»   » ಪ್ರಧಾನಿ ಮೋದಿ ಜೊತೆಗೆ ರಿಕ್ಕಿ ಕೇಜ್ ದಂಪತಿ ಸೆಲ್ಫಿ ಚಿತ್ರ

ಪ್ರಧಾನಿ ಮೋದಿ ಜೊತೆಗೆ ರಿಕ್ಕಿ ಕೇಜ್ ದಂಪತಿ ಸೆಲ್ಫಿ ಚಿತ್ರ

Posted By:
Subscribe to Filmibeat Kannada

ಈ ಮೊದಲು ರಿಕ್ಕಿ ಕೇಜ್ ಅವರು ತಮ್ಮ ಕಲೆ ಹಾಗೂ ಶ್ರಮವನ್ನು ಭಾರತ ಸರ್ಕಾರ ಪ್ರೋತ್ಸಾಹ ನೀಡದೆ ಕಡೆಗಣಿಸುತ್ತಿದೆ ಎಂದು ಕೇಂದ್ರ ಸರ್ಕಾರದ ಬಗ್ಗೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದರು.

ಬೆಂಗಳೂರು ಮೂಲದ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರು 57ನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದವರು.

ಇದು ನಮ್ಮ ಕನ್ನಡದವರಿಗೆ ಹೆಮ್ಮೆ ತರುವ ವಿಷಯವೇ ಯಾಕೆಂದರೆ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಅವರು ಸ್ಯಾಂಡಲ್ ವುಡ್ ನಟ-ನಿರ್ದೇಶಕ ರಮೇಶ್ ಅರವಿಂದ್ ಅವರ ಎರಡು ಕನ್ನಡ ಚಿತ್ರಗಳಾದ 'ಆಕ್ಸಿಡೆಂಟ್', ಹಾಗೂ 'ವೆಂಕಟ ಇನ್ ಸಂಕಟ' ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.[ಬೆಂಗಳೂರಿನ ಸಂಗೀತಗಾರ ರಿಕ್ಕಿ ಕೇಜ್ ಗೆ ಗ್ರ್ಯಾಮಿ ಪ್ರಶಸ್ತಿ]

 ricky kej

ಇದೀಗ ಅದರ ಫಲಶ್ರುತಿಯಾಗಿ ಅತ್ಯಂತ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿರುವ ರಿಕ್ಕಿ ಕೇಜ್ ಅವರನ್ನು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಮಾಡಿ ಮಾತಾಡುವ ಮೂಲಕ ರಿಕ್ಕಿ ಅವರ ಮುಂದಿನ ಪ್ರಾಜೆಕ್ಟ್ ಗಳಿಗೆ ಶುಭಹಾರೈಸಿದ್ದಾರೆ.ಬೆಂಗಳೂರು ಮೂಲದ ಕನ್ನಡಿಗ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರು ತಮ್ಮ ಪತ್ನಿ ವರ್ಷ ಅವರೊಂದಿಗೆ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡುವ ಮೂಲಕ ಅವರಿಂದ ಶುಭಹಾರೈಕೆಗಳನ್ನು ಪಡೆದುಕೊಂಡಿದ್ದಾರೆ.[ಸಂಗೀತಗಾರ ರಿಕ್ಕಿಗೆ ಮೋದಿ ಸರ್ಕಾರದ ಮೇಲೇಕೆ ಬೇಸರ]

ಇನ್ನು ಸರಳ ವ್ಯಕ್ತಿತ್ವವನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಿಕ್ಕಿ ಕೇಜ್ ಅವರ ಸಾಧನೆಗೆ ಹರ್ಷ ವ್ಯಕ್ತಪಡಿಸುವುದರೊಂದಿಗೆ ಅವರ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆಯೂ ಕೆಲ ಹೊತ್ತು ಚರ್ಚೆ ನಡೆಸಿದರು.

ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಸಂಭ್ರಮದಲ್ಲಿ ರಿಕ್ಕಿ ಅವರು ತಮ್ಮ ಸಂತಸವನ್ನು ಹಂಚಿಕೊಳ್ಳುತ್ತ, "ನಾನು ಯಾವಾಗಲೂ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೌರವಿಸುತ್ತೇನೆ ಜೊತೆಗೆ ತುಂಬಾ ನಂಬುತ್ತೇನೆ ಕೂಡ.[ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿಗೆ 25 ಲಕ್ಷ ರೂಪಾಯಿ ಬಹುಮಾನ]

ಆದರೆ ಅವರನ್ನು ಭೇಟಿ ಮಾಡಿದ ನಂತರ ಸಂಪೂರ್ಣವಾಗಿ ಅವರ ಸರಳ ವ್ಯಕ್ತಿತ್ವಕ್ಕೆ ಮನಸೋತು ಅವರ ನಡೆನುಡಿಗೆ ಸ್ಪೂರ್ತಿಯಾಗಿದ್ದೇನೆ, ಮೋದಿ ಅವರ ಸ್ಪೂರ್ತಿ ತುಂಬುವ ಮಾತುಗಳಿಂದ ನಾನು ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ಇನ್ನೂ ಎತ್ತರಕ್ಕೇರಬಲ್ಲೆ ಎಂದು ರಿಕ್ಕಿ ಕೇಜ್ ನುಡಿದಿದ್ದಾರೆ.

ಭಾರತದ ರಿಕ್ಕಿ ಹಾಗೂ ದಕ್ಷಿಣ ಆಫ್ರಿಕಾದ ಕೊಳಲುವಾದಕ ವೊಟರ್ ಕೆಲ್ಲರ್ ಮನ್ ಅವರ ಹೊಸ ಆಲ್ಬಂ 'ವಿಂಡ್ಸ್ ಆಫ್ ಸಂಸಾರ' ಗ್ರ್ಯಾಮಿ ಪ್ರಶಸ್ತಿ ಪಡೆದುಕೊಂಡಿತ್ತು.

Wow! What an excellent morning! Spent about 45 minutes with our Prime Minister Narendra Modi at his office. He...

Posted by Ricky Kej on Monday, September 7, 2015

ಸುಮಾರು 5 ವರ್ಷಗಳ ನಂತರ ಯುವ ಪ್ರತಿಭೆ ರಿಕ್ಕಿ ಕೇಜ್ ಈ ಪ್ರಶಸ್ತಿ ಗೆದ್ದುಕೊಂಡಿದ್ದು, ಪ್ರಶಸ್ತಿ ಗೆದ್ದುಕೊಂಡಿದ್ದರ ಪರವಾಗಿ ರಿಕ್ಕಿ ಅವರಿಗೆ ಸೌತ್ ಆಫ್ರಿಕಾದ ಕಲೆ ಮತ್ತು ಸಂಸ್ಕೃತಿ ಸಚಿವರು ಕೂಡ ಅಭಿನಂದನೆ ಸಲ್ಲಿಸಿದ್ದಾರೆ.[ಗ್ರ್ಯಾಮಿ ಪ್ರಶಸ್ತಿ ರಿಕ್ಕಿ ಕೇಜ್, ಕೀರ್ತಿ ನಾಮಿನೇಟ್ ]

ಭಾರತ ಹಾಗೂ ಆಫ್ರಿಕಾ ಸಂಗೀತಗಾರರ ಜೊತೆಗಾರಿಕೆಯಲ್ಲಿ ಮೂಡಿಬಂದಿರುವ 'ವಿಂಡ್ಸ್ ಆಫ್ ಸಂಸಾರ್' ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ನೆಲ್ಸನ್ ಮಂಡೇಲಾ ಅವರ ಕುರಿತಾದ ಫ್ಯೂಶನ್ ಹಾಡುಗಳನ್ನು ಒಳಗೊಂಡಿದೆ. ಅಲ್ಲದೇ ಪ್ರಸ್ತುತ ಕಾಲಕ್ಕೆ ಗಾಂಧಿ ಅವರ ತತ್ವಗಳು ಬಹಳ ಅನ್ವಯವಾಗುತ್ತದೆ ಎಂದು ರಿಕ್ಕಿ ತಿಳಿಸಿದ್ದಾರೆ.

ಒಟ್ನಲ್ಲಿ ನಮ್ಮ ಹೆಮ್ಮೆಯ ಕನ್ನಡಿಗ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಅವರಿಗೆ ರಾಜ್ಯ ಸರ್ಕಾರ ಸೇರಿದಂತೆ ಇದೀಗ ಕೇಂದ್ರ ಸರ್ಕಾರ ಕೂಡ ಗೌರವಿಸಿರುವುದು ಕಂಡರೆ ಕಲೆಗೆ ನಮ್ಮ ದೇಶ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತದೆ ಎಂದು ಈ ಮೂಲಕ ತಿಳಿಯುತ್ತದೆ.

English summary
Grammy award winner music director Ricky Kej who has composed music for kannada films like 'Accident', 'Venkata in Sankata' met Prime Minister Narendra Modi Ricky Kej along with his wife Varsha met the Prime Minister in Delhi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada