»   » 'ಟಗರು' ಟೀಸರ್ ಬಿಡುಗಡೆ ಸಮಾರಂಭಕ್ಕೆ ವಿಶೇಷ ಆಹ್ವಾನಿತರು ಯಾರು?

'ಟಗರು' ಟೀಸರ್ ಬಿಡುಗಡೆ ಸಮಾರಂಭಕ್ಕೆ ವಿಶೇಷ ಆಹ್ವಾನಿತರು ಯಾರು?

Posted By:
Subscribe to Filmibeat Kannada

ದುನಿಯಾ ಸೂರಿ ನಿರ್ದೇಶನದಲ್ಲಿ ತಯಾರಾಗಿರುವ 'ಟಗರು' ಚಿತ್ರದ ಟೀಸರ್ ಬಿಡುಗಡೆ ಸಮಾರಂಭಕ್ಕೆ ವೇದಿಕೆ ಸಜ್ಜಾಗಿದ್ದು, ಅತಿಥಿಗಳ ಪಟ್ಟಿ ಸಿದ್ಧವಾಗಿದೆ.

ನವೆಂಬರ್ 7 ರಂದು ಬೆಂಗಳೂರಿನ ಟೌನ್ ಹಾಲ್ ನಲ್ಲಿ 'ಟಗರು' ಟೀಸರ್ ರಿಲೀಸ್ ಕಾರ್ಯಕ್ರಮ ನೆರವೇರಲಿದ್ದು, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರೊಬ್ಬರು ಶಿವಣ್ಣನ ಚಿತ್ರದ ಟೀಸರ್ ರಿಲೀಸ್ ಮಾಡಲಿದ್ದಾರೆ.

ಹಾಗಿದ್ರೆ, ಆ ಆಟಗಾರ ಯಾರು? ಈ ಕ್ರಿಕೆಟ್ ಆಟಗಾರನ ಜೊತೆ ಬೇರೆ ಯಾವ ಸಿನಿಮಾ ನಟರು ಭಾಗಿಯಾಗಲಿದ್ದಾರೆ ಎಂಬುದನ್ನ ಮುಂದೆ ನೀಡಲಾಗಿದೆ ಓದಿ....

ಜಿ.ಆರ್ ವಿಶ್ವನಾಥ್ ಅತಿಥಿ

ಭಾರತ ಹಾಗೂ ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ಆಟಗಾರ ಜಿ.ಆರ್ ವಿಶ್ವನಾಥ್ ಅವರು ಶಿವಣ್ಣ ಅಭಿನಯದ 'ಟಗರು' ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ.

'ಟಗರು' ಟೀಸರ್ ರಿಲೀಸ್ ಮಾಡಲಿದ್ದಾರೆ ಶಿವಣ್ಣನ ಅಭಿಮಾನಿಗಳು!

ಡಿಕೆಶಿ-ಸಿಂಪಲ್ ಸ್ಟಾರ್ ಆಗಮನ

ಇನ್ನು ಹ್ಯಾಟ್ರಿಕ್ ಹೀರೋ ಅಭಿಮಾನಿಗಳು ಅಯೋಜಿಸುತ್ತಿರುವ ಈ ವಿಶೇಷ ಕಾಯಕ್ರಮದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಸಚಿವ ಡಿ.ಕೆ ಶಿವಕುಮಾರ್ ಕೂಡ ಭಾಗಿಯಾಗುತ್ತಿದ್ದಾರೆ.

ಅಪ್ಪು ಮತ್ತು ರಾಘಣ್ಣ ಆಗಮನ

'ಟಗರು' ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಕೂಡ ಆಗಮಿಸಲಿದ್ದಾರೆ.

ಶಿವರಾಜ್ ಕುಮಾರ್ ಅಭಿನಯದ ಮುಂದಿನ ಚಿತ್ರದ ಹೆಸರು 'ಎಸ್.ಆರ್.ಕೆ'

'ಟಗರು' ಚಿತ್ರತಂಡ ಭಾಗಿ

'ಟಗರು' ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಧನಂಜಯ್, ವಸಿಷ್ಠ ಸಿಂಹ, ಮಾನ್ವಿತ ಹರೀಶ್ ಮತ್ತು ನಿರ್ದೇಶಕ ದುನಿಯಾ ಸೂರಿ ಸೇರಿದಂತೆ ತಂತ್ರಜ್ಞರು ಮತ್ತು ಕಲಾವಿದರು ಇರಲಿದ್ದಾರೆ.

'ಮಫ್ತಿ' ಟ್ರೈಲರ್ ಗೆ ಸ್ಟಾರ್ ನಟರು ಫಿದಾ.! ಯಾರು ಏನಂದ್ರು?

English summary
Former Indian Cricket Player GR Vishwanath, will launch the trailer of Shivarajkumar new film Tagaru on November 7.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada