For Quick Alerts
  ALLOW NOTIFICATIONS  
  For Daily Alerts

  ಜಿಎಸ್ಟಿ ತೆರಿಗೆ ದರ ಇಳಿಕೆ: ಸಿನಿಮಾ ಟಿಕೆಟ್ ಬೆಲೆಯೂ ಕಮ್ಮಿ.!

  |

  ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಜಿಎಸ್ಟಿ ಮಂಡಳಿಯ ಸಭೆ ಇಂದು ನಡೆದಿದ್ದು, ಹಲವು ವಸ್ತುಗಳ ತೆರಿಗೆ ಇಳಿಸಲು ನಿರ್ಧರಿಸಲಾಗಿದೆ. ಇದರಲ್ಲಿ ಸಿನಿಮಾ ಟಿಕೆಟ್ ಕೂಡ ಸೇರಿರುವುದು ಚಿತ್ರಪ್ರೇಮಿಗಳಿಗೆ ಖುಷಿ ಕೊಟ್ಟಿದೆ.

  100 ರೂಪಾಯಿಗಿಂತ ಹೆಚ್ಚು ಬೆಲೆಯ ಟಿಕೆಟ್ ಗಳಿಗೆ ಶೇಕಡಾ 28% ಬದಲು 18% ಜಿಎಸ್ಟಿ ತೆರಿಗೆ ನಿಗದಿಯಾಗಿದೆ. 100 ರೂಪಾಯಿಗಿಂತ ಕಡಿಮೆ ಬೆಲೆಯ ಟಿಕೆಟ್ ಗಳಿಗೆ ಶೇಕಡಾ 18% ಬದಲು 12% ನಿಗದಿಯಾಗಿದೆ.

  ಜಿಎಸ್ಟಿ ತೆರಿಗೆ ದರದಲ್ಲಿ ಭಾರೀ ಇಳಿಕೆ: ಜನಸಾಮಾನ್ಯ ಫುಲ್ ಖುಷ್

  ಇದರಿಂದ ಟಿಕೆಟ್ ಬೆಲೆಯಲ್ಲಿ ಕೊಂಚ ಮಟ್ಟಿಗೆ ವ್ಯತ್ಯಾಸವಾಗಲಿದೆ. ಬಟ್, ಇದು ಯಾವಾಗನಿಂದ ಜಾರಿಗೆ ಬರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

  ಸದ್ಯ, ಕರ್ನಾಟಕದಲ್ಲಿ ಟಿಕೆಟ್ ಬೆಲೆ ಎರಡು ರೀತಿಯಲ್ಲಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 100 ಮತ್ತು 118 ಇದೆ. ಕೆಲವು ಚಿತ್ರಮಂದಿರಗಳಲ್ಲಿ 70 ರಿಂದ 90ರ ವರೆಗೂ ಟಿಕೆಟ್ ಬೆಲೆ ಇದೆ. ಅದೇ ರೀತಿ ಮಲ್ಟಿಪ್ಲೆಕ್ಸ್ ಗಳಲ್ಲಿ 200 ಮತ್ತು 250ರ ವರೆಗೂ ಬೆಲೆ ನಿಗಿದಯಾಗಿದೆ.

  ಹೀಗಾಗಿ, ಟಿಕೆಟ್ ಬೆಲೆಗೆ ತಕ್ಕಂತೆ ಜಿಎಸ್ಟಿ ಜಾರಿಯಾಗಲಿದ್ದು, ಈ ಬೆಲೆಗಳಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಇದರಿಂದ ಚಿತ್ರಪ್ರೇಮಿಗಳಿಗೆ ದೊಡ್ಡ ಗಿಫ್ಟ್ ಅಲ್ಲವಾದರೂ, ಸ್ವಲ್ಪ ಕಮ್ಮಿ ಆಯ್ತು ಎಂದು ಸಮಾಧಾನಪಟ್ಟಿಕೊಳ್ಳಬಹುದು.

  English summary
  Finance Minister Arun Jaitley on the decisions taken in GST Council meet: Movie tickets up to Rs 100 brought down to 12% and above Rs 100 has been brought down to 18% from 28%.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X