»   » ಸಿನಿಮಾ ಸ್ಟಾರ್ ಗಳಿಗೂ ಭಯ ಹುಟ್ಟಿಸಿದ ಗುಳ್ಟು

ಸಿನಿಮಾ ಸ್ಟಾರ್ ಗಳಿಗೂ ಭಯ ಹುಟ್ಟಿಸಿದ ಗುಳ್ಟು

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗದಲ್ಲಿ ಮಾಸ್, ಕ್ಲಾಸ್ ಹಾಗೂ ಎಂಟರ್ಟೈನ್ಮೆಂಟ್ ಸಿನಿಮಾಗಳ ಜೊತೆಯಲ್ಲಿ ಪ್ರಯೋಗಾತ್ಮಕ ಚಿತ್ರಗಳು ಹೆಚ್ಚಾಗುತ್ತಿವೆ. ಪ್ರೇಕ್ಷಕರಿಗೆ ಗೊತ್ತಿಲ್ಲದ ವಿಚಾರಗಳು ಹಾಗೂ ಕುತೂಹಲ ಮೂಡಿಸುವಂತಹ ಸಿನಿಮಾಗಳನ್ನ ನಿರ್ದೇಶನ ಮಾಡಬೇಕು ಎನ್ನುವುದು ಡೈರೆಕ್ಟರ್ ಗಳ ಅಭಿಪ್ರಾಯ ಮತ್ತು ಆಲೋಚನೆ. ವಿಭಿನ್ನ ಸಿನಿಮಾಗಳ ಮಧ್ಯೆ ಇದ್ಯಾವ ಸಿನಿಮಾನಪ್ಪಾ ಬೇರೆಯದ್ದೇ ಸ್ಟೈಲ್ ನಲ್ಲಿದೆ ಎನ್ನುವ ಫೀಲಿಂಗ್ ಕೊಡುತ್ತಿರುವ ಸಿನಿಮಾ ಗುಳ್ಟು.

ಗುಳ್ಟು ಸಿನಿಮಾ ಸೆಟ್ಟೇರುವ ಮುಂಚೆಯೇ ಟೀಸರ್ ನಿಂದ ಪ್ರೇಕ್ಷಕರ ಗಮನವನ್ನ ತನ್ನತ್ತ ಸೆಳೆದ ಸಿನಿಮಾ. ನಂತರ ಟೈಟಲ್ ನಿಂದಲೇ ಪ್ರೇಕ್ಷಕರ ತಲೆಗೆ ಹುಳಬಿಟ್ಟ ನಿರ್ದೇಶಕರು ಚಿತ್ರದ ಒಂದೊಂದು ವಿಚಾರವನ್ನ ಪ್ರೇಕ್ಷಕರಿಗೆ ತಲುಪಿಸುತ್ತಾ ಸಿನಿಮಾದ ಬಗ್ಗೆ ಮತ್ತಷ್ಟು ಕೌತುಕವನ್ನ ಹೆಚ್ಚು ಮಾಡಿದ್ದಾರೆ.

'ಗುಳ್ಟು' ಆಗಮನಕ್ಕೆ ದಿನಾಂಕ ನಿಗದಿ.!

ಸಿನಿಮಾ ಟ್ರೇಲರ್ ಯಾವಾಗ ಬಿಡುಗಡೆ ಆಗುತ್ತೆ ಎಂದು ಕಾದಿದ್ದ ಪ್ರೇಕ್ಷಕರ ಮುಂದೆ ಗುಳ್ಟು ಮೊದಲ ಟ್ರೇಲರ್ ರಿಲೀಸ್ ಆಗಿದೆ. ಪ್ರೇಕ್ಷಕರನ್ನ ಆಕರ್ಷಣೆ ಮಾಡುವುದರ ಜೊತೆಯಲ್ಲಿ ಕನ್ನಡ ಸಿನಿಮಾ ಸ್ಟಾರ್ ಗಳನ್ನ ಹೆದರಿಸಿದ್ದಾನೆ ಈ ಗುಳ್ಟು. ಗುಳ್ಟು ಚಿತ್ರದ ಟ್ರೇಲರ್ ನೋಡಿದ ಸ್ಟಾರ್ ಗಳು ಹೇಳಿದ್ದೇನು? ಗುಳ್ಟು ಎಂದರೆ ಯಾರು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಗುಳ್ಟು ಬಗ್ಗೆ ತಲೆ ಕೆಡಿಸಿಕೊಂಡ ಸ್ಟಾರ್ಸ್

ಗುಳ್ಟು ಕನ್ನಡ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ಸಿನಿಮಾ. ಸಾಮಾನ್ಯ ಪ್ರೇಕ್ಷಕರಷ್ಟೇ ಅಲ್ಲದೆ ಕನ್ನಡ ಸ್ಟಾರ್ ಗಳು ಕೂಡ ಗುಳ್ಟು ಟ್ರೇಲರ್ ಮತ್ತು ಟೀಸರ್ ನೋಡಿ ಫಿದಾ ಆಗಿದ್ದಾರೆ.

ಕಿರಿಕ್ ಜೋಡಿ ಮೆಚ್ಚಿದ ಗುಳ್ಟು

ಗುಳ್ಟು ಸಿನಿಮಾದ ಟ್ರೇಲರ್ ಇತ್ತೀಚಿಗಷ್ಟೆ ಬಿಡುಗಡೆ ಆಗಿದೆ. ಟ್ರೇಲರ್ ನೋಡಿರುವ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ ಸಿನಿಮಾತಂಡಕ್ಕೆ ಶುಭಾಶಯ ಕೋರಿದ್ದಾರೆ.

ಹೊಸ ರೀತಿಯ ಸಿನಿಮಾ ಗುಳ್ಟು

ಗುಳ್ಟು ಆನ್‌ಲೈನ್‌ ಕ್ರೈಂ, ಲವ್‌, ಕಾಮಿಡಿ, ಥ್ರಿಲ್ಲಿಂಗ್ ಅಂಶಗಳನ್ನ ಒಳಗೊಂಡಿರುವ ಸಿನಿಮಾ. ಆದರೆ ಟ್ರೇಲರ್ ನೋಡಿದಾಗ ಕ್ರೈಂ-ಥ್ರಿಲ್ಲರ್ ಕಥೆಯನ್ನ ಬೇರೆ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ ಎನ್ನುವುದು ತಿಳಿಯುತ್ತದೆ. ನಿರ್ದೇಶಕ ಹೇಮಂತ್ ರಾವ್ 'ಕ್ರೈಂ ಗೆ ಹೊಸ ಮುಖವಿದೆ ಹಾಗೇ ಥ್ರಿಲ್ಲಿಂಗ್ ಆಗಿದೆ' ಎಂದಿದ್ದಾರೆ.

ಗಮನ ಸೆಳೆಯುವ ಟ್ರೇಲರ್

ಗುಳ್ಟು ಟ್ರೇಲರ್ ನೋಡಿದ ಪ್ರತಿಯೊಬ್ಬರು ಚಿತ್ರದಲ್ಲಿ ಸಂಥಿಂಗ್ ಸ್ಪೆಷಲ್ ಇದೆ ಎನ್ನುವುದನ್ನ ತಿಳಿಸುತ್ತಾರೆ. ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಹಾಗೂ ನಟ ನಿರೂಪ್ ಬಂಡಾರಿ ಕೂಡ ಗುಳ್ಟು ಟ್ರೇಲರ್ ಗೆ ಫಿದಾ ಆಗಿದ್ದಾರೆ.

ಗುಳ್ಟು ಬಗ್ಗೆ ಡಾಲಿಗೂ ಕುತೂಹಲ

ಕನ್ನಡ ಸಿನಿಮಾರಂಗದ ಪ್ರತಿಯೊಬ್ಬರನ್ನೂ ಆಕರ್ಷಣೆ ಮಾಡುತ್ತಿರುವ ಗುಳ್ಟು ಸಿನಿಮಾದ ಟ್ರೇಲರ್ ಅನ್ನು ಡಾಲಿ ಧನಂಜಯ ಕೂಡ ಮೆಚ್ಚಿಕೊಂಡಿದ್ದಾರೆ. ತಮ್ಮ ಟ್ವಿಟ್ಟರ್ ನಲ್ಲಿ ಚಿತ್ರದ ಬಗ್ಗೆ ಬರೆದು ಟ್ರೇಲರ್ ಅನ್ನು ಟ್ವಿಟ್ ಮಾಡಿದ್ದಾರೆ.

ಗುಳ್ಟು ಬಗ್ಗೆ ಮಾಹಿತಿ

ಗುಳ್ಟು, ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಸಿನಿಮಾ ಪ್ರಶಾಂತ್ ರೆಡ್ಡಿ ಹಾಗೂ ದೇವರಾಜ್ ಆರ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಆನ್‌ಲೈನ್‌ ಕ್ರೈಂ, ಲವ್‌, ಕಾಮಿಡಿ, ಥ್ರಿಲ್ಲಿಂಗ್ ಅಂಶಗಳು ಸಿನಿಮಾದಲ್ಲಿವೆ. ನವೀನ್‌ ಶಂಕರ್ ಹಾಗೂ ಸೋನು ಗೌಡ ಚಿತ್ರದಲ್ಲಿ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ಅವಿನಾಶ್ ,ರಂಗಾಯಣ ರಘು, ಲೂಸಿಯಾ ಪವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ಗುಳ್ಟು' ಯಾರು? ಏನು? ಎನ್ನುವುದನ್ನ ತಿಳಿಯಬೇಕು ಎಂದಾದರೆ ಸಿನಿಮಾವನ್ನು ನೋಡಲೇಬೇಕು ಎನ್ನುತ್ತದೆ ಚಿತ್ರತಂಡ.

English summary
Kannada Gultoo movie trailer was released, kannada film stars Rakshith shetty, Dhananjaya, anup bandari, Rashmika mandanna liked the gultoo trailer, sonu gowda and Naveen Shankar acting in movie Janardhan Chikkanna directing the Gultoo film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X