twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಬಂದ್ರು ಅಂತ ವೋಟ್ ಬರಲ್ಲ: 'ದಾಸ'ನಿಗೆ ಜಿಟಿ ದೇವೇಗೌಡ ಟಾಂಗ್

    |

    'ಸ್ಟಾರ್ ಗಳು ಬಂದ್ರೆ ಜನ ಸೇರಬಹುದು ಆದ್ರೆ ಅದು ಮತಗಳಾಗಿ ಪರಿವರ್ತನೆ ಆಗಲ್ಲ' ಎನ್ನುವುದು ರಾಜಕೀಯ ತಜ್ಞರ ಅಭಿಪ್ರಾಯ. ಈ ಮಾತು ಹಲವು ಚುನಾವಣೆಯಲ್ಲಿ ಸಾಬೀತು ಕೂಡ ಆಗಿದೆ. ಕೆಲವು ಕಡೆ ಸಿನಿಮಾ ನಟರು ಸ್ಪರ್ಧಿಸಿದರೂ ಗೆದ್ದಿರುವುದು ಅಪರೂಪ.

    ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ದರ್ಶನ್ ಮತ್ತು ಯಶ್ ಅವರಿಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದ್ದು, ಹೋದ ಕಡೆಯಲೆಲ್ಲಾ ಹೆಚ್ಚು ಜನ ಸೇರುತ್ತಿದ್ದಾರೆ, ಇದು ಸಹಜವಾಗಿ ನೋಡುಗರಿಗೆ ಅಚ್ಚರಿ ಉಂಟು ಮಾಡುತ್ತಿದೆ.

    ಪ್ರಚಾರದ ವೇಳೆ ದರ್ಶನ್ ಗೆ ಮಹಿಳಾ ಅಭಿಮಾನಿಯಿಂದ ಸರ್ಪ್ರೈಸ್ಪ್ರಚಾರದ ವೇಳೆ ದರ್ಶನ್ ಗೆ ಮಹಿಳಾ ಅಭಿಮಾನಿಯಿಂದ ಸರ್ಪ್ರೈಸ್

    ದರ್ಶನ್, ಯಶ್ ನೋಡಲು ಬರುವ ಜನ ಸುಮಲತಾ ಅವರಿಗೆ ವೋಟ್ ಹಾಕಿದ್ರೆ ಪಕ್ಕಾ ಗೆಲ್ತಾರೆ ಎಂಬ ನಿರೀಕ್ಷೆ ಇದೆ. ಆದ್ರೆ, ಅದೆಲ್ಲಾ ಆಗದ ಮಾತು, ದರ್ಶನ್ ಬಂದ್ರು ಅಂತ ವೋಟ್ ಹಾಕಲ್ಲ'' ಎಂದು ಸಚಿವ ಜಿಟಿ ದೇವೇಗೌಡ ಹೇಳಿಕೆ ನೀಡಿದ್ದಾರೆ. ಹಾಗಿದ್ರೆ, ಜಿಟಿಡಿ ದರ್ಶನ್ ಬಗ್ಗೆ ಬೇರೇನು ಹೇಳಿದ್ರು? ಮುಂದೆ ಓದಿ....

    ಜನ ಸೇರ್ತಾರೆ, ವೋಟ್ ಹಾಕಲ್ಲ

    ಜನ ಸೇರ್ತಾರೆ, ವೋಟ್ ಹಾಕಲ್ಲ

    ''ದರ್ಶನ್ ಮತ್ತು ಯಶ್ ಬಂದ್ರು ಅಂತ ಜನ ಸೇರ್ತಾರೆ ಅಷ್ಟೇ. ಆದ್ರೆ, ಯಾರೂ ವೋಟ್ ಹಾಕಲ್ಲ. ಜನ ಅಭಿವೃದ್ದಿ ನೋಡಿ ಮತ ಹಾಕ್ತಾರೆ. ಸಿನಿಮಾ ನೋಡಿ ಅಥವಾ ನಟರನ್ನ ನೋಡಿ ವೋಟ್ ಹಾಕಲ್ಲ'' ಎಂದು ಸಚಿವ ಜಿಟಿ ದೇವೇಗೌಡ ಮಳವಳ್ಳಿಯಲ್ಲಿ ಹೇಳಿದ್ದಾರೆ.

    ದರ್ಶನ್ ಪ್ರಚಾರ ಮಾಡುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಖಿಲ್ ಹೇಳಿದ್ದು ಹೀಗೆ ದರ್ಶನ್ ಪ್ರಚಾರ ಮಾಡುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಖಿಲ್ ಹೇಳಿದ್ದು ಹೀಗೆ

    ಸಿದ್ದರಾಮಯ್ಯ ಪರ ಪ್ರಚಾರ ಮಾಡಿದ್ರು ಗೆದ್ದಿಲ್ಲ

    ಸಿದ್ದರಾಮಯ್ಯ ಪರ ಪ್ರಚಾರ ಮಾಡಿದ್ರು ಗೆದ್ದಿಲ್ಲ

    ದರ್ಶನ್ ಅವರು ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಪ್ರಚಾರ ಮಾಡಿದ್ದರು. ಆದ್ರೆ, ದರ್ಶನ್ ಪ್ರಚಾರ ಮಾಡಿದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಾಯಿತು. ಈ ಘಟನೆಯನ್ನ ಜಿಟಿಡಿ ಮಾಧ್ಯಮಗಳ ಮುಂದೆ ಪ್ರಸ್ತಾಪಿಸಿದ್ದಾರೆ.

    'ಡಿ ಬಾಸ್' ಒಬ್ಬರೇ ಯಾಕೆ ಸಿಎಂಗೆ ಟಾರ್ಗೆಟ್, ಅದರ ಹಿಂದಿರುವ ಕಾರಣಗಳೇ ಬೇರೆ.!'ಡಿ ಬಾಸ್' ಒಬ್ಬರೇ ಯಾಕೆ ಸಿಎಂಗೆ ಟಾರ್ಗೆಟ್, ಅದರ ಹಿಂದಿರುವ ಕಾರಣಗಳೇ ಬೇರೆ.!

    ಸ್ಟಾರ್ ಗಳಿಗೆ ಭರ್ಜರಿ ರೆಸ್ಪಾನ್ಸ್

    ಸ್ಟಾರ್ ಗಳಿಗೆ ಭರ್ಜರಿ ರೆಸ್ಪಾನ್ಸ್

    ಅಂದ್ಹಾಗೆ, ನಟ ದರ್ಶನ್ ಮತ್ತು ಯಶ್ ಇಬ್ಬರಿಗೂ ಮಂಡ್ಯದಲ್ಲಿ ಅತಿ ಹೆಚ್ಚು ಅಭಿಮಾನ ಬಳಗ ಇದೆ. ಮೂಲತಃ ಮೈಸೂರಿನವರಾದ ದರ್ಶನ್ ಮತ್ತು ಮಂಡ್ಯದವರಾದ ಯಶ್ ಗೆ ಇಲ್ಲಿ ಜನ ಬೆಂಬಲ ಹೆಚ್ಚಿದೆ. ಹಾಗಾಗಿಯೇ ಜೋಡೆತ್ತುಗಳು ಹೋದ ಕಡೆ ಹೆಚ್ಚು ಜನ ಸೇರುತ್ತಿದ್ದಾರೆ. ಈ ಜನಬಲ ನೋಡಿ ಸಹಜವಾಗಿ ವಿರೋಧ ಪಕ್ಷಗಳಲ್ಲಿ ಆತಂಕ ಮೂಡುತ್ತಿದೆ.

    ನಮ್ಮ ಜೋಡೆತ್ತುಗಳ ಎದುರು ಯಾವ ಎತ್ತುಗಳು ಗೆಲ್ಲುತ್ತೆ ನೋಡೋಣ: ಸುಮಲತಾನಮ್ಮ ಜೋಡೆತ್ತುಗಳ ಎದುರು ಯಾವ ಎತ್ತುಗಳು ಗೆಲ್ಲುತ್ತೆ ನೋಡೋಣ: ಸುಮಲತಾ

    16ರ ವರೆಗೂ ನಾನ್ ಸ್ಟಾಪ್ ಪ್ರಚಾರ

    16ರ ವರೆಗೂ ನಾನ್ ಸ್ಟಾಪ್ ಪ್ರಚಾರ

    ನಿನ್ನೆಯಿಂದ ಅಬ್ಬರದ ಪ್ರಚಾರ ಶುರು ಮಾಡಿರುವ ಯಶ್ ಮತ್ತು ದರ್ಶನ್ ಏಪ್ರಿಲ್ 16ರ ವರೆಗೂ ನಾನ್ ಸ್ಟಾಪ್ ಪ್ರಚಾರ ಮಾಡಲಿದ್ದಾರೆ. ಇಬ್ಬರು ಪ್ರತ್ಯೇಕವಾಗಿ ಇಡೀ ಮಂಡ್ಯ ಜಿಲ್ಲೆಯಲ್ಲಿ ಸುಮಲತಾ ಪರ ಮತಯಾಚನೆ ಮಾಡಲಿದ್ದಾರೆ.

    English summary
    Higher Education Minister GT Devegowda spoke about darshan campaign in mandya.
    Tuesday, April 2, 2019, 15:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X