗೌಡ

  By Pavithra
  |
  ಬಿಗ್ ಬಾಸ್ ಬೆಡಗಿ ಮದುವೆ ದಿನಾಂಕ ಫಿಕ್ಸ್ ಆಯ್ತು..! | Filmibeat Kannada

  'ಚಿ.ಸೌ ಚಾವಿತ್ರಿ' ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟಿ ಗೌತಮಿ ಗೌಡ ಕಿರುತೆರೆ ಮತ್ತು ಬೆಳ್ಳಿ ತೆರೆ ಎರಡರಲ್ಲಿಯೂ ಪ್ರಖ್ಯಾತಿ ಪಡೆದುಕೊಂಡವರು. 'ಚಿ ಸೌ ಸಾವಿತ್ರಿ' ಸೀರಿಯಲ್ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದರು ಗೌತಮಿ.

  ಅದರ ನಂತರ 'ತಾಯವ್ವ', 'ಚೆಲುವಿ', 'ಚಲಿಸುವ ಮೋಡಗಳು', 'ಅಮ್ಮ ನಿನಗಾಗಿ' , 'ಕುಣಿಯೋಣು ಬಾರಾ', 'ಯಾರಿಗುಂಟು ಯಾರಿಗಿಲ್ಲ' ರಿಯಾಲಿಟಿ ಶೋಗಳಲ್ಲಿ ಭಾಗಿ ಆಗಿ ನಂತರ 'ಬಿಗ್ ಬಾಸ್' ಮನೆಯ ಮೂಲಕ ಕರ್ನಾಟಕದ ಜನರಿಗೆ ಮತ್ತಷ್ಟು ಪರಿಚಯವಾದ ನಟಿ ಗೌತಮಿ. ಇತ್ತೀಚಿಗಷ್ಟೆ ತಮ್ಮ ಬಹು ದಿನದ ಗೆಳೆಯನ ಜೊತೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಗೌತಮಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

  ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ 'ಬಿಗ್ ಬಾಸ್' ಗೌತಮಿಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ 'ಬಿಗ್ ಬಾಸ್' ಗೌತಮಿ

  ಗೌತಮಿ ಗೌಡ ಮದುವೆ ಎಲ್ಲಿ ನಡೆಯುತ್ತಿದೆ. ಹೇಗಿರಲಿದೆ ಮದುವೆ ಸಂಭ್ರಮ. ಬಿಗ್ ಬಾಸ್ ಗೌತಮಿ ಕೈ ಹಿಡಿಯುತ್ತಿರುವ ಹುಡುಗ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳ ಮೂಲಕ ಮುಂದೆ ಓದಿ

  ಬಿಗ್ ಬಾಸ್ ಗೌತಮಿ ಮದುವೆ ಸಂಭ್ರಮ

  ಬಿಗ್ ಬಾಸ್ ಗೌತಮಿ ಮದುವೆ ಸಂಭ್ರಮ

  ಕಿರುತೆರೆ ಹಾಗೂ ಬೆಳ್ಳಿ ತೆರೆ ಎರಡರಲ್ಲಿಯೂ ಪ್ರಖ್ಯಾತಿ ಪಡೆದಿರುವ ನಟಿ ಗೌತಮಿ ಗೌಡ ಆಗಸ್ಟ್ 19ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜಾರ್ಜ್ ಕ್ರಿಸ್ಟಿ ಎಂಬುವವರ ಜೊತೆ ಗೌತಮಿ ಸಪ್ತಪದಿ ತುಳಿಯುತ್ತಿದ್ದಾರೆ.

  ಅದ್ಧೂರಿಯಾಗಿ ನಡೆಯಲಿದೆ ವಿವಾಹ

  ಅದ್ಧೂರಿಯಾಗಿ ನಡೆಯಲಿದೆ ವಿವಾಹ

  ಪ್ಯಾಲೆಸ್ ಗ್ರೌಂಡ್ ನಲ್ಲಿ ಆಗಸ್ಟ್ 19 ರಂದು ವಿವಾಹ ಮಹೋತ್ಸವ ನಡೆಯಲ್ಲಿದ್ದು ಸಿನಿಮಾರಂಗದ ಗಣ್ಯರು, ಕಿರುತೆರೆ ಕಲಾವಿದರು ಸೇರಿದಂತೆ ಇನ್ನು ಅನೇಕರು ಗೌತಮಿ ಮತ್ತು ಜಾರ್ಜ್ ಕ್ರಿಸ್ಟಿ ವಿವಾಹದಲ್ಲಿ ಭಾಗಿ ಆಗಲಿದ್ದಾರೆ.

  ಸಂಭ್ರಮದಲ್ಲಿ ಇಬ್ಬರು ಮನೆಯವರು ಭಾಗಿ

  ಸಂಭ್ರಮದಲ್ಲಿ ಇಬ್ಬರು ಮನೆಯವರು ಭಾಗಿ

  ಜಾರ್ಜ್ ಕ್ರಿಸ್ಟಿ ಸಾಕಷ್ಟು ದಿನಗಳಿಂದ ಗೌತಮಿ ಅವರ ಮನೆಗೆ ಪರಿಚಿತರು. ಸ್ನೇಹ ಪ್ರೀತಿಗೆ ತಿರುಗಿದ ನಂತರ ಇಬ್ಬರು ಮನೆಯವರು ಮಾತನಾಡಿ ಒಪ್ಪಿಕೊಂಡು ಸಂಭ್ರಮದಲ್ಲಿ ಮದುವೆ ಮಾಡುತ್ತಿದ್ದಾರೆ.

  ಸಿನಿಮಾದಲ್ಲಿ ಮುಂದುವರೆಯುವ ನಟಿ

  ಸಿನಿಮಾದಲ್ಲಿ ಮುಂದುವರೆಯುವ ನಟಿ

  ಗೌತಮಿ ಕಿರುತೆರೆಯಿಂದ ತಮ್ಮ ವೃತ್ತಿ ಜೀವನವನ್ನು ಆರಂಭ ಮಾಡಿದ್ದು ನಂತರ ಬೆಳ್ಳಿ ತೆರೆಯಲ್ಲಿ ನಾಯಕಿಯಾಗಿ ಮಿಂಚಿದ್ದರು. ಸದ್ಯ 'ಅಂಬಿ ನಿಂಗ್ ವಯ್ಯಸ್ಸಾಯ್ತೋ' ಹಾಗೂ ಪೂರ್ಣ ಸತ್ಯ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದು ಮದುವೆಯ ನಂತರವೂ ಸಿನಿಮಾರಂಗದಲ್ಲಿ ಮುಂದುವರೆಯಲಿದ್ದಾರೆ.

  English summary
  Kannada actress Gowthami Gowda's wedding ceremony will be held on August 19 in Bangalore. Gautham will be married to George Christie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X