India
  For Quick Alerts
  ALLOW NOTIFICATIONS  
  For Daily Alerts

  ಗುಬ್ಬಿ ವೀರಣ್ಣ ಪುತ್ರಿ, ಹಿರಿಯ ನಟಿ ಹೇಮಲತಾ ನಿಧನ

  |

  ಗುಬ್ಬಿ ವೀರಣ್ಣ ಮೊಮ್ಮಗಳು, ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಲತಾ ಇಂದು ನಿಧನಹೊಂದಿದ್ದಾರೆ. ಅವರಿಗೆ 75 ವರ್ಷಕ್ಕೂ ಹೆಚ್ಚು ವಯಸ್ಸಾಗಿತ್ತು ಎನ್ನಲಾಗಿದೆ.

  ಹೇಮಲತಾ ಅವರು ಡಾ ರಾಜ್‌ಕುಮಾರ್, ಉದಯ್ ಕುಮಾರ್ ಸೇರಿದಂತೆ ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ. ಗುಬ್ಬಿ ವೀರಣ್ಣ ಅವರ ಪುತ್ರಿಯಾಗಿದ್ದ ಹೇಮಲತಾ ದೊಡ್ಡಬಳ್ಳಾಪುರದ ಸೋಮೇಶ್ವರ ಬಡವಾಣೆಯಲ್ಲಿ ವಾಸವಾಗಿದ್ದರು.

  ಶುಕ್ರವಾರ ಅವರಿಗೆ ಲಘು ಹೃದಯಾಘಾತವಾಗಿತ್ತು, ಕೂಡಲೇ ಅವರನ್ನು ದೊಡ್ಡಬಳ್ಳಾಪುರ ಬಳಿಯ ಬಾಶೆಟ್ಟಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಶನಿವಾರ ಬೆಳಿಗ್ಗೆ ನಿಧನರಾದರು. ಹೇಮಲತಾ ಅವರಿಗೆ ಶಾಮ, ಜಯೇಶ್ ಎಂಬ ಗಂಡು ಮಕ್ಕಳು, ಶಿಲ್ಪಾ ಹೆಸರಿನ ಓರ್ವ ಪುತ್ರಿ ಇದ್ದರು.

  'ಎಮ್ಮೆ ತಮ್ಮಣ್ಣ', 'ಕಲಾವತಿ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಹೇಮಲತಾ ನಟಿಸಿದ್ದಾರೆ. ಅವರ ತಂದೆ ಗುಬ್ಬಿ ವೀರಣ್ಣ ಜೊತೆಗೆ ಕೆಲವು ನಾಟಕಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಜೊತೆಗೆ ಅತ್ಯುತ್ತಮ ನೃತ್ಯಗಾರ್ತಿಯೂ ಆಗಿದ್ದರು ಹೇಮಲತಾ.

  ಸಂಬಂಧಿಗಳಿಗೆ ಪ್ರೀತಿಯ ಲತಾ ಅಕ್ಕ ಆಗಿದ್ದ ಹೇಮಲತಾ, ಕಾಲವಾದ ಗುಬ್ಬಿ ವೀರಣ್ಣ ಅವರ ಕೊನೆಯ ಮಗಳಾಗಿದ್ದರು. ಹೇಮಲತಾ ನಿಧನದಿಂದ ಗುಬ್ಬಿ ವೀರಣ್ಣರ ಎಲ್ಲ ಮಕ್ಕಳು ಕಾಲವಾದಂತಾಗಿದೆ.

  ಹೇಮಲತಾ ಅವರ ಹತ್ತಿರದ ಸಂಬಂಧಿ ಸುಶ್ಮಾ ವೀರ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಆಂಟಿಯನ್ನು ಬಹಳ ಮಿಸ್ ಮಾಡಿಕೊಳ್ಳುವುದಾಗಿ ಬರೆದುಕೊಂಡಿದ್ದಾರೆ. ಆಕೆ ದೊಡ್ಡ ಹೃದಯದ, ಸದಾ ಸಕ್ರಿಯವಾಗಿದ್ದ ಹೆಣ್ಣಾಗಿದ್ದರು. ನನ್ನ ಕಷ್ಟದ ಸಮಯದಲ್ಲಿ ನನ್ನ ಬೆನ್ನಿಗೆ ನಿಂತು, ನನ್ನ ವ್ಯಕ್ತಿತ್ವ ರೂಪಿಸಿ, ನಾನು ಇಂದೇನಾಗಿದ್ದೇನೊ ಅದಕ್ಕೆ ಕಾರಣ ಅವರಾಗಿದ್ದಾರೆ'' ಎಂದು ಸುಶ್ಮಾ ವೀರ್ ಬರೆದುಕೊಂಡಿದ್ದಾರೆ. ಜೊತೆಗೆ ಹೇಮಲತಾರ ಕೆಲವು ಅಪರೂಪದ ಚಿತ್ರಗಳನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  English summary
  Gubbi Veeranna's daughter Hemalatha passed away. She was also actress. She acted in some movies with Dr Rajkumar and Uday Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X