»   » ಆಸ್ಕರ್ ರೇಸಿಂದ ಕನ್ನಡದ ಲೂಸಿಯಾ ಔಟ್

ಆಸ್ಕರ್ ರೇಸಿಂದ ಕನ್ನಡದ ಲೂಸಿಯಾ ಔಟ್

Posted By:
Subscribe to Filmibeat Kannada

ಸಿನಿಮಾ ರಂಗದ ಅತ್ಯುನ್ನತ ಗೌರವ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಗುಜರಾತಿ ಸಿನಿಮಾ ದಿ ಗುಡ್ ರೋಡ್ ನಾಮನಿರ್ದೇಶನಗೊಂಡಿದೆ. ಕನ್ನಡದ ಲೂಸಿಯಾ, ಹಿಂದಿಯ ದಿ ಲಂಚ್ ಬಾಕ್ಸ್ ಮತ್ತು ಭಾಗ್ ಮಿಲ್ಕಾ ಸಿಂಗ್ ಭಾಗ್ ಚಿತ್ರಗಳು ರೇಸ್ ನಿಂದ ಹೊರಬಿದ್ದಿವೆ.

ಆಸ್ಕರ್ ಸ್ಪರ್ಧೆಗೆ ದಿ ಲಂಚ್ ಬಾಕ್ಸ್ ಮತ್ತು ದಿ ಗುಡ್ ರೋಡ್ ನಡುವೆ ತೀವ್ರ ಪೈಪೋಟಿ ಎದುರಾಗಿತ್ತು. ಅಂತಿಮವಾಗಿ ಸಮಿತಿಯು ಸರ್ವಸಮ್ಮತವಾಗಿ ದಿ ಗುಡ್ ರೋಡ್ ಚಿತ್ರವನ್ನು ಆಯ್ಕೆ ಮಾಡಿತು ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಗೌತಮ್ ಘೋಶ್ ಹೇಳಿದ್ದಾರೆ.

Lucia

ದಿ ಗುಡ್ ರೋಡ್ ಗ್ಯಾನ್ ಕೋರೆ ನಿರ್ದೇಶನದ ಮೊದಲ ಚಿತ್ರ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಕಾರ್ಪೊರೇಷನ್ (ಎನ್‌ಎಫ್‌ಡಿಸಿ) ಈ ಚಿತ್ರವನ್ನು ನಿರ್ಮಿಸಿದೆ. ಆಸ್ಕರ್ ಪ್ರಶಸ್ತಿಗೆ ಭಾರತವನ್ನು ಪ್ರತಿನಿಧಿಸಲಿರುವ ಮೊದಲ ಗುಜರಾತಿ ಚಿತ್ರ ಎಂಬ ಹೆಗ್ಗಳಿಕೆಗೆ ಗುಡ್ ರೋಡ್ ಪಾತ್ರವಾಗಿದೆ.

ಸೊನಾಲಿ ಕುಲಕರ್ಣಿ ಮತ್ತು ಅಜೆಯ್ ಗೆಹಿ ಗುಡ್ ರೋಡ್ ಚಿತ್ರದ ಮುಖ್ಯಪಾತ್ರ ವರ್ಗದಲ್ಲಿದ್ದಾರೆ. ಆಸ್ಕರ್ ವಿಜೇತ ರೆಸೂಲ್ ಪೂಕುಟ್ಟಿ ಅವರು ಈ ಚಿತ್ರಕ್ಕೆ ಧ್ವನಿ ವಿನ್ಯಾಸ ಮಾಡಿದ್ದಾರೆ.

ಕನ್ನಡದ ಲೂಸಿಯಾ, ಹಿಂದಿಯ ದಿ ಲಂಚ್ ಬಾಕ್ಸ್, ಭಾಗ್ ಮಿಲ್ಕಾ ಸಿಂಗ್ ಭಾಗ್, ಇಂಗ್ಲಿಷ್ ವಿಂಗ್ಲಿಷ್, ಮಲೆಯಾಳಂನ ಸೆಲ್ಯುಲಾಯ್ಡ್ ಹಾಗೂ ಕಮಲ್ ಹಾಸನ್ ರ ವಿಶ್ವರೂಪಂ ಚಿತ್ರಗಳು ಆಸ್ಕರ್ ರೇಸ್ ನಿಂದ ಹೊರಬಿದ್ದಿವೆ.

2014ರ ಆಸ್ಕರ್ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಭಾರತದ 22 ಚಿತ್ರಗಳು ಪೈಪೋಟಿ ನಡೆಸಿದ್ದವು. ಆದರೆ, 19 ಸದಸ್ಯರ ತೀರ್ಪುಗಾರರ ಸಮಿತಿ ಗುಜರಾತಿ ಚಿತ್ರವನ್ನು ಆಯ್ಕೆ ಮಾಡಿದೆ.

English summary
The Good Road a Gujarati language film, has been chosen as India’s entry to the 2014 Oscars, stealing attention from a critically acclaimed love story that was screened at the Cannes film festival this year. recently released Kannada film Lucia found places in among 20 films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada